ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚನ್ನಪಟ್ಟಣ; ಮತ್ತೆ ಸದ್ದು ಮಾಡಿದ ಅಂಗಾಗ ಪತ್ತೆ ಪ್ರಕರಣ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಅಕ್ಟೋಬರ್ 27; ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಸದ್ದು ಮಾಡಿದೆ ಅಪರಿಚಿತ ಮೃತ ದೇಹದ ಅಂಗಗಳು ಪತ್ತೆ ಪ್ರಕರಣ. ಬುಧವಾರ ನಗರದ ಮಂಗಳವಾರಪೇಟೆಯ 10ನೇ ಕ್ರಾಸ್‌ನ ಕುಡಿಯುವ ನೀರಿನ ಪೈಪ್‌ನಲ್ಲಿ ಮತ್ತೆ ಮಾಂಸದ ಮುದ್ದೆ, ಮೂಳೆಗಳು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಕೆಲವು ದಿನಗಳ ಹಿಂದೆ ಚನ್ನಪಟ್ಟಣ ನಗರದ ಕೋರ್ಟ್ ಬಳಿಯ ಓವರ್ ಹೆಡ್ ವಾಟರ್ ಟ್ಯಾಂಕ್​ನಲ್ಲಿ ಅಪರಿಚಿತ ಮಹಿಳೆ ಶವದ ಕಾಲೊಂದು ಪತ್ತೆಯಾಗಿತ್ತು. ನೀರಿನ ಟ್ಯಾಂಕ್ ಬಳಿ ಮಹಿಳೆಯ ಬಟ್ಟೆ ಹಾಗೂ ಚಪ್ಪಲಿ ಸಿಕ್ಕಿತ್ತು.

ಚನ್ನಪಟ್ಟಣ; 70 ಸಾವಿರಕ್ಕೆ ಹೆಣ್ಣು ಮಗು ಖರೀದಿಸಿದ್ದ ಮಹಿಳೆ ಬಂಧನ ಚನ್ನಪಟ್ಟಣ; 70 ಸಾವಿರಕ್ಕೆ ಹೆಣ್ಣು ಮಗು ಖರೀದಿಸಿದ್ದ ಮಹಿಳೆ ಬಂಧನ

ಟ್ಯಾಂಕ್ ಮೇಲೇರಿ ನೀರಿಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಅಥವಾ ಕೊಲೆ ಮಾಡಿ ದೇಹವನ್ನು ತುಂಡು ತುಂಡು ಮಾಡಿ ಟ್ಯಾಂಕಿನ ಒಳಗಡೆ ಹಾಕಿರಬಹುದೆಂದು ಶಂಕಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪಟ್ಟಣದ ಕೆಲ ಪ್ರದೇಶಗಳಿಗೆ ನೀರು ಪೂರೈಕೆ ಕೂಡ ಹಲವು ದಿನಗಳಿಂದ ಸ್ಥಗಿತಗೊಂಡಿತ್ತು.

ರಾಮನಗರ: ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಮಹಿಳೆಯ ಅಂಗಾಗ ಪತ್ತೆ; ಆತಂಕದಲ್ಲಿ ಬಡಾವಣೆ ಜನರು ರಾಮನಗರ: ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಮಹಿಳೆಯ ಅಂಗಾಗ ಪತ್ತೆ; ಆತಂಕದಲ್ಲಿ ಬಡಾವಣೆ ಜನರು

Woman Organs Found Case Again In News At Chennapatna

ಕಳೆದ ಹಲವು ದಿನಗಳಿಂದ ಟ್ಯಾಂಕ್​ನಿಂದ ನೀರು ಪೂರೈಕೆ ಸ್ಥಗಿತಗೊಳಿಸಿ. ಎಲ್ಲೆಲ್ಲಿ ವಾಲ್ ಪೈಪ್ ಗಳಿವೆ ಅಲ್ಲಲ್ಲಿ ಪೈಪುಗಳನ್ನು‌ ಕತ್ತರಿಸಿ ದೇಹ ಪೈಲ್‌ನಲ್ಲಿ ಅಂಗಾಂಗಗಳು ಸಿಕ್ಕಿ ಹಾಕಿಕೊಂಡಿದೆಂದು ಹೊರ ತೆಗೆಯುವ ಕಾರ್ಯಾಚರಣೆ ನಡೆಯುತ್ತಿತ್ತು.

ಚನ್ನಪಟ್ಟಣ; ಮಾನವ, ಪ್ರಾಣಿ ಸಂಘರ್ಷಕ್ಕೆ ಕಾಡಾನೆ ಬಲಿ ಚನ್ನಪಟ್ಟಣ; ಮಾನವ, ಪ್ರಾಣಿ ಸಂಘರ್ಷಕ್ಕೆ ಕಾಡಾನೆ ಬಲಿ

ಕಳೆದ 15 ದಿನಗಳ ಹಿಂದೆ ಕೋರ್ಟ್ ಪಕ್ಕದ ಓವರ್ ಟ್ಯಾಂಕ್‌ನ ಪೈಪ್‌ನಲ್ಲಿ ಕಾಲು ಪತ್ತೆಯಾಗಿತ್ತು. ಇಲ್ಲಿನ ಜನರನ್ನುಇದು ತೀವ್ರ ಆತಂಕಕ್ಕೀಡು ಮಾಡಿತ್ತು. ಇದೀಗ ಅದರ ಕೂಗಳತೆ ದೂರದಲ್ಲಿನ ಪೈಪ್‌ನಲ್ಲಿ ಮೂಳೆ ಹಾಗೂ ಮಾಂಸದ ಮುದ್ದೆ ಪತ್ತೆಯಾಗಿರುವುದು ಆತಂಕ ಮತ್ತಷ್ಟು ಹೆಚ್ಚಿಸಿದೆ.

ಜೆಸಿಬಿ ಮೂಲಕ ಪೈಪ್ ಶೋಧ ಕಾರ್ಯ ನಡೆಸಲಾಗುತ್ತಿದೆ. ಸ್ಥಳಕ್ಕೆ ಪೊಲೀಸ್ ಇಲಾಖೆ ಹಾಗೂ ನಗರಸಭೆ ಹಾಗೂ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಾಂಸದ ಮುದ್ದೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಟ್ಟಿದ್ದು, ಸ್ಥಳದಲ್ಲಿನ ಕೊಳತ ಮಾಂಸದ ವಾಸನೆಯಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸಿದರು.

ಕಾರ್ಯಾಚರಣೆ ಇನ್ನು‌ ಮುಂದು ವರೆದಿದ್ದು, ಸಿಕ್ಕ ಮಾಂಸದ ಮುದ್ದೆ ಅದೇ ಮಹಿಳೆಗೆ ಸೇರಿದ್ದೋ ಅಥವಾ ಬೇರೆಯವರಿಗೆ ಸೇರಿದ್ದೋ ಎಂಬುದು‌ಪೋಲೀಸರ ತನಿಖೆಯಿಂದ ಮಾತ್ರ ಬೆಳಕಿಗೆ ಬರಬೇಕಿದೆ.

ಬಡಾವಣೆಯ ಇತರ ಕಡೆ ಪೈಪ್ ಲೈನ್‌ಗಳನ್ನು ಕತ್ತರಿಸಿ ಮೃತ ದೇಹದ ಅಂಗಾಂಗಗಳಿಗೆ ಶೋಧ ಕಾರ್ಯ ಮುದುವೆರೆದಿದಿದೆ. ಕಾರ್ಯಚರಣೆಯಲ್ಲಿ ನೀರು ಸರಬರಾಜು ಮಂಡಳಿ , ನಗರಸಭೆ ಸಿಬ್ಬಂದಿ ಹಾಗೂ ಪೋಲಿಸ್ ಸಿಬ್ಬಂದಿ ಪಾಲ್ಗೊಂಡಿದ್ದಾರೆ.

ಆಕ್ರೋಶ ವ್ಯಕ್ತಪಡಿಸಿದ ಜನ; ಇನ್ನು ಸಮಸ್ಯೆ ಪರಿಹಾರ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಅಧಿಕಾರಿಗಳೊಂದಿಗೆ ಜನರು ವಾಗ್ವಾದ ಮಾಡಿದರು.

ನೀರಿನ ಟ್ಯಾಂಕ್‌ನಲ್ಲಿ ಮೃತದೇಹದ ಅಂಗಾಗ ಪತ್ತೆಯಾದ ನಂತರ ಜಲಮಂಡಳಿ ಸಿಬ್ಬಂದಿ ನೀರಿನ ವ್ಯವಸ್ಥೆ ಮಾಡಿಲ್ಲ. ಈಗಲೂ ಖಾಸಗಿ ಟ್ಯಾಂಕರ್‌ಗಳಿಗೆ ದುಡ್ಡು ಕೊಟ್ಟು ನೀರು ತೆಗೆದುಕೊಳ್ಳತ್ತಿದ್ದೇವೆ. ಆದರೆ ಜಲಮಂಡಳಿಯವರು ನೀರು ಸರಬರಾಜು ಮಾಡದೇ ಕೇವಲ ನೀರಿನ ಬಿಲ್ಲು ನೀಡಿ ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

ಪಾರ್ಕಿನಲ್ಲಿ ನವಜಾತ ಶಿಶುಪತ್ತೆ; ಆಗತಾನೆ ಜನಿಸಿದ ನವಜಾತ ಶಿಶುವನ್ನು ಪಾರ್ಕಿನಲ್ಲಿ ಬಿಟ್ಟುಹೋದ ಘಟನೆ ಚನ್ನಪಟ್ಟಣದ ಹೌಸಿಂಗ್ ಬೋರ್ಡ್ ಉದ್ಯಾನವನದಲ್ಲಿ ನಡೆದಿದೆ. ತಡರಾತ್ರಿ ಜನಿಸಿದ ಹೆಣ್ಣು ಶಿಶುವನ್ನು ಜನಿಸಿದ ತಕ್ಷಣವೇ ಬಟ್ಟೆ ಹಾಗೂ ಚೀಲದಲ್ಲಿ ಸುತ್ತಿ ಪಾರ್ಕಿನಲ್ಲಿ ಬಿಟ್ಟು ಹೋಗಿದ್ದಾರೆ. ಮುಂಜಾನೆ ವಾಯು ವಿಹಾರಕ್ಕೆ ತೆರಳಿದ್ದವರು ಇದನ್ನು ಗಮನಿಸಿ ಪೊಲೀಸರು ಹಾಗೂ ಶಿಶು ಮಹಿಳಾ ಮತ್ತು ಶಿಶು ಅಭಿವೃದ್ಧಿ ಅಧಿಕಾರಿಗಳ‌ ಕಚೇರಿಗೆ ಸುದ್ದಿ ಮುಟ್ಟಿಸಿದ್ದಾರೆ.

child

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸಿಡಿಪಿಒ ಸಿದ್ದಲಿಂಗಯ್ಯ ಮತ್ತು ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಶಿಶುವನ್ನು ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರು. ಹೆಚ್ಚಿನ ಚಿಕಿತ್ಸೆಗೆ ಮಗುವನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಈ‌ ಬಗ್ಗೆ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೋಲಿಸರು ಮಗುವಿನ ಪೋಷಕರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

English summary
Woman organs found case again in news at Ramanagara district Chennapatna. Organs and bone found in drinking water pipeline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X