ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ ಜಿಲ್ಲೆಯಲ್ಲಿ ಮತ್ತೊಂದು ತಾಲ್ಲೂಕು ಲಾಕ್‌ಡೌನ್

|
Google Oneindia Kannada News

ರಾಮನಗರ, ಜೂನ್ 23: ರಾಮನಗರ ಜಿಲ್ಲೆಯ ಮತ್ತೊಂದು ತಾಲ್ಲೂಕು ಲಾಕ್‌ಡೌನ್ ಆಗಿದೆ. ಮಾಗಡಿ ಪಟ್ಟಣದಲ್ಲಿ ಸ್ವಯಂಪ್ರೇರಿತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಕೊರೊನಾ ವೈರಸ್‌ ಹಬ್ಬುವಿಕೆ ನಡುವೆಯೂ ಅನಿವಾರ್ಯವಾಗಿ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿತ್ತು. ಆದರೆ, ಈಗ ಮತ್ತೆ ಲಾಕ್‌ಡೌನ್ ಮಾಡುವ ಪರಿಸ್ಥಿತಿ ಅನೇಕ ಕಡೆ ನಿರ್ಮಾಣವಾಗಿದೆ. ಮಾಗಡಿ ಪಟ್ಟಣದಲ್ಲಿ ಸಹ ಲಾಕ್‌ಡೌನ್ ಆಗುತ್ತಿದ್ದು, ಮಾಗಡಿ ಶಾಸಕ ಎ ಮಂಜುನಾಥ್ ನೇತೃತ್ವದ ನಿನ್ನೆ ನಡೆದ ಸಾರ್ವಜನಿಕ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ರಾಮನಗರದಲ್ಲಿ ಕೊರೊನಾ ವೈರಸ್ ಗೆ ಮೂರನೇ ಬಲಿರಾಮನಗರದಲ್ಲಿ ಕೊರೊನಾ ವೈರಸ್ ಗೆ ಮೂರನೇ ಬಲಿ

ಸಭೆಯಲ್ಲಿ ವರ್ತಕರ ಸಂಘ ಹಾಗೂ ತಹಶೀಲ್ದಾರ್ ಮಾಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಗರಸಭೆ ಆಯುಕ್ತರು ಭಾಗಿಯಾಗಿದ್ದರು. ಲಾಕ್‌ಡೌನ್ ಇರುವ ಕಾರಣ ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಮಾತ್ರ ಅಂಗಡಿಗಳು ತೆರೆಯುತ್ತದೆ.

Ramanagara: Voluntary Lockdown Has Been Announced in Magadi Town

ಮಾಗಡಿ ವಿಧಾನಸಭೆ ಕ್ಷೇತ್ರದಲ್ಲಿ ಇಬ್ಬರು ವ್ಯಕ್ತಿಗಳು ಕೊರೊನಾ ಸೋಂಕನಿಂದ ಸಾವನಪ್ಪಿದ್ದಾರೆ. ಮಾಗಡಿ ಪಟ್ಟಣದಲ್ಲಿ ಇಲ್ಲಿಯವರೆಗೂ 15 ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಕೊರೊನಾ ವೈರಸ್‌ ಮತ್ತಷ್ಟು ಹೆಚ್ಚುವ ಆತಂಕದಿಂದ ಸ್ವಯಂಪ್ರೇರಿತ ಲಾಕ್‌ಡೌನ್ ಮಾಡಲಾಗಿದೆ. ರಾಮನಗರ ಜಿಲ್ಲೆಯಲ್ಲಿ 2 ತಾಲೂಕುಗಳಲ್ಲಿ ಸ್ವಯಂ ಪ್ರೇರಿತ ಲಾಕ್‌ಡೌನ್ ಆಗಿವೆ.

English summary
coronavirus in ramanagara: Ramanagara: Voluntary Lockdown Has Been Announced in Magadi Town.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X