ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಕ್ಕಲಿಗರ ಪ್ರತಿಭಟನೆಯಲ್ಲಿ ಭಾಗಿಯಾಗದ ಕಾರಣ ನೀಡಿದ ಅನಿತಾ ಕುಮಾರಸ್ವಾಮಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಸೆಪ್ಟೆಂಬರ್ 15: "ಜಾರಿ ನಿರ್ದೇಶನಾಲಯವು ಬಂಧಿಸಿರುವ ಡಿ.ಕೆ. ಶಿವಕುಮಾರ ಪರ ನಾವು ಪ್ರತಿಭಟನೆಯಲ್ಲಿ ಭಾಗಿಯಾಗಬೇಕು ಅಂತ ಏನಿಲ್ಲ. ನಾನು ಹಾಗೂ ಕುಮಾರಸ್ವಾಮಿ ಅವರು ಶಿವಕುಮಾರ್ ಅವರ ಮನೆಗೆ ಹೋಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬಂದಿದ್ದೇವೆ" ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಸಮರ್ಥನೆ ನೀಡಿದರು.

ರಾಮನಗರ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ನಮ್ಮ ಕಾರ್ಯಕರ್ತರು ಭಾಗಿಯಾದರು. ಕಾನೂನು ಎಲ್ಲರಿಗೂ ಒಂದೇ. ಹಾಗಾಗಿ ಶಿವಕುಮಾರ್ ಅವರು ಇದನ್ನೆಲ್ಲ ಎದುರಿಸಬೇಕಿದೆ ಎಂದರು.

ಬೆಂಗಳೂರಲ್ಲಿ ಒಕ್ಕಲಿಗರ ಬಲ ಪ್ರದರ್ಶನದ ನಂತರ ಕೈ ಎತ್ತಿವೆ ಈ 4 ಪ್ರಶ್ನೆಗಳುಬೆಂಗಳೂರಲ್ಲಿ ಒಕ್ಕಲಿಗರ ಬಲ ಪ್ರದರ್ಶನದ ನಂತರ ಕೈ ಎತ್ತಿವೆ ಈ 4 ಪ್ರಶ್ನೆಗಳು

ರಾಜ್ಯ ಸರಕಾರ ರಚನೆಯಾಗಿ 2 ತಿಂಗಳು ಕಳೆದರೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಆಗದ ವಿಚಾರವಾಗಿ ಮಾತನಾಡಿ, ಯಾವುದೇ ಸರಕಾರ ಬಂದರೂ ಅವರಿಗೆ ಟೈಮ್ ಬೇಕು, ಮುಂದಿನ ದಿನಗಳಲ್ಲಿ ನೇಮಕ ಮಾಡುತ್ತಾರೆ ಎಂದರು.

Anita Kumarswamy

ಅನರ್ಹರು ತ್ರಿಶಂಕು ಸ್ಥಿತಿಯಲ್ಲಿ
ಇನ್ನು ಜೆಡಿಎಸ್ ಶಾಸಕರು ಬಿಜೆಪಿಗೆ ಹೋಗುವ ವಿಚಾರವಾಗಿ ಹಬ್ಬಿರುವ ವದಂತಿ ಬಗ್ಗೆ ಮಾತನಾಡಿ, ಅದೆಲ್ಲವೂ ಸುಳ್ಳು ವಿಚಾರ. ನಿಮಗೆ ಎಲ್ಲಿಂದ ಮಾಹಿತಿ ಬಂದಿದೆಯೋ ಗೊತ್ತಿಲ್ಲ. ಇನ್ನು ಅನರ್ಹ ಶಾಸಕ ನಾರಾಯಣಗೌಡ ಅವರು ನಮ್ಮ ಪಕ್ಷದಿಂದ ಹೋಗಿ ಆಗಿದೆ ಅಲ್ವೇನ್ರಿ? ಅವರ ವಿಷಯ ಬೇಡ. ಈಗ ಹೋಗಿರುವ ಶಾಸಕರ ಪರಿಸ್ಥಿತಿ ತ್ರಿಶಂಕು ಸ್ಥಿತಿಯಲ್ಲಿದೆ. ಅವರ ಸ್ಥಿತಿಯನ್ನು ನೋಡಿ ಬೇರೆ ಯಾರೂ ಪಕ್ಷ ಬಿಟ್ಟು ಹೋಗಲ್ಲ ಎಂದರು.

ವಿರೋಧ ಪಕ್ಷದ ಶಾಸಕರು ಅವರ ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಮುಖ್ಯಮಂತ್ರಿಗಳನ್ನು ಭೇಟಿಯಾದರೆ ತಪ್ಪೇನು? ನಾನು ಕೂಡ ಕ್ಷೇತ್ರದ ಅಭಿವೃದ್ಧಿಗೆ ಭೇಟಿ ಮಾಡುತ್ತೇನೆ. ಅದರಲ್ಲಿ ಏನೂ ತಪ್ಪಿಲ್ಲ ಎಂದು ಜಿ. ಟಿ. ದೇವೇಗೌಡ ಹಾಗೂ ಯಡಿಯೂರಪ್ಪ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

ಕುಮಾರಸ್ವಾಮಿ ವಿರುದ್ಧ ಜಿ. ಟಿ. ದೇವೇಗೌಡ ಮಾತನಾಡಿರುವ ವಿಚಾರವಾಗಿ ಉತ್ತರ ನೀಡಿದ ಅವರು, ಇಬ್ಬರ ಮಧ್ಯೆ ಕೆಲ ಭಿನ್ನಾಭಿಪ್ರಾಯ ಇದೆ. ಹಾಗಾಗಿ ಜಿ. ಟಿ. ದೇವೇಗೌಡರು ಮಾತನಾಡಿದ್ದಾರೆ, ಅಷ್ಟೇ. ಕುಮಾರಸ್ವಾಮಿಯವರು ಎಲ್ಲರನ್ನೂ ಪ್ರೀತಿ- ವಿಶ್ವಾಸದಿಂದ ಕಂಡಿದ್ದಾರೆ. ಒಬ್ಬರು ಹೆಚ್ಚು, ಒಬ್ಬರು ಕಡಿಮೆ ಅಂತೇನಿಲ್ಲ. ಮುಂದಿನ ದಿನಗಳಲ್ಲಿ ಸರಿಪಡಿಸುತ್ತಾರೆ. ಸರಿಪಡಿಸದ ಸಮಸ್ಯೆಗಳು ಯಾವುದೂ ಇಲ್ಲ. ಎಲ್ಲ ಪಕ್ಷಗಳಲ್ಲೂ ಸಮಸ್ಯೆಗಳಿವೆ, ನಮ್ಮಲ್ಲೂ ಇವೆ ಎಂದರು.

English summary
Ramanagar MLA Anita Kumaraswamy reacted to why not participated Vokkaliga protest in Bengaluru?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X