ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾನಪದ ಲೋಕದಲ್ಲಿ ವಿಶ್ವ ಜಾನಪದ ದಿನಾಚರಣೆ ಸಂಭ್ರಮ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಆಗಸ್ಟ್ 24: ಜನಪದರ ತವರು, ಜಾನಪದ ಕಾಶಿ ಎಂಬ ಹೆಗ್ಗಳಿಕೆಯ ಜಾನಪದ ಲೋಕದಲ್ಲಿ ಕೊರೊನಾ ಭೀತಿಯ ನಡುವೆಯೂ ನಿನ್ನೆ ಸಂಜೆ ವಿಶ್ವ ಜಾನಪದ ದಿನಾಚರಣೆಯ ಸಂಭ್ರಮ ಮನೆ ಮಾಡಿತ್ತು.

Recommended Video

ಜೋಕೆ..!! ಸದ್ಯಕಿಲ್ಲ ಕೊರೋನಾದಿಂದ ಮುಕ್ತಿ | Oneindia Kannada

ಪ್ರತಿವರ್ಷ ಬಹಳ ಅದ್ಧೂರಿಯಾಗಿ ನಡೆಯುತ್ತಿದ್ದ ಜಾನಪದ ದಿನಾಚರಣೆಯನ್ನು ಈ ಬಾರಿ ಸರಳವಾಗಿ ಆಚರಿಸಲಾಯಿತು. ಪ್ರತಿ ಬಾರಿ ರಾಜ್ಯಾದ್ಯಂತ ಸರಿಸುಮಾರು 30ಕ್ಕೂ ಹೆಚ್ಚು ತಂಡಗಳು ಆಗಮಿಸುತ್ತಿದ್ದವು. ಆದರೆ ಈ ಬಾರಿ ಕಲಾತಂಡಗಳ ಕೊರತೆ ಎದ್ದು ಕಾಣುತ್ತಿತ್ತು. ಆಗಸ್ಟ್‌ 23, ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮೈಸೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಲಾವಿದರು ಆಗಮಿಸಿದ್ದರು. ವೀರಗಾಸೆ ಕುಣಿತ, ಡೊಳ್ಳುಕುಣಿತ, ಕಂಸಾಳೆ ಕುಣಿತ, ಜಾನಪದ ಕುಣಿತ ನೋಡುಗರ ಗಮನ ಸೆಳೆಯಿತು.

ರಾಷ್ಟ್ರೀಯ ಜಾನಪದ-ಸಾಂಸ್ಕೃತಿಕ ಕೇಂದ್ರವಾಗಿ ಜಾನಪದ ಲೋಕರಾಷ್ಟ್ರೀಯ ಜಾನಪದ-ಸಾಂಸ್ಕೃತಿಕ ಕೇಂದ್ರವಾಗಿ ಜಾನಪದ ಲೋಕ

ಈ ಸಂದರ್ಭ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ಪ್ರತಿವರ್ಷ ಬಹಳ ಅದ್ಧೂರಿಯಾಗಿ ಜಾನಪದ ಹಬ್ಬ ಆಚರಣೆ ಮಾಡುತ್ತಿದ್ದೆವು. ಆದರೆ ಈ ಬಾರಿ ಕೊರೊನಾದಿಂದ ಕಲಾವಿದರು ಕೂಡ ಅಷ್ಟಾಗಿ ಆಸಕ್ತಿ ತೋರಲಿಲ್ಲ. ಜೊತೆಗೆ ಪ್ರತಿವರ್ಷ ಜಾನಪದ ಲೋಕಕ್ಕೆ ರಾಜ್ಯ ಸರ್ಕಾರದಿಂದ 1 ಕೋಟಿ ರೂಪಾಯಿ ಅನುದಾನ ಬರುತ್ತಿತ್ತು. ಆದರೆ ಈ ಬಾರಿ ಕೇವಲ 30 ಲಕ್ಷ ರೂಪಾಯಿ ಮಾತ್ರ ಬಿಡುಗಡೆಯಾಗಿದೆ ಎಂದರು.

Ramanagar: World Folk Day Celebrated At Janapada Loka

 ಗಂಡು ಕಲೆ ಡೊಳ್ಳು ಕುಣಿತ ಕರಗತ ಮಾಡಿಕೊಂಡ ಯುವತಿಯರು ಗಂಡು ಕಲೆ ಡೊಳ್ಳು ಕುಣಿತ ಕರಗತ ಮಾಡಿಕೊಂಡ ಯುವತಿಯರು

ಸರ್ಕಾರದ ಅನುದಾನದ ಕೊರತೆಯಿಂದ ಕಲಾವಿದರಿಗೂ ಬಹಳಷ್ಟು ಕಷ್ಟವಾಗಿದೆ. ಈ ಬಾರಿ ಅನುದಾನದಲ್ಲಿ ಜಾನಪದ ಲೋಕದ ಸಿಬ್ಬಂದಿಗೆ ಸಂಬಳ ಮಾತ್ರ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕೊರೊನಾದಿಂದ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಕಲಾವಿದರ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕೆಂದು ತಿಮ್ಮೇಗೌಡ ಆಗ್ರಹಿಸಿದರು.

English summary
World folk day celebrated with some artists troups in janapada loka of ramanagar district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X