ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮರು ಬಳಕೆಯ ಮಾಸ್ಕ್ ತಯಾರಿಸಿದ ರಾಮನಗರದ ಮಹಿಳೆಯರು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ ಮೇ 1: ಕೊರೋನಾ ವೈರಸ್ ಗೆ ಜಗತ್ತೇ ತತ್ತರಿಸಿದೆ, ಕೊರೊನಾ ವಿರುದ್ಧ ಹೋರಾಟ ಮಾಡಬೇಕೆಂದರೆ ಮೊದಲು ಮಾಸ್ಕ್ ಧರಿಸುವುದು ಕಡ್ಡಾಯ. ಇದನ್ನು ಮನಗಂಡ ಮಹಿಳಾ ಒಕ್ಕೂಟ ಲಕ್ಷಕ್ಕೂ ಹೆಚ್ಚು ಮರು ಬಳಕೆಯ ಮಾಸ್ಕ್ ತಯಾರಿಸಿ ಉಚಿತವಾಗಿ ವಿತರಿಸಿ ಗ್ರಾಮೀಣ ಭಾಗದಲ್ಲೂ ಸಾಮಾಜಿಕ ಜವಾಬ್ದಾರಿ ಮೆರೆದಿದೆ.

ಕನಕಪುರ ತಾಲ್ಲೂಕಿನ ಕನಕಾಂಬರಿ ಮಹಿಳಾ ಒಕ್ಕೂಟ ಸ್ತ್ರೀ ಸಬಲೀಕರಣ ಜೊತೆಗೆ ಮಹಾಮಾರಿ ಕೋವಿಡ್-19 ವಿರುದ್ಧ ಹೋರಾಟದಲ್ಲಿ ಸದ್ದಿಲ್ಲದೇ ಸಕ್ರಿಯವಾಗಿದೆ.

ತಮ್ಮ ಜೀವದ ಹಂಗು ತೊರೆದು ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಪೌರ ಕಾರ್ಮಿಕರು, ಆರಕ್ಷಕ ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ, ಸ್ಥಳೀಯ ಸಂಸ್ಥೆಗಳ ನೌಕರರು ಸೇರಿದಂತೆ ಗ್ರಾಮಗಳಲ್ಲಿರುವ ಮಹಿಳಾ ಸದಸ್ಯರಿಗೆ ಉಚಿತವಾಗಿ 1 ಲಕ್ಷ ಮರು ಬಳಕೆಯ ಮಾಸ್ಕ್ ಗಳನ್ನು ವಿತರಿಸಿ ಕೊರೊನಾ ಲಾಕ್ ಡೌನ್ ಸಂಕಷ್ಟದ ಸಮಯದಲ್ಲಿ ಒಕ್ಕೂಟವು ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದೆ.

Women Who Made The Re Use Mask In Kanakapura
‌‌
ಜಿಲ್ಲೆಯಲ್ಲಿ ಮಾಸ್ಕ್ ಅಭಾವ ಸೃಷ್ಟಿಯಾದಾಗ ಕನಕಾಂಬರಿ ಮಹಿಳಾ ಒಕ್ಕೂಟ ಗ್ರಾಮೀಣ ಮಹಿಳೆಯರೇ ಉಚಿತ ಹೊಲಿಗೆ ಕೌಶಲ ತರಬೇತಿ ನೀಡುತ್ತಾ ಬಂದಿದ್ದು, ಬೆಂಗಳೂರಿನಲ್ಲಿ ಬಟ್ಟೆ ಖರೀದಿಸಿ ಒಕ್ಕೂಟದ ಅಡಿಯಲ್ಲಿ ಮಾಸ್ಕ್ ತಯಾರಿಸಲು 100 ಕ್ಕೂ ಹೆಚ್ಚು ಮಹಿಳೆಯರನ್ನು ನಿಯೋಜಿಸಲಾಗಿತ್ತು.

ಪ್ರತಿ ಮಾಸ್ಕ್ ತಯಾರಿಗೆ 3 ರೂ. ಪ್ರೋತ್ಸಾಹ ಧನ ನಿಗದಿಪಡಿಸಲಾಗಿತ್ತು. ಮನೆಗಳಲ್ಲಿ ತಯಾರಾದ ಮಾಸ್ಕ್ ಗಳನ್ನು ಸಂಗ್ರಹಿಸಿ ಕನಕಪುರದಲ್ಲಿರುವ ಒಕ್ಕೂಟದ ಕಚೇರಿಯಲ್ಲಿ ಪ್ಯಾಕ್‌ ಮಾಡಿ ಜಿಲ್ಲಾಡಳಿತಕ್ಕೆ ನೀಡಲಾಗುತ್ತಿದೆ.

ಪ್ರಾರಂಭದಲ್ಲಿ ಪ್ರತಿನಿತ್ಯ ಒಂದು ಸಾವಿರ ಮಾಸ್ಕ್ ಹೊಲಿಯುತ್ತಿದ್ದ ಮಹಿಳೆಯರು ಇದೀಗ 10 ಸಾವಿರ ಮಾಸ್ಕ್ ತಯಾರಿಸುತ್ತಿದ್ದಾರೆ. ಒಕ್ಕೂಟದಲ್ಲಿ 6,500 ಮಹಿಳಾ ಸದಸ್ಯೆಯರಿದ್ದಾರೆ.

ಕೊರೊನಾ ಸೋಂಕು ತಡೆಗಟ್ಟುವಲ್ಲಿ ರಾಮಬಾಣದಂತೆ ಬಳಕೆಯಾಗುತ್ತಿರುವ ಮಾಸ್ಕ್ ತಯಾರಿಕೆಗೆ ಬೇಡಿಕೆ ಹೆಚ್ಚಾಗಿದ್ದು. ಕನಕಾಂಬರಿ ಮಹಿಳಾ ಒಕ್ಕೂಟ ಗ್ರಾಮೀಣ ಭಾಗದ ಮಹಿಳೆಯರಿಂದ ಮಾಸ್ಕ್ ತಯಾರಿಕೆಗೆ ಉತ್ತೇಜನೆ ನೀಡುತ್ತಿರುವುದರಿಂದ ಗುಡಿ ಕೈಗಾರಿಕೆಗೂ ಉತ್ತೇಜನ ದೊರೆತಂತಾಗಿದೆ.

ಲಾಕ್ ಡೌನ್ ನಿಂದಾಗಿ ಮನೆಯಲ್ಲಿಯೇ ಕುಳಿತ್ತಿದ್ದ ಮಹಿಳೆಯರಿಗೂ ಉದ್ಯೋಗ ಕಲ್ಪಿಸಿದಂತಾಗಿದೆ ಎಂದು ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಶ್ರೀಕಂಠ ಹೆಮ್ಮೆ ವ್ಯಕ್ತಪಡಿಸಿದರು.

English summary
The Womens Coalition has created more than 1 Lakh re-use masks and distributed them freely in rural areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X