ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಔರಾದ್ಕರ್ ವರದಿ ಜಾರಿಗೆ ಆಗ್ರಹಿಸಿ ಪೊಲೀಸ್ ಅಂಗಿ ತೊಟ್ಟು ಮೆಣಸಿನಕಾಯಿ ಹಂಚಿ ವಾಟಾಳ್ ಪ್ರತಿಭಟನೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಅಕ್ಟೋಬರ್ 4: ಔರಾದ್ಕರ್ ವರದಿ ಜಾರಿಯ ವಿಳಂಬ ಖಂಡಿಸಿ ರಾಮನಗರದ ಬಸ್ ನಿಲ್ದಾಣದಲ್ಲಿ ವಾಟಾಳ್ ನಾಗರಾಜ್, ಪೊಲೀಸ್ ಅಂಗಿ ಧರಿಸಿ, ಮೆಣಸಿನಕಾಯಿ ಹಂಚಿ ಪ್ರತಿಭಟನೆ ನಡೆಸಿದರು.

ಬಂಡೀಪುರ-ಕೇರಳ ರಾತ್ರಿ ಸಂಚಾರ ತೆರವುಗೊಳಿಸದಂತೆ ವಾಟಾಳ್ ಪ್ರತಿಭಟನೆಬಂಡೀಪುರ-ಕೇರಳ ರಾತ್ರಿ ಸಂಚಾರ ತೆರವುಗೊಳಿಸದಂತೆ ವಾಟಾಳ್ ಪ್ರತಿಭಟನೆ

ಬಿಜೆಪಿ ಸರ್ಕಾರ ಔರಾದ್ಕರ್ ವರದಿ ಜಾರಿಗೆ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದ ವಾಟಾಳ್ ನಾಗರಾಜ್, ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಪೊಲೀಸರಿಗೆ ನೀಡುತ್ತಿರುವ ಸಂಬಳ, ಭತ್ಯೆಗಳು ತೀರ ಕಡಿಮೆಯಿವೆ. ಆದ್ದರಿಂದ ಔರಾದ್ಕರ್ ವರದಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

Vatal Nagaraj Protested In Ramanagar For Implementation Of Auradkar Report

ಇದೇ ಸಂದರ್ಭದಲ್ಲಿ ನೆರೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಪ್ರಧಾನಿ ಮೋದಿ ಕುರಿತು ಮಾತನಾಡಿ, "ಮೋದಿ ಕೇರಳ ಮತ್ತು ಉತ್ತರ ಪ್ರದೇಶದ ಏಜೆಂಟ್, ಕರ್ನಾಟಕದ ವಿರೋಧಿ. ಕೇಂದ್ರದಿಂದ ಅನುದಾನ ತರುವಲ್ಲಿ ವಿಫಲವಾಗಿರುವ ರಾಜ್ಯದ ಸಂಸದರು ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಮೈಸೂರಿನಲ್ಲಿ ಸಂಸದರನ್ನು ಹರಾಜು ಹಾಕುವ ಪ್ರತಿಭಟನೆ ನಡೆಸಲಾಗುತ್ತದೆ" ಎಂದು ಎಚ್ಚರಿಸಿದರು.

English summary
Vatal Nagaraj protested in ramanagar by wearing police shirt and distributing chilli, demanding the implementation of the Auradkar Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X