ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ ಹುಚ್ಚಾಸ್ಪತ್ರೆಯಲ್ಲಿ ಇರಬೇಕಾಗಿತ್ತು; ವಾಟಾಳ್

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 04: "ಹುಚ್ಚಾಸ್ಪತ್ರೆಯ ವಿಶೇಷ ಘಟಕದಲ್ಲಿ ಇರಬೇಕಾದ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸೌಧದಲ್ಲಿದ್ದಾರೆ, ಅವರಿಗೆ ವಿಧಾನಸೌಧವೇ ಹುಚ್ಚಾಸ್ಪತ್ರೆ" ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ವ್ಯಂಗ್ಯವಾಡಿದರು.

ಸೋಮವಾರ ರಾಮನಗರದ ಐಜೂರು ವೃತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ತಡೆದು ವಾಟಾಳ್ ನಾಗರಾಜ್ ಕರ್ನಾಟಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದನ್ನು ಖಂಡಿಸಿದರು.

 ಮತ್ತೊಂದು ಬಂದ್ ಕರೆ ಕೊಟ್ಟ ವಾಟಾಳ್ ನಾಗರಾಜ್! ಮತ್ತೊಂದು ಬಂದ್ ಕರೆ ಕೊಟ್ಟ ವಾಟಾಳ್ ನಾಗರಾಜ್!

"ಮರಾಠ ಪ್ರಾಧಿಕಾರ ಖಂಡಿಸಿ ಮೊದಲ ಹಂತದ ಹೋರಾಟ ನಡೆಸಿದ್ದೇವೆ. ಜನವರಿ 9ರಂದು ಎರಡನೇ ಹಂತದ ಹೋರಾಟದ ಅಂಗವಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರೈಲುಗಳನ್ನು ತಡೆದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ" ಎಂದು ವಾಟಾಳ್ ನಾಗರಾಜ್ ಹೇಳಿದರು.

ಎಂಜಿ ರಸ್ತೆಯಲ್ಲಿ ಹೊಸ ವರ್ಷ ಆಚರಣೆ: ವಾಟಾಳ್ ನಾಗರಾಜ್ ಬಂಧನಎಂಜಿ ರಸ್ತೆಯಲ್ಲಿ ಹೊಸ ವರ್ಷ ಆಚರಣೆ: ವಾಟಾಳ್ ನಾಗರಾಜ್ ಬಂಧನ

Vatal Nagaraj Protest In Bengaluru Mysuru Road

"ಕರ್ನಾಟಕದ ‌‌‌ಸರ್ಕಾರಕ್ಕೆ ಬುದ್ಧಿ, ತಲೆ ಎರಡೂ ಇಲ್ಲಾ. ಯಡಿಯೂರಪ್ಪ ಹುಚ್ಚಾಸ್ಪತ್ರೆಯ ಸ್ಪೆಷಲ್ ವಾರ್ಡ್‌ನಲ್ಲಿ ಇರಬೇಕಾಗಿತ್ತು. ಅದರ ಬದಲು ವಿಧಾನಸೌಧದಲ್ಲಿ ಇದ್ದಾರೆ. ಬಿಜೆಪಿಯಲ್ಲಿ ಸಚಿವರು ದಿಕ್ಕು ತಪ್ಪಿ ಹೋಗಿದ್ದಾರೆ" ಎಂದು ವಾಟಾಳ್ ದೂರಿದರು.

ಸುವರ್ಣಸೌಧವನ್ನು ಮರಾಠ ಶ್ರೀಮಂತರಿಗೆ ಮಾರುತ್ತಾರೆ: ವಾಟಾಳ್ಸುವರ್ಣಸೌಧವನ್ನು ಮರಾಠ ಶ್ರೀಮಂತರಿಗೆ ಮಾರುತ್ತಾರೆ: ವಾಟಾಳ್

"ಯಡಿಯೂರಪ್ಪನ ಸರ್ಕಾರ ಅತಿ ಹೀನಾಯ ವಾದ ಸರ್ಕಾರ, ಆಡಳಿತ ಸಂಪೂರ್ಣವಾಗಿ ಕುಲಗೆಟ್ಟು ಹೋಗಿದೆ. ಅತ್ಯಂತ ಕೆಳ ದರ್ಚೆಯ ಸರ್ಕಾರ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ" ಎಂದು ವಾಟಾಳ್ ನಾಗರಾಜ್ ವಿರುದ್ದ ಆರೋಪವನ್ನು ಮಾಡಿದರು.

Vatal Nagaraj Protest In Bengaluru Mysuru Road

Recommended Video

ರೋಹಿತ್ ಶರ್ಮಾ ವಿರುದ್ಧ ನಮ್ಮ ಯೋಜನೆ ಸಿದ್ಧವಾಗಿದೆ ಎಂದ ಆಸಿಸ್ ಸ್ಪಿನ್ನರ್ | Oneindia Kannada

"ಮುಖ್ಯಮಂತ್ರಿ ಯಡಿಯೂರಪ್ಪ ಚುನಾವಣೆಗಾಗಿ ಅನುಭವ ಪಂಟಪದ ನಾಟಕವಾಡುತ್ತಿದ್ದಾರೆ. ಇಷ್ಟು ದಿನ ಅನುಭವ ಮಂಟಪ ಯಾಕೆ ನೆನಪಾಗಲಿಲ್ಲ?, ಬಸವ ಕಲ್ಯಾಣದಲ್ಲಿ ಮುಂದೆ ನಡೆಯುವ ಚುನಾವಣೆಗಾಗಿ ಅನುಭವ ಮಂಟಪ ಅಭಿವೃದ್ಧಿ ನಾಟಕವಾಡುವ ಮೂಲಕ ಬಸವಣ್ಣನಿಗೆ ಯಡಿಯೂರಪ್ಪ ಅವಮಾನ ಮಾಡಿದ್ದಾರೆ" ಎಂದರು.

English summary
Kannada Chaluvali Vatal Paksha leader Vatal Nagaraj staged protest at Bengaluru-Mysuru road against Karnataka government decision of formation on Maratha development board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X