ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಸು ತೊಳೆಯಲು ಹೋದ ಬಾಲಕ, ರಕ್ಷಿಸಲು ಹೋದ ಮಹಿಳೆ ನೀರು ಪಾಲು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಫೆಬ್ರವರಿ 02: ಜಮೀನು ಬಳಿಯ ಹೊಂಡದಲ್ಲಿ ಹಸುವಿನ ಮೈತೊಳೆಯಲು ಹೋಗಿದ್ದ ಬಾಲಕ ಹಾಗೂ ಆತನ್ನು ರಕ್ಷಿಸಲು ಮುಂದಾದ ಮಹಿಳೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕನಕಪುರದ ಹುಣಸೆಮರದದೊಡ್ಡಿ ಗ್ರಾಮದಲ್ಲಿ ನಡೆದಿದೆ.

ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನು ಕಸಬಾ ಹೋಬಳಿಯ ಹುಣಸೆಮರದದೊಡ್ಡಿ ಗ್ರಾಮದ ದೀಪು (11) ಹಾಗೂ ಆತನ ಸಂಬಂಧಿಯಾದ ಭಾರತಿ (30) ಎಂದು ಗುರುತಿಸಲಾಗಿದೆ. ಬಾಲಕ ನೀರು ಪಾಲಾಗುತ್ತಿದ್ದಾಗ ಭಾರತಿ ಆತನನ್ನು ರಕ್ಷಣೆ ಮಾಡಲು ಹೋಗಿದ್ದರು.

 ಚಾಮರಾಜನಗರ; ಗರ್ಭಿಣಿ ಮಗಳ ನೋಡಲು ಬಂದ ತಂದೆ ನೀರುಪಾಲು ಚಾಮರಾಜನಗರ; ಗರ್ಭಿಣಿ ಮಗಳ ನೋಡಲು ಬಂದ ತಂದೆ ನೀರುಪಾಲು

ಗ್ರಾಮದ ಬಳಿಯ ಹೊಂಡದಲ್ಲಿ ಹಸುವನ್ನು ತೊಳೆಯಲು ದೀಪು ಹೋಗಿದ್ದಾಗ ಕಾಲು ಜಾರಿ ನೀರಿನಲ್ಲಿ ಮುಳುತ್ತಿದ್ದ. ಆಗ ಭಾರತಿ ದೀಪುವನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆಗ ಇಬ್ಬರೂ ಕೆಸರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.

ಅವಳಿ ನಗರವಾಗಿ ಚನ್ನಪಟ್ಟಣ-ರಾಮನಗರ ಅಭಿವೃದ್ಧಿ; ಎಚ್‌ಡಿಕೆ ಅವಳಿ ನಗರವಾಗಿ ಚನ್ನಪಟ್ಟಣ-ರಾಮನಗರ ಅಭಿವೃದ್ಧಿ; ಎಚ್‌ಡಿಕೆ

Two Dies In Kanakapura After Drown In Pound

ಹೊಂಡದ ಕೆಸರಿನಲ್ಲಿ ಸಿಲುಕಿ ಇಬ್ಬರು ಮುಳುಗುತ್ತಿದ್ದಾಗ ಅಲ್ಲಿದ್ದ ಜನರು ರಕ್ಷಣೆ ಮಾಡಲ ಪ್ರಯತ್ನ ನಡೆಸಿದ್ದಾರೆ. ಆದರೆ, ಇಬ್ಬರೂ ನೀರಿನಲ್ಲಿ ಮುಳುಗಿದರು ಎಂದು ಸ್ಥಳೀಯರು ಹೇಳಿದ್ದಾರೆ.

ರಾಮನಗರ; ಹೊತ್ತಿ ಉರಿದ ಬ್ಯಾಟರಿ ತಯಾರಿಕಾ ಕಾರ್ಖನೆ ರಾಮನಗರ; ಹೊತ್ತಿ ಉರಿದ ಬ್ಯಾಟರಿ ತಯಾರಿಕಾ ಕಾರ್ಖನೆ

Recommended Video

ರಾಜ್ಯ ರಾಜಕೀಯದಲ್ಲಿ 'ಡಿನ್ನರ್' ಪಾಲಿಟಿಕ್ಸ್..! | Oneindia Kannada

ಕಕಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ. ಪೋಲಿಸರು ಶವ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರ ಮಾಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

English summary
11 year old boy Deepu and 30 year old Bharathi drowned in pound in Kanakapura taluk Hunasemaradadoddi village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X