ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ವಧರ್ಮೀಯರನ್ನು ಕರೆದು ಭೋಜನ ಆಯೋಜಿಸುತ್ತೇವೆ: ಪೇಜಾವರ ಶ್ರೀ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂನ್. 13: ಇಫ್ತಿಯಾರ್ ಕೂಟಕ್ಕೆ ಯಾವ ವಿರೋಧವೂ ಇಲ್ಲ. ಕೆಲವರು ಮಾತ್ರ ಟೀಕೆ ಮಾಡಬಹುದು ಅಷ್ಟೇ, ನಮ್ಮದು ಸ್ನೇಹಕೂಟ ಭೋಜನ. ಇಫ್ತಿಯಾರ್ ಕೂಟವಲ್ಲ. ಇದೇ ವರ್ಷ ಸರ್ವಧರ್ಮೀಯರನ್ನೆಲ್ಲಾ ಕರೆದು ಭೋಜನ ಆಯೋಜಿಸುತ್ತೇವೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳು ತಿಳಿಸಿದರು.

ರಾಮನಗರಕ್ಕೆ ಮಂಗಳವಾರ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಆರ್‌ಎಸ್‌ಎಸ್ ಮುಖಂಡರು ಅದಕ್ಕೆ ಯಾವ ವಿರೋಧ, ಅಭ್ಯಂತರವೂ ಇಲ್ಲವೆಂದಿದ್ದಾರೆ.

ಕೊನೆ ಗಳಿಗೆಗೆ ಇಫ್ತಾರ್ ಕೂಟ ರದ್ದು: ಒತ್ತಡಕ್ಕೆ ಮಣಿದರೇ ಪೇಜಾವರ ಶ್ರೀ?ಕೊನೆ ಗಳಿಗೆಗೆ ಇಫ್ತಾರ್ ಕೂಟ ರದ್ದು: ಒತ್ತಡಕ್ಕೆ ಮಣಿದರೇ ಪೇಜಾವರ ಶ್ರೀ?

ರಾಜಕೀಯ ಪಕ್ಷದವರು, ಸಮಾಜದ ಉನ್ನತ ಸ್ಥಾನದಲ್ಲಿರುವವರು ಸಹ ಈ ಕೂಟದ ಬಗ್ಗೆ ವಿರೋಧ ವ್ಯಕ್ತಪಡಿಸಿಲ್ಲ. ಇದು ಇಫ್ತಿಯಾರ್ ಕೂಟವಲ್ಲ ಸ್ನೇಹಕೂಟವಾದ್ದರಿಂದ ಇದೇ ಸಮಯದಲ್ಲಿ ಆಗಬೇಕು ಅಂತಿಲ್ಲ. ಯಾವಾಗ ಬೇಕಾದರೂ ಆಗಬಹುದು.

Udupi Pejawar Sri says There is no opposition to the Iftar party

ಕ್ರಿಶ್ಚಿಯನ್ನರು, ಮುಸಲ್ಮಾನರು, ಅಲ್ಪಸಂಖ್ಯಾತರು ಸೇರಿದಂತೆ ಸರ್ವಧಮೀಯರನ್ನೇಲ್ಲ ಕರೆದು ಭೋಜನ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ರಾಜಕೀಯ ವಿಚಾರವಾಗಿ ನಾವಾಗಿಯೇ ಪ್ರವೇಶಿಸುವುದಿಲ್ಲ, ನಾವು ದೇಶದ ಹಿತದೃಷ್ಟಿಯಿಂದ ಸಲಹೆ ನೀಡುತ್ತೇವೆ. ಅಲ್ಲದೇ, ಪಕ್ಷ ಚುನಾವಣಾ ರಾಜಕೀಯ ಮಾಡುವುದಿಲ್ಲ ಎಲ್ಲ ಪಕ್ಷದವರು ನಮ್ಮ ಸಂಪರ್ಕದಲ್ಲಿದ್ದಾರೆ.

Udupi Pejawar Sri says There is no opposition to the Iftar party

ನಮ್ಮ ಕೆಲಸ ಧರ್ಮ, ಆಧ್ಯಾತ್ಮಿಕ ಪ್ರಚಾರ ಸಮಾಜಸೇವೆ ಮಾಡುವುದು. ಇನ್ನು ಸಲಹೆ ಸ್ವೀಕರಿಸುವುದು, ಬಿಡುವುದು ಅವರರವರ ಇಷ್ಟ ಎಂದ ಶ್ರೀಗಳು ಪ್ರಸ್ತುತ ಜಾತಿ ರಾಜಕೀಯದ ಬಗ್ಗೆ ನಮಗೆ ಬೇಸರವಿದೆ ಎಂದರು.

English summary
Udupi Pejawar Sri said There is no opposition to the Iftar party. Only some people can criticize it. This year, we call all religious people and organize dinner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X