• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

116ನೇ ದಿನವೂ ಮುಂದುವರೆದ ಟೊಯೊಟಾ ಕಾರ್ಮಿಕ ಪ್ರತಿಭಟನೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮಾರ್ಚ್ 4: ಏಷ್ಯಾದ ಅತಿ ದೊಡ್ಡ ಕಾರು ತಯಾರಿಕಾ ಕಾರ್ಖಾನೆ ಟೊಯೊಟಾ ಕಿರ್ಲೋಸ್ಕರ್ ಕಂಪನಿಯ ಕಾರ್ಮಿಕ ಮುಷ್ಕರ ಹಿಂತೆಗೆತ ಘೋಷಣೆಯ ನಂತರವೂ 116ನೇ ದಿನ ಪ್ರತಿಭಟನೆ ಮುಂದುವರೆದಿದೆ ಎಂದು ಟೊಯೊಟಾ ಕಾರ್ಮಿಕ ಸಂಘಟನೆ ಘೋಷಣೆ ಮಾಡಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಟೊಯೊಟಾ ಕಾರ್ಮಿಕ ಸಂಘಟನೆ ಅಧ್ಯಕ್ಷ ಚಕ್ಕರೆ ಪ್ರಸನ್ನ ಕುಮಾರ್, ""ಕಳೆದ ವರ್ಷ ನ.10ರಂದು ಕಾರ್ಖಾನೆಯ ಆಡಳಿತ ಮಂಡಳಿಯ ಧೋರಣೆಯನ್ನು ಖಂಡಿಸಿ ಪ್ರಾರಂಭವಾದ ಕಾರ್ಮಿಕರ ಹೋರಾಟ ಇನ್ನೂ ಅಂತ್ಯ ಕಂಡಿಲ್ಲ, ನಮ್ಮ ಬೇಡಿಕೆಗಳು ಈಡೇರುವವರೆಗೆ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ'' ಎಂದು ಸ್ಪಷ್ಟಪಡಿಸಿದರು.

ಕೊನೆಗೂ ಟೊಯೊಟಾ ಕಾರ್ಮಿಕ ಮುಷ್ಕರ ಅಂತ್ಯ: ಟಿಕೆಎಂ ಅಧಿಕೃತ ಹೇಳಿಕೆಕೊನೆಗೂ ಟೊಯೊಟಾ ಕಾರ್ಮಿಕ ಮುಷ್ಕರ ಅಂತ್ಯ: ಟಿಕೆಎಂ ಅಧಿಕೃತ ಹೇಳಿಕೆ

ಕಾರ್ಮಿಕರು ಮುಚ್ಚಳಿಕೆ ಇಲ್ಲದೇ ಕರ್ತವ್ಯಕ್ಕಾಗಿ ಹಾಜರಾಗಬಹುದು ಎಂದು ಟೊಯೊಟೊ ಮ್ಯಾನೇಜ್ಮೆಂಟ್ ನೋಟಿಸ್ ನೀಡಿದ್ದರಿಂದ, ಯೂನಿಯನ್ ತನ್ನ ಸದಸ್ಯರಿಗೆ ಕರ್ತವ್ಯಕ್ಕಾಗಿ ಹಾಜರಾಗಲು ಸಲಹೆ ನೀಡಿದ್ದು, ಇದು ಕಾರ್ಮಿಕ ಸಂಘಕ್ಕೆ ದೊರೆತ ನೈತಿಕ ವಿಜಯವಾಗಿದೆ. ಆದಾಗ್ಯೂ, ಇತರ ಬೇಡಿಕೆಗಳು ಬಾಕಿ ಉಳಿದಿವೆ. ಆದ್ದರಿಂದ, ಆಂದೋಲನವು ಕಂಪನಿಯ ಒಳಗೆ ಮತ್ತು ಹೊರಗೆ ನಿರಂತರವಾಗಿ ನ್ಯಾಯ ಸಿಗುವವರೆಗೂ ಮುಂದುವರಿಯುತ್ತದೆ'' ಎಂದಿದ್ದಾರೆ.

ಈ ಕೆಳಗಿನ ಬೇಡಿಕೆಗಳನ್ನು ಸಾಕಾರಗೊಳಿಸಲು ಅನಿರ್ದಿಷ್ಟ ಮುಷ್ಕರದಲ್ಲಿ ಅಂತ್ಯಗೊಳ್ಳುವ ಒಂದು ದಿನದ ಮುಷ್ಕರ, ಪ್ರತಿದಿನ ಗೇಟ್ ಮುಂದೆ ಪ್ರತಿಭಟನೆ, ಧರಣಿ, ಸರಣಿ ಉಪವಾಸ ಸತ್ಯಾಗ್ರಹ ರೂಪದಲ್ಲಿ ಆಂದೋಲನವನ್ನು ಮುಂದುವರಿಸಲು ಯೂನಿಯನ್ ನಿರ್ಧರಿಸಿದೆ.

1. ದಿನಾಂಕ 10.11.2020 ರಿಂದ 01.03 2021 ರವರೆಗಿನ ಲಾಕ್ ಔಟ್ ಅವಧಿಗೆ ಪೂರ್ಣ ವೇತನ ನೀಡಬೇಕು.

2. ಯೂನಿಯನ್ ಜೊತೆ ಕೆಲಸದ ಹೊರೆ ಬಗ್ಗೆ ಮಾತುಕತೆ ಮಾಡಿ ಒಪ್ಪಂದ ಮಾಡಬೇಕು

3. ಈ ಅವಧಿಯ ವಜಾ, ಅಮಾನತು ಆದೇಶ, ಚಾರ್ಜ್‌ಶೀಟ್‌ಗಳನ್ನು ಹಿಂತೆಗೆದುಕೊಳ್ಳಬೇಕು,

4. ವಾರದಲ್ಲಿ 5 ದಿನಗಳ ಕೆಲಸ ಮರು ಸ್ಥಾಪನೆ.

5. ನೇರವಾಗಿ ಉತ್ಪಾದನೆಯಲ್ಲಿ ಗುತ್ತಿಗೆ ಕಾರ್ಮಿಕರನ್ನು ಬಳಸುವುದು ನಿಲ್ಲಿಸಬೇಕು.

6. ನ್ಯಾಯಕ್ಕಾಗಿ ಹೋರಾಡುವ ಸಂಕಲ್ಪದಲ್ಲಿ ಕಾರ್ಮಿಕರು ಒಂದಾಗಿದ್ದಾರೆ ಎಂದು ಕಾರ್ಮಿಕ ಸಂಘಟನೆ ತನ್ನ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

   10 ದಿನ ಸದನದಿಂದ ಬ್ಯಾನ್ ಮಾಡಿದ್ದು ಯಾಕೆ ?? | Bhadravati | Oneinda Kannada

   ಮಂಗಳವಾರ (ಮಾ.2) ಟಿಕೆಎಂ ಪತ್ರಿಕಾ ಪ್ರಕಟಣೆ ಹೊರಡಿಸಿ, ಟೊಯೊಟಾ ಕಾರ್ಮಿಕರ ಪ್ರತಿಭಟನೆ ಅಂತ್ಯಗೊಂಡಿದೆ. ಕಾರ್ಮಿಕರು ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿಸಿತ್ತು.

   English summary
   The Toyota Labour Association has announced that the Labour's protest continued to 116th day.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X