ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಮೂರು ಕಾರ್ಮಿಕರನ್ನು ವಜಾ ಮಾಡಿದ‌ ಟೊಯೊಟಾ ಆಡಳಿತ ಮಂಡಳಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಫೆಬ್ರವರಿ 23: ಏಷ್ಯಾದ ಪ್ರಸಿದ್ಧ ಕಾರು ತಯಾರಿಕ ಕಂಪನಿ ಟೊಯೊಟಾ ಕಿರ್ಲೋಸ್ಕರ್ ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟು ತಾರಕ್ಕೇರಿದೆ.

ಹಲವು ಸುತ್ತಿನಲ್ಲಿ ನಡೆದ ಸರ್ಕಾರ, ಟೊಯೊಟಾ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ನಡೆದ ಸಂದಾನ ಸಭೆಗಳು ವಿಫಲವಾಗಿದ್ದು, ಈ ನಡುವೆ ಕೆಲಸಕ್ಕೆ ಹಾಜರಾಗುತ್ತಿದ್ದ ಕೆಲ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮೂರು ಮಂದಿ ಧರಣಿ ನಿರತ ಕಾರ್ಮಿಕರನ್ನು ಆಡಳಿತ ಮಂಡಳಿ ವಜಾಗೊಳಿಸಿದೆ.

ಕಾರ್ಮಿಕರಿಗೆ ಸೇವಾ ಭದ್ರತೆ ನೀಡುವಂತಹ ಕಾಯ್ದೆ ತಿದ್ದುಪಡಿ ಮಾಡಿ: ನಂಜಾವದೂತ ಶ್ರೀಕಾರ್ಮಿಕರಿಗೆ ಸೇವಾ ಭದ್ರತೆ ನೀಡುವಂತಹ ಕಾಯ್ದೆ ತಿದ್ದುಪಡಿ ಮಾಡಿ: ನಂಜಾವದೂತ ಶ್ರೀ

ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆ ಪ್ರಮುಖ ಸದಸ್ಯರಾದ ಬಸವರಾಜ್ ಹವಾಲ್ದಾರ್, ರಾಜಶೇಖರ ಮೂರ್ತಿ ಮತ್ತು ಅರಣ್ ಕುಮಾರ್ ಎಂಬ ಮೂರು ಮಂದಿ ಪ್ರತಿಭಟನಾ ನಿರತ ಕಾರ್ಮಿಕರನ್ನು ಟೊಯೊಟಾ ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿದೆ.

Ramanagara: Toyota Governing Council Dismissed Three Workers

ಫೆ.22 ರಂದು ಕೆಲಸಕ್ಕೆ ಹಾಜರಾಗುತ್ತಿದ್ದ ಕೆಲ ಕಾರ್ಮಿಕರ ಮೇಲೆ ಕಾರ್ಮಿಕ ಸಂಘಟನೆಯ ಐವರು ಸಕ್ರಿಯ ಸದಸ್ಯರು ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಈ ಇದರಿಂದ ಇಬ್ಬರು ಕೆಲಸಗಾರರು ಗಾಯಗೊಂಡಿದ್ದಾರೆ. ಅವರನ್ನು ಕಂಪನಿಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹಲ್ಲೆಗೊಳಗಾದವರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದರು ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷ ನ.9 ರಂದು ಆರಂಭವಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಾರ್ಮಿಕರ ಪ್ರತಿಭಟನೆ ಹೊರತಾಗಿಯೂ, ಬಹುತೇಕ ಸದಸ್ಯರು ಕಾರ್ಮಿಕ ಸಂಘಟನೆಗಳ ಆದೇಶಗಳನ್ನು ವಿರೋಧಿಸಿದ್ದಾರೆ. ಪ್ರಸ್ತುತ ಗಾಯಗೊಂಡ ಸದಸ್ಯರ ಆರೋಗ್ಯ ಈಗ ಸ್ಥಿರವಾಗಿದೆ. ಆದರೆ ಇನ್ನೂ ವೈದ್ಯಕೀಯ ವೀಕ್ಷಣೆಯಲ್ಲಿದ್ದಾರೆ.

Ramanagara: Toyota Governing Council Dismissed Three Workers

Recommended Video

ಗುಜರಾತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು-ಕೇಂದ್ರ ಗೃಹಸಚಿವ ಅಮಿತ್ ಶಾ ಸಂತಸ | Oneindia Kannada

ಹಿಂಸೆ ಮತ್ತು ದೈಹಿಕ ಹಲ್ಲೆಯ ದುಷ್ಕೃತ್ಯದ ಕಾರಣವನ್ನು ಪರಿಗಣಿಸಿ ಮೂವರು ಕಾರ್ಮಿಕರನ್ನು ವಜಾ ಮಾಡಿದ್ದು, ಕಾರ್ಮಿಕರ ಮೇಲೆ ಹಲ್ಲೆ ಮಾಡಿದ ಇನ್ನೂ ಇಬ್ಬರು ಸದಸ್ಯರ ಗುರುತು ಪತ್ತೆಯಾಗಿಲ್ಲ ಎಂದು ಟೊಯೊಟಾ ಕಂಪನಿ ತಿಳಿಸಿದೆ.

English summary
The Toyota management has dismissed three protesting workers alleging that some workers were assaulted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X