ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಂಬ್ಯುಲೆನ್ಸ್ ಕೊಡುಗೆ ನೀಡಿದ ಟೊಯೊಟೊ ಕಿರ್ಲೋಸ್ಕರ್ ಅಟೋಪಾರ್ಟ್ಸ್

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 8: ಕೋವಿಡ್ ಸಂಕಷ್ಟದ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಟೊಯೊಟೊ ಕಿರ್ಲೋಸ್ಕರ್ ಅಟೋಪಾರ್ಟ್ಸ್ ಕಾರ್ಖಾನೆಯು ರಾಮನಗರ ಜಿಲ್ಲಾಡಳಿತಕ್ಕೆ ಆಂಬ್ಯುಲೆನ್ಸ್ ನೀಡುವ ಮೂಲಕ ಸಹಾಯ ಹಸ್ತ ಚಾಚಿದೆ.

ಬಿಡದಿಯ ಟೊಯೊಟೊ ಕಿರ್ಲೋಸ್ಕರ್ ಆಟೋಪಾರ್ಟ್ಸ್ ಕಾರ್ಖಾನೆ ತನ್ನ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ಯೋಜನೆಯಡಿ 27 ಲಕ್ಷ ವೆಚ್ಚದ ಆಂಬ್ಯುಲೆನ್ಸ್ ವಾಹನವನ್ನು ರಾಮನಗರ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ರವರಿಗೆ ಹಸ್ತಾಂತರಿಸಿದರು.

ಮಳೆಯಲ್ಲೇ ಮಳೆಯಲ್ಲೇ "ಭಾರತ್ ಬಂದ್' ಬೆಂಬಲಿಸಿ ರೈತ ಸಂಘಟನೆಗಳಿಂದ ಪ್ರತಿಭಟನೆ

ಆಂಬ್ಯುಲೆನ್ಸ್ ವಾಹನದಲ್ಲಿ ವೆಂಟಿಲೇಟರ್ ವ್ಯವಸ್ಥೆ ಸಹ ಇದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಾರ್ವಜನಿಕರ ಸೇವೆಗೆ ಸದುಪಯೋಗ ಪಡಿಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದರು.

Toyota Kirloskar Auto Parts contributes Ambulance To Ramanagara District Administration

ಟೊಯೊಟೊ ಕಿರ್ಲೋಸ್ಕರ್ ಅಟೋಪಾರ್ಟ್ಸ್, ಜನರಲ್ ಮ್ಯಾನೇಜರ್ ನಾಗರಾಜ ಬಿ.ಎಸ್ ಅವರು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರಿಗೆ ಆಂಬ್ಯುಲೆನ್ಸ್ ಕೀ ಹಸ್ತಾಂತರಿಸಿದರು.

Toyota Kirloskar Auto Parts contributes Ambulance To Ramanagara District Administration

Recommended Video

Sanju samson ಹಾಗು Steven Smith ಕ್ಷೇತ್ರರಕ್ಷಣೆಯಲ್ಲಿ ನಂಬರ್ 1 | Oneindia Kannada

ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ಆರೋಗ್ಯ ಇಲಾಖೆಯ ಡಾ.ಮಂಜುನಾಥ್, ಡಾ.ಪದ್ಮ, ಡಾ.ಕಿರಣ್ ಶಂಕರ್, ಟೊಯೋಟಾ ಕಿರ್ಲೋಸ್ಕರ್ ಅಟೋಪಾರ್ಟ್ಸ್ ನ ಸಿ.ಎಸ್.ಆರ್ ವಿಭಾಗದ ಮ್ಯಾನೇಜರ್ ರೋಹಿತ ಸ್ವಾಮಿ, ಪ್ರಾಜೆಕ್ಟ್ ಮ್ಯಾನೇಜರ್ ಶಿವಯೋಗಿ ಉಪಸ್ಥಿತರಿದ್ದರು.

English summary
The Toyota Kirloskar Autoparts factory in Bidadi handed over an ambulance vehicle worth Rs 27 lakh to Ramanagara district collector MS Archana under its Social Responsibility (CSR) scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X