• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಡದಿ; ಆಮ್ಲಜನಕ ಉತ್ಪದನಾ ಘಟಕ ನಿರ್ಮಿಸಲಿದೆ ಟಯೋಟಾ

|
Google Oneindia Kannada News

ರಾಮನಗರ, ಜೂನ್ 14; ಏಷ್ಯಾದ ಅತಿ ದೊಡ್ಡ ಕಾರು ತಯಾರಿಕ ಕಾರ್ಖನೆಯಾದ ಟೊಯೋಟಾ ಬಿಡದಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಲಿದೆ. ಘಟಕ ಸ್ಥಾಪನೆಗೆ ಭೂಮಿ ಪೂಜೆಯನ್ನು ಮಾಡಲಾಗಿದೆ.

ಬಿಡದಿಯಲ್ಲಿ ಟೊಯೋಟಾ ಕಾರು ಉತ್ಪಾದನಾ ಕಾರ್ಖನೆ ಇದೆ. ಕೋವಿಡ್ ಸಂದರ್ಭದಲ್ಲಿ ರಾಮನಗರ ಜಿಲ್ಲಾಡಳಿತ ಹಲವು ರೀತಿಯಲ್ಲಿ ಕಂಪನಿಯು ಈಗಾಗಲೇ ಸಹಾಯ ಮಾಡಿದೆ.

ಲಾಕ್‌ಡೌನ್ ನಡುವೆ ಮಾರಾಟದಲ್ಲಿ ಟೊಯೋಟಾ ದಾಖಲೆ ಲಾಕ್‌ಡೌನ್ ನಡುವೆ ಮಾರಾಟದಲ್ಲಿ ಟೊಯೋಟಾ ದಾಖಲೆ

ಈ ಹಿಂದೆ ಘೋಷಿಸಿದಂತೆ ಬಿಡದಿ ಸಮುದಾಯ ಆರೋಗ್ಯ ಕೇಂದ್ರವನ್ನು ಅತ್ಯಾಧುನಿಕವಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಇದೀಗ ನೂತನ ಆಮ್ಲಜನಕ ಉತ್ಪಾದನಾ ಘಟಕವನ್ನು ಸ್ಥಾಪಿಸುವುದಾಗಿ ಕಂಪನಿ ಹೇಳಿದೆ.

ಕೋವಿಡ್; ವೈದ್ಯಕೀಯ ಉಪಕರಣ ಕೊಡುಗೆ ಕೊಟ್ಟ ಟೊಯೋಟಾ ಕೋವಿಡ್; ವೈದ್ಯಕೀಯ ಉಪಕರಣ ಕೊಡುಗೆ ಕೊಟ್ಟ ಟೊಯೋಟಾ

ಆಮ್ಲಜನಕ ಘಟಕವು ದಿನಕ್ಕೆ ಸುಮಾರು 50 ಸಿಲಿಂಡರ್‌ಗಳನ್ನು ಭರ್ತಿ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದನ್ನು ಬಿಡದಿ ಸಿ. ಎಚ್. ಸಿ ಮತ್ತು ರಾಮನಗರ ಜಿಲ್ಲಾಸ್ಪತ್ರೆಗೆ ಪೂರೈಸಲಾಗುತ್ತದೆ. ನೂತನ ಘಟಕವು ನವೆಂಬರ್ 2021ರ ಅಂತ್ಯದ ವೇಳೆಗೆ ಬಳಕೆಗೆ ಸಿದ್ಧವಾಗಲಿದೆ.

ಕೋವಿಡ್ ಲಸಿಕೆ ಕೇಂದ್ರ ಆರಂಭಿಸಿದ ಬಿಡದಿ ಟೊಯೋಟಾ ಘಟಕ ಕೋವಿಡ್ ಲಸಿಕೆ ಕೇಂದ್ರ ಆರಂಭಿಸಿದ ಬಿಡದಿ ಟೊಯೋಟಾ ಘಟಕ

ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಶಾಸಕ ಎ. ಮಂಜುನಾಥ್ ಭೂಮಿ ಪೂಜೆ ಮಾಡಿದರು. "ಈ ಘಟಕ ಇದು ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ನಮ್ಮ ಪ್ರಯತ್ನಗಳಿಗೆ ಸಹಕಾರಿಯಾಗಿದೆ"ಎಂದರು.

English summary
Toyota Kirloskar motors announced that it will set up oxygen generation plant at Bidadi community health center, Ramanagara district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X