ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ; ಸಿ. ಪಿ. ಯೋಗೀಶ್ವರ್ ಹೊಸ ಅಸ್ತ್ರ ಪ್ರಯೋಗಿಸಲು ಸಜ್ಜು!

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 27; ರಾಜ್ಯ ರಾಜಕಾರಣದಲ್ಲಿ ರಾಮನಗರ ಈಗ ಎಲ್ಲರ ಗಮನಸೆಳೆಯುತ್ತಿದ್ದು, ರಾಜಕೀಯದ ಜಿದ್ದಾಜಿದ್ದಿ ಆರಂಭವಾಗಿದೆ. ಒಂದೆಡೆ ಡಿ. ಕೆ. ಶಿವಕುಮಾರ್ ಮತ್ತೊಂದೆಡೆ ಎಚ್. ಡಿ. ಕುಮಾರಸ್ವಾಮಿ ಪ್ರಾಬಲ್ಯ ಸಾಧಿಸಲು ತಮ್ಮದೇ ಆದ ರಾಜಕೀಯ ಅಸ್ತ್ರಗಳನ್ನು ಹಿಡಿದುಕೊಂಡು ಅಖಾಡಕ್ಕಿಳಿದ್ದಾರೆ. ಇವರ ನಡುವೆ ಬಿಜೆಪಿಯಿಂದ ಸಿ. ಪಿ. ಯೋಗೀಶ್ವರ್ ಹೊಸದೊಂದು ಅಸ್ತ್ರ ಪ್ರಯೋಗಿಸಲು ಸಜ್ಜಾಗಿದ್ದಾರೆ.

ಈಗಾಗಲೇ ಮೇಕೆದಾಟು ಪಾದಯಾತ್ರೆ ಮೂಲಕ ಒಂದು ಹಂತದ ಹೋರಾಟವನ್ನು ಡಿಕೆಶಿ ಸಹೋದರರು ಮಾಡಿ ರಾಜ್ಯದ ಗಮನಸೆಳೆದಿದ್ದಾರೆ. ಮೊದಲಿಗೆ ರಾಮನಗರದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಮತ್ತೆ ರಾಜ್ಯದ ಇತರೆ ಜಿಲ್ಲೆಗಳತ್ತ ದಂಡಯಾತ್ರೆ ಹೊರಡಲು ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಚಿಂತನೆ ನಡೆಸಿದ್ದಾರೆ.

ಮೇಕೆದಾಟು ಪಾದಯಾತ್ರೆ ಎಪೆಕ್ಟ್; ರಾಮನಗರ ಎಸ್ಪಿ ವರ್ಗಾವಣೆಮೇಕೆದಾಟು ಪಾದಯಾತ್ರೆ ಎಪೆಕ್ಟ್; ರಾಮನಗರ ಎಸ್ಪಿ ವರ್ಗಾವಣೆ

ಏಕೆಂದರೆ ಡಾ. ಜಿ. ಪರಮೇಶ್ವರ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ತಮ್ಮ ಕ್ಷೇತ್ರದತ್ತ ಹೆಚ್ಚು ಗಮನ ನೀಡದೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷ ಗೆಲುವು ಪಡೆದರೂ ತಮ್ಮ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಇಂತಹ ಪರಿಸ್ಥಿತಿ ತಮಗಾಗಬಾರದು ಎಂಬ ಉದ್ದೇಶದಿಂದಲೇ ಡಿ. ಕೆ. ಶಿವಕುಮಾರ್ ರಾಮನಗರಕ್ಕೆ ಹೆಚ್ಚಿನ ಒತ್ತು ನೀಡಿ ಅಲ್ಲಿ ಪಕ್ಷದ ಸಂಘಟನೆ ಮಾಡುತ್ತಿದ್ದಾರೆ.

ಜೆಡಿಎಸ್ ನಾಯಕ ಬೆಮಲ್ ಕಾಂತರಾಜು ಕಾಂಗ್ರೆಸ್ ಸೇರ್ಪಡೆ ಜೆಡಿಎಸ್ ನಾಯಕ ಬೆಮಲ್ ಕಾಂತರಾಜು ಕಾಂಗ್ರೆಸ್ ಸೇರ್ಪಡೆ

ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷಕ್ಕೂ ಹೆಚ್ಚು ಸಮಯವಿದೆ. ಆದರೆ ಈಗಿನಿಂದಲೇ ಚುನಾವಣೆಗೆ ಬೇಕಾದ ತಯಾರಿಗಳು ನಡೆಯುತ್ತಿರುವುದನ್ನು ಗಮನಿಸಿದರೆ ಚುನಾವಣೆ ವೇಳೆಗೆ ಇನ್ನು ಏನೆಲ್ಲಾ ಬೆಳವಣಿಗೆಗಳು ನಡೆಯಲಿವೆಯೋ? ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.

ಮುಗಿದಿಲ್ಲ ಬಿಜೆಪಿ ಬಿಕ್ಕಟ್ಟು; ಸಿಪಿ ಯೋಗೀಶ್ವರ್, ಯತ್ನಾಳ್ ಭೇಟಿ! ಮುಗಿದಿಲ್ಲ ಬಿಜೆಪಿ ಬಿಕ್ಕಟ್ಟು; ಸಿಪಿ ಯೋಗೀಶ್ವರ್, ಯತ್ನಾಳ್ ಭೇಟಿ!

ಜೆಡಿಎಸ್‌ಗೆ ಅನಿವಾರ್ಯವತೆ ಹೆಚ್ಚಿದೆ

ಜೆಡಿಎಸ್‌ಗೆ ಅನಿವಾರ್ಯವತೆ ಹೆಚ್ಚಿದೆ

ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಮೂರು ಪಕ್ಷಗಳು ಕೂಡ ರಾಮನಗರದ ಮೇಲೆ ಕಣ್ಣಿಟ್ಟಿವೆ. ಅದರಲ್ಲೂ ಜೆಡಿಎಸ್‌ಗೆ ರಾಮನಗರದ ಅನಿವಾರ್ಯತೆ ತುಸು ಹೆಚ್ಚೇ ಇದೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಾಮನಗರವನ್ನೇ ತಮ್ಮ ಕಾರ್ಯಸ್ಥಾನವನ್ನಾಗಿ ಮಾಡಿಕೊಂಡಿದ್ದಾರೆ. ಅವರಿಗೆ ರಾಜಕೀಯವಾಗಿ ಮರು ಜೀವ ನೀಡಿರುವುದು ಕೂಡ ರಾಮನಗರವೇ. ಹೀಗಾಗಿ ಅಲ್ಲಿನ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಏನು ಬೇಕೋ ಅದೆಲ್ಲ ತಂತ್ರವನ್ನು ಅವರು ಮಾಡುತ್ತಿದ್ದಾರೆ ಎನ್ನುವುದಕ್ಕಿಂತಲೂ ಮಾಡಲೇ ಬೇಕಾದ ಅನಿವಾರ್ಯತೆ ಅವರಿಗೆ ಬಂದೊದಗಿದೆ.

ಒಕ್ಕಲಿಗ ಮತಗಳನ್ನು ಹಿಡಿದಿಟ್ಟುಕೊಳ್ಳುವುದು

ಒಕ್ಕಲಿಗ ಮತಗಳನ್ನು ಹಿಡಿದಿಟ್ಟುಕೊಳ್ಳುವುದು

ಎಚ್. ಡಿ. ಕುಮಾರಸ್ವಾಮಿ ಮತ್ತು ಡಿ. ಕೆ. ಶಿವಕುಮಾರ್ ಇಬ್ಬರೂ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರು. ಒಕ್ಕಲಿಗ ಮತಗಳನ್ನು ಹಿಡಿದಿಟ್ಟುಕೊಳ್ಳುವತ್ತ ಸರ್ವ ರೀತಿಯ ತಂತ್ರಗಳು ನಡೆಯುತ್ತಿರುವುದು ಗುಟ್ಟಾಗಿಯೇನು ಉಳಿದಿಲ್ಲ. ಒಕ್ಕಲಿಗ ಮತಗಳತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ನಿಗಾವಹಿಸುತ್ತಿರುವಾಗಲೇ ಇದೀಗ ಹಿಂದುಳಿದ ಮತ್ತು ದಲಿತ ಮತಗಳನ್ನು ಸೆಳೆಯುವ ಕೆಲಸಕ್ಕೆ ಮಾಜಿ ಸಚಿವ ಸಿ. ಪಿ. ಯೋಗೀಶ್ವರ್ ಅವರ ಮೂಲಕ ಬಿಜೆಪಿ ಕೈಹಾಕಿದೆ. ಅಷ್ಟೇ ಅಲ್ಲದೆ ಅದಕ್ಕೆ ಅನುಕೂಲವಾಗುವಂತೆ ಸಚಿವ ಅಶ್ವಥ್ ನಾರಾಯಣಗೆ ರಾಮನಗರ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ.

ದಲಿತ ಮುಖಂಡರೊಂದಿಗೆ ಸಿಪಿವೈ ಸಭೆ

ದಲಿತ ಮುಖಂಡರೊಂದಿಗೆ ಸಿಪಿವೈ ಸಭೆ

ದಲಿತ ಸಮುದಾಯದ ನಾಯಕರನ್ನು ತಮ್ಮ ಮನೆಗೆ ಕರೆಯಿಸಿಕೊಂಡಿರುವ ಸಿ. ಪಿ. ಯೋಗೀಶ್ವರ್ ಸಭೆ ನಡೆಸಿದ್ದಾರೆ. ಈ ವೇಳೆ ದಲಿತ ಮುಖಂಡರು ತಮ್ಮ ಅಳಲನ್ನು ತೋಡಿಕೊಂಡಿದ್ದು, ಚನ್ನಪಟ್ಟಣ ಕ್ಷೇತ್ರವನ್ನು ಎಚ್. ಡಿ. ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದರೂ ಕಳೆದ ಮೂರ್ನಾಲ್ಕು ವರ್ಷಗಳಿಂದ ತಾಲೂಕಿನಲ್ಲಿ ದಲಿತರ ಕುಂದುಕೊರತೆ ಸಭೆ ನಡೆಸಿಲ್ಲ. ತಾಲೂಕಿನ ಸಾಕಷ್ಟು ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನವಿಲ್ಲದೆ ಮನೆಯಲ್ಲಿ ಸಾವು ಸಂಭವಿಸಿದಾಗ ಪರದಾಡುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಡಾ. ಅಂಬೇಡ್ಕರ್ ಮತ್ತು ಜಗಜೀವನ್‌ರಾಂ ಭವನ ನಿರ್ಮಾಣವಾಗಿಲ್ಲ. ಬಗರ್ ಹುಕುಂ ಸಾಗುವಳಿ ಸಕ್ರಮೀಕರಣಕ್ಕೆ ದಲಿತರು ಅರ್ಜಿ ಹಾಕಿ ಹಲವಾರು ವರ್ಷಗಳು ಕಳೆದಿವೆಯಾದರೂ ಇನ್ನೂ ಮಂಜೂರಾತಿ ಮಾಡಿಲ್ಲ.

ಚುನಾವಣೆ ವೇಳೆ ಕುಮಾರಸ್ವಾಮಿ ದಲಿತರಿಗೆ ಹಲವು ರೀತಿಯ ಭರವಸೆ ನೀಡಿದ್ದು ಅದ್ಯಾವುದನ್ನು ಈಡೇರಿಸಿಲ್ಲ. ದಲಿತರ ಕುಂದುಕೊರತೆ ಕೇಳುವ ಸೌಜನ್ಯವನ್ನು ಅವರು ತೋರುತ್ತಿಲ್ಲ. ತಾಲೂಕಿನಲ್ಲಿ ಕೆಲ ವರ್ಷಗಳಿಂದ ದಲಿತರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ದಲಿತರು ಯೋಗೀಶ್ವರ್ ಪರವಾಗಿ ನಿಲ್ಲುವ ತೀರ್ಮಾನವನ್ನು ಮುಖಂಡರು ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ದಲಿತರ ಪರ ನಿಲ್ಲುವ ವಾಗ್ದಾನ

ದಲಿತರ ಪರ ನಿಲ್ಲುವ ವಾಗ್ದಾನ

ಸಭೆಯಲ್ಲಿ ಮಾತನಾಡಿದ ಎಂಎಲ್‌ಸಿ ಯೋಗೀಶ್ವರ್, "ನಾನು ಅಧಿಕಾರದಲ್ಲಿದ್ದಾಗ ಎಂದೂ ದಲಿತರನ್ನು ಕಡೆಗಣಿಸಿಲ್ಲ. ದಲಿತರಿಗೆ ಎಲ್ಲ ರೀತಿಯ ಪ್ರಾತಿನಿಧ್ಯತೆಯನ್ನು ನೀಡಿದ್ದೇನೆ, ಮುಂದೆಯೂ ನೀಡುತ್ತೇನೆ. ಕೆಲ ವಿಚಾರಗಳಲ್ಲಿ ಸುಮ್ಮನೆ ನನ್ನ ವಿರುದ್ಧ ತಪ್ಪು ಮಾಹಿತಿ ನೀಡಿ ನಿಮ್ಮ ನನ್ನ ನಡುವೆ ಅಂತರ ಸೃಷ್ಟಿಸಿ ನನ್ನ ಮತ್ತು ದಲಿತ ಸಮುದಾಯದ ಬಾಂಧವ್ಯವನ್ನು ಕೆಡಿಸಲಾಗಿದೆ. ಮುಂದೆ ಈಗಾಗದಂತೆ ನೋಡಿಕೊಳ್ಳೋಣ" ಎಂದು ಹೇಳಿದ್ದಾರೆ.

ಬಿಜೆಪಿ ಪಕ್ಷ ಎಂದೂ ದಲಿತ ವಿರೋಧಿಯಲ್ಲ, ದಲಿತರ ಪರವಾದ ಕೆಲಸಗಳನ್ನು ಮಾಡುತ್ತಿದೆ. ಕೆಲ ರಾಜಕೀಯ ಪಕ್ಷಗಳು ವೋಟಿನ ಅಸೆಗಾಗಿ ಬಿಜೆಪಿ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಾರೆ. ಬಿಜೆಪಿ ಪಕ್ಷದ ದಲಿತರಿಗೆ ಸಾಕಷ್ಟು ಅಧಿಕಾರ ಮತ್ತು ಅವಕಾಶಗಳನ್ನು ನೀಡಿದೆ. ಈ ದೇಶದ ರಾಷ್ಟ್ರಪತಿ ಹುದ್ದೆಯಂತಹ ಉನ್ನತ ಹುದ್ದೆಗೆ ದಲಿತರನ್ನು ಆಯ್ಕೆಮಾಡಿರುವುದೇ ಬಿಜೆಪಿಯ ದಲಿತಪರ ಕಾಳಜಿಗೆ ಸಾಕ್ಷಿಯಾಗಿದೆ. ಬಿಜೆಪಿ ಬಗ್ಗೆ ದಲಿತರು ಯಾವುದೇ ಕಾರಣಕ್ಕೂ ತಪ್ಪು ಅಭಿಪ್ರಾಯ ತಳೆಯುವುದು ಬೇಕಿಲ್ಲ ಎಂದು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

Recommended Video

ಕರ್ನಾಟಕದ ಐವರು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಗೌರವ | Oneindia Kannada

English summary
MLC and BJP leader CP Yogeshwar strategy mya help party at Ramanagara district. Ramanagara home town for former CM H. D. Kumaraswamy and KPCC president D. K. Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X