ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೈಕೊಟ್ಟ ಇಂಟರ್ನೆಟ್ , ರಾಮನಗರದಲ್ಲಿ ಪಡಿತರಕ್ಕಾಗಿ ಗ್ರಾಮಸ್ಥರ ಪರದಾಟ

By ನಮ್ಮ ಪ್ರತಿನಿಧಿ
|
Google Oneindia Kannada News

ರಾಮನಗರ, ಅಕ್ಟೋಬರ್ 19: ಸದ್ಯ ಆಹಾರ ಇಲಾಖೆಯ ಪಡಿತರ ಪಡೆಯಬೇಕಾದರೆ ಕುಟುಂಬ ಸದಸ್ಯರ ಬೆರಳಚ್ಚು ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಇಂಟರ್ನೆಟ್ ಸಂಪರ್ಕ ಸಿಗದೆ ರಾಮನಗರ ತಾಲ್ಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಫಜೀತಿ ಸೃಷ್ಟಿಯಾಗಿದೆ.

ಇಂಟರ್ನೆಟ್ ಸರಿಯಾಗಿ ಸಿಗದ ಕಾರಣ ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಕಛೇರಿಯಿಂದ ರಸ್ತೆಗೆ ಬಂದ ಘಟನೆ ನಡೆದಿದೆ.

ಗ್ರಾಮಸ್ಥರು ಬೆಳಿಗ್ಗೆ ನ್ಯಾಯಬೆಲೆ ಅಂಗಡಿಯತ್ತ ಮುಖ ಮಾಡಿದ್ದರು. ಆದರೆ ಗ್ರಾಮದ ಜನರು ನ್ಯಾಯಬೆಲೆ ಅಂಗಡಿಯ ಬಾಗಿಲು ಬಂದ್ ಆಗಿರುವುದನ್ನು ಕಂಡು ಪೆಚ್ಚಾಗಿದ್ದರು. ಅಲ್ಲೇ ಇದ್ದ ಜನರನ್ನ ವಿಚಾರಿಸಿದಾಗ ಕೈ ಕೊಟ್ಟ ಇಂಟರ್ನೆಟ್ ಸಿಗ್ನಲ್ ಹುಡುಕಿಕೊಂಡು ಕಚೇರಿ ಸಿಬ್ಬಂದಿಗಳೊಂದಿಗೆ ಗ್ರಾಹಕರು ಕೂಡಾ ಗ್ರಾಮದಿಂದ ಸುಮಾರು 1 ಕಿ.ಮೀ ನಡೆದು ಸಿಗ್ನಲ್ ಪತ್ತೆ ಹಚ್ಚಿದ್ದು ತಿಳಿಯಿತು. ಗ್ರಾಹಕರು ಅಲ್ಲಿಗೇ ಬಂದು ಬೆರಳಚ್ಚು ನೀಡಿ ಪಡಿತರ ಪಡೆಯಲು ಹೆಣಗಾಡಿದರು.

Villagers are struggling to get Ration in Ramanagara due to Internet problems

ರಾಮನಗರದಿಂದ ಕೇವಲ 5 ಕಿಲೋಮೀಟರ್ ದೂರವಿರುವ ಕುರುಬರಹಳ್ಳಿ ಗ್ರಾಮದಲ್ಲಿ 1025ಜನ ವಾಸಿಸುತ್ತಿದ್ದು, 412 ಪಡಿತರ ಕಾರ್ಡುಗಳಳಿವೆ. ಅದರೆ ಬುಧವಾರ ಇಂಟರ್‌ನೆಟ್ ಸಂಪರ್ಕ ಕೈಕೊಟ್ಟ ಹಿನ್ನೆಲೆಯಲ್ಲಿ ಸುಮಾರು 5 ರಿಂದ 10 ಮಂದಿಗೆ ಮಾತ್ರ ಪಡಿತರ ವಿತರಿಸಲು ಸಾಧ್ಯವಾಗಿದೆ.

ಕೆಲವೊಮ್ಮೆ ಬೆರಳಚ್ಚು ಪಡೆದುಕೊಂಡರೆ ಮತ್ತೆ ಅರ್ಧ ಗಂಟೆಯಿಂದ ಒಂದು ಗಂಟೆಗಳ ಕಾಲ ಸರ್ವರ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು ಸಿಬ್ಬಂದಿ ಮತ್ತು ಗ್ರಾಹಕರನ್ನು ಹೈರಾಣಾಗಿಸುತ್ತಿದೆ.

Villagers are struggling to get Ration in Ramanagara due to Internet problems

ಇದರಿಂದ ದೀಪಾವಳಿ ಹಬ್ಬದ ಕೆಲಸ ಕಾರ್ಯಗಳನ್ನು ಬಿಟ್ಟು ಗ್ರಾಹಕರು ಪಡಿತರ ಅಂಗಡಿ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿತ್ತು. ಪಡಿತರ ಪಡೆಯೋಕೆ ನ್ಯಾಯಬೆಲೆ ಅಂಗಡಿಯತ್ತ ಬಂದ ಜನ ಬೆರಳಚ್ಚನ್ನು ಗ್ರಾಮದ ಹೊರಗೆ ಪಡೆಯೋದು ತಿಳಿದು ಅಲ್ಲಿಯೂ ಜಮಾಯಿಸಿದರು.

"ನಮ್ಮದೊಂದೇ ಗ್ರಾಮದ ಸಮಸ್ಯೆ ಇದಲ್ಲ. ಎಲ್ಲೆಡೆ ಇಂತಹ ಸಮಸ್ಯೆ ಕಾಡುತ್ತಿದೆ. ಕೂಡಲೇ ನ್ಯಾಯಬೆಲೆ ಅಂಗಡಿಗಳಿಗೆ ಇಂಟರ್‌ನೆಟ್ ಸಂಪರ್ಕಕ್ಕೆ ಪೂರಕ ವ್ಯವಸ್ಥೆ ಕಲ್ಪಿಸುವಂತೆ," ಜನರು ಹಾಗೂ ಸಿಬ್ಬಂದಿಗಳು ಮನವಿ ಮಾಡಿದರು.

ಒಟ್ಟಾರೆ ಕುರುಬರಹಳ್ಳಿ ಗ್ರಾಮದಲ್ಲಿ ಬುಧವಾರ ಹಬ್ಬಕ್ಕಾಗಿ ಪಡಿತರ ಪಡೆಯೋಕೆ ಬಂದ ಗ್ರಾಹಕರಿಗೆ ಇಂಟರ್‌ನೆಟ್ ಶಾಕ್ ನೀಡಿದೆ.

ಆಧಾರ್ ಲಿಂಕ್ ಇದ್ದರೂ ಪದೇ ಪದೇ ಬೆರಳಚ್ಚು ಪಡೆಯೋದು ಎಷ್ಟರ ಮಟ್ಟಿಗೆ ಸರಿ. ಅಲ್ಲದೇ ಇಂಟರ್‌ನೆಟ್ ಸಮಸ್ಯೆಯಿಂದ ಹೀಗೇ ಉದ್ದುದ್ದ ಕ್ಯೂ ನಿಲ್ಲಿಸಿ ಯಾಕೆ ತೊಂದರೆ ನೀಡ್ತೀರಿ?ಅಂತ ಜನ ಸಾಮಾನ್ಯರು ಬೆರಳಚ್ಚು ವಿಧಾನದ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇನ್ನೂ ಸರ್ಕಾರ ದೂರ ಸಂಪರ್ಕ ಕ್ಷೇತ್ರಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿದರೂ ಗ್ರಾಮೀಣ ಭಾಗದ ಅದೆಷ್ಟೋ ಹಳ್ಳಿಗಳಿಗೆ ಸಮರ್ಪಕವಾಗಿ ಇಂಟರ್ ನೆಟ್ ಸೌಲಭ್ಯ ಇಂದಿಗೂ ಸರಿಯಾಗಿ ಸಿಕ್ಕಿಲ್ಲ.
ಇದರಿಂದ ನ್ಯಾಯಬೆಲೆ ಅಂಗಡಿಗಳಿಗೆ ಸರಿಯಾದ ಇಂಟರ್ ನೆಟ್ ವ್ಯವಸ್ಥೆ ಮಾಡಿ ಇಲ್ಲವೇ ಮೊದಲಿನಂತೆ ಪಡಿತರ ನೀಡಿ ಎಂದು ಗ್ರಾಮಸ್ಥರು ಹಿಡಿ ಶಾಪ ಹಾಕಿದ್ದಾರೆ.

English summary
The villagers are struggling to get ration in Kurubarahalli of Ramanagara due to Internet problems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X