ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

43 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ ಟೊಯೋಟಾ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜುಲೈ 25; ಬಿಡದಿಯಲ್ಲಿರುವ ಕಾರು ತಯಾರಿಕಾ ಕಂಪನಿ ಟೊಯೋಟಾ ಕಿರ್ಲೋಸ್ಕರ್ ತನ್ನ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು 43 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ.

ರಾಮನಗರ ಜಿಲ್ಲೆ ಮಾತ್ರವಲ್ಲ ದೇಶಾದ್ಯಂತ 267 ಗ್ರಾಮಗಳಲ್ಲಿ 2,80,000 ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಪ್ರಯೋಜನ ನೀಡಿರುವ ಕಂಪನಿ ಬೆಂಗಳೂರು ಸಮೀಪದ ಕುರುಬರಹಳ್ಳಿ ಮತ್ತು ಕೊಡಿಗೆಹಳ್ಳಿ ಗ್ರಾಮಗಳಲ್ಲಿ ಎರಡು ಘಟಕ ನಿರ್ಮಾಣ ಮಾಡಿದೆ.

ಲಾಕ್‌ಡೌನ್ ನಡುವೆ ಮಾರಾಟದಲ್ಲಿ ಟೊಯೋಟಾ ದಾಖಲೆ ಲಾಕ್‌ಡೌನ್ ನಡುವೆ ಮಾರಾಟದಲ್ಲಿ ಟೊಯೋಟಾ ದಾಖಲೆ

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಡಿ. ವಿ. ಸದಾನಂದ ಗೌಡ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದರು. ಈ ಘಟಕವು 6 ಹಂತದ ಶುದ್ಧೀಕರಣ ಮತ್ತು ಟೋಟಲ್ ಡಿಸ್ಟರ್ಡ್ ಸಾಲಿಡ್ಸ್ (ಟಿಡಿಎಸ್) ಮತ್ತು ಪಿಎಚ್ ಮೌಲ್ಯದ ದತ್ತಾಂಶವನ್ನು ಒದಗಿಸುವ ರಿಯಲ್ ಟೈಮ್ ಮೇಲ್ವಿಚಾರಣೆ ವ್ಯವಸ್ಥೆ ಜೊತೆಗೆ ಗಂಟೆಗೆ 1000 ಲೀಟರ್ ಸಾಮರ್ಥ್ಯ ಹೊಂದಿದೆ.

ರಾಮನಗರ; ಹೈಟೆಕ್ ರೇಷ್ಮೆ ಮಾರುಕಟ್ಟೆ, ಮಾವು ಸಂಸ್ಕರಣಾ ಘಟಕ ಸ್ಥಾಪನೆ ರಾಮನಗರ; ಹೈಟೆಕ್ ರೇಷ್ಮೆ ಮಾರುಕಟ್ಟೆ, ಮಾವು ಸಂಸ್ಕರಣಾ ಘಟಕ ಸ್ಥಾಪನೆ

Toyota Kirloskar Set Up 43 Drinking Water Plant At Villages

ಘಟಕವು ಸೌರವ್ಯೂಹ, ವಿದ್ಯುತ್ ಬ್ಯಾಕಪ್ ಮತ್ತು ತ್ಯಾಜ್ಯ ನೀರಿನ ನಿರ್ವಹಣಾ ಕಾರ್ಯವಿಧಾನವನ್ನು ಹೊಂದಿದೆ. ಘಟಕದ ಸರಿಯಾದ ಕಾರ್ಯನಿರ್ವಹಣೆ ಮತ್ತು ಟಿಕೆಎಂ ಕಾರ್ಯಕ್ರಮದ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಏಜೆನ್ಸಿಯೊಂದಿಗೆ 15 ವರ್ಷಗಳ ನಿರ್ವಹಣಾ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.

ಕೋವಿಡ್; ವೈದ್ಯಕೀಯ ಉಪಕರಣ ಕೊಡುಗೆ ಕೊಟ್ಟ ಟೊಯೋಟಾ ಕೋವಿಡ್; ವೈದ್ಯಕೀಯ ಉಪಕರಣ ಕೊಡುಗೆ ಕೊಟ್ಟ ಟೊಯೋಟಾ

ಡಿ. ವಿ. ಸದಾನಂದ ಗೌಡ ಮಾತನಾಡಿ, "ಉತ್ತಮ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಅವಶ್ಯಕವಾಗಿದೆ. ಮಾನವನ ಉಳಿವಿಗೆ ಮೂಲಭೂತ ಅವಶ್ಯಕತೆಯೂ ಇದಾಗಿದೆ. ಎಲ್ಲರಿಗೂ ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ವಾಸಿಸುವ ಎಲ್ಲರಿಗೂ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವುದು ನಮ್ಮ ಪ್ರಾಥಮಿಕ ಆದ್ಯತೆಯ ಗುರಿಗಳಲ್ಲಿ ಒಂದು" ಎಂದರು.

"ಟೊಯೋಟಾದಂತಹ ಕಾರ್ಪೊರೇಟ್ ಕಂಪನಿಗಳು ಸಾರ್ವಜನಿಕ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು, ನೈರ್ಮಲ್ಯವನ್ನು ಕಾಪಾಡಲು ಮತ್ತು ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರಿನ ಲಭ್ಯತೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದರು.

Recommended Video

Vehicles floating? ಲಕ್ಷ ಲಕ್ಷ ಬೆಲೆಬಾಳುವ ಕಾರ್ ಪರಿಸ್ಥಿತಿ ನೋಡಿ!! | Oneindia Kannada

English summary
Toyota Kirloskar plant Bidadi, Ramanagara has set up 43 drinking water plant at villages. It singed for agreement to maintain this plant for 15 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X