ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂಗೆ ಆಮ್ಲಜನಕ ಸಾಂದ್ರಕಗಳನ್ನು ಹಸ್ತಾಂತರಿಸಿದ ಟೊಯೊಟಾ ಕಂಪನಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂನ್ 4: ದೇಶವನ್ನೇ ಕಾಡುತ್ತಿರುವ ಕೋವಿಡ್-19 ಎರಡನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಕರ್ನಾಟಕ ಸರ್ಕಾರ ಮತ್ತು ರಾಜ್ಯ ಆರೋಗ್ಯ ಇಲಾಖೆಗೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರ ಸಮ್ಮುಖದಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರಿಗೆ ಆಮ್ಲಜನಕ ಸಾಂದ್ರಕಗಳನ್ನು ಹಸ್ತಾಂತರಿಸಿತು.

ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಾಗಿನಿಂದ ಈವರೆಗೆ ಟಿಕೆಎಂ 50 ಆಮ್ಲಜನಕ ಸಾಂದ್ರಕಗಳನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ 80 ಘಟಕಗಳನ್ನು ಒದಗಿಸಲು ಪ್ರಯತ್ನಗಳನ್ನು ಮಾಡುತ್ತಿದೆ. ರಾಮನಗರ ಜಿಲ್ಲೆಯ ಆರೋಗ್ಯ ಇಲಾಖೆಗೆ ಸಾರಿಗೆ ಸೌಲಭ್ಯವನ್ನು ಒದಗಿಸುವ ಮೂಲಕ ಲಸಿಕೆ ಅಭಿಯಾನ ಗರಿಷ್ಠ ಪ್ರಮಾಣದಲ್ಲಿ ಯಶಸ್ವಿಯಾಗುವುದಕ್ಕೆ ಕಂಪನಿಯು ತನ್ನ ಬೆಂಬಲವನ್ನು ವಿಸ್ತರಿಸುವುದಾಗಿ ಘೋಷಿಸಿತು.

ಈ ಸಂದರ್ಭದಲ್ಲಿ ಹಾಜರಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಮಾತನಾಡಿ, ""ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವುದರಲ್ಲಿ ಮತ್ತು ಸದಾ ಬದಲಾಗುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ಕ್ರಮಗಳನ್ನು ಘೋಷಿಸುವಲ್ಲಿ ಸರ್ಕಾರ ಮತ್ತು ಸಂಬಂಧಿತ ಆರೋಗ್ಯ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಿಂದ ವಿಶೇಷವಾಗಿ ಕಾರ್ಪೊರೇಟ್‌ಗಳಿಂದ ನಮಗೆ ದೊರೆತ ಬೆಂಬಲವು ವ್ಯಾಪಕವಾಗಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ನೆರವಾಯಿತು. ಸರ್ಕಾರದ ಪ್ರಯತ್ನಗಳಿಗೆ ಬಹಳ ಪ್ರೋತ್ಸಾಹದಾಯಕವಾಗಿತ್ತು'' ಎಂದು ಹೇಳಿದರು.

Ramanagara: Toyota Company That Handed Over Oxygen Concentrators To CM Yediyurappa

ಈ ವ್ಯಾಪ್ತಿಯಲ್ಲಿ ವಿವಿಧ ಸಮುದಾಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಲ್ಲಿ ಟಿಕೆಎಂ ಯಾವಾಗಲೂ ಉತ್ತಮ ಬೆಂಬಲದ ಮೂಲವಾಗಿದೆ. ಹೀಗಾಗಿ ನಮ್ಮ ಕೇಂದ್ರೀಕೃತ ಪ್ರಯತ್ನಗಳಿಗೆ ಪೂರಕವಾಗಿದ್ದು, ಪ್ರಸ್ತುತ ಕೊಡುಗೆಯು ಸಾಂಕ್ರಾಮಿಕ ಮತ್ತು ಭವಿಷ್ಯದಲ್ಲಿ ತುರ್ತು ಚಿಕಿತ್ಸಾ ಅವಶ್ಯಕತೆಗಳನ್ನು ಪೋಷಿಸುತ್ತದೆ ಎಂದು ತಿಳಿಸಿದರು.

ಈ ಕುರಿತು ಮಾತನಾಡಿದ ಟಿಕೆಎಂನ ಕಾರ್ಪೋರೇಟ್ ವ್ಯವಹಾರಗಳು ಮತ್ತು ಆಡಳಿತದ ಹಿರಿಯ ಉಪಾಧ್ಯಕ್ಷ ವಿಕ್ರಮ್ ಗುಲಾಟಿ, "ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ, ಟೊಯೊಟಾ ಜನರು ಮತ್ತು ಸಮಾಜದ ಅಗತ್ಯಗಳಿಗೆ ಅನುಗುಣವಾಗಿ ಬಿಕ್ಕಟ್ಟಿಗೆ ಪೂರ್ವಭಾವಿಯಾಗಿ ಸ್ಪಂದಿಸುತ್ತಿದೆ. ಈ ಅಗತ್ಯದ ಸಮಯದಲ್ಲಿ ಬಿಕ್ಕಟ್ಟನ್ನು ಶಮನಗೊಳಿಸಿ ಮುಂದೆ ಸಾಗಲು ನಮ್ಮ ಸ್ಥಳೀಯ ಸಮುದಾಯಗಳಿಗೆ ಬೆಂಬಲ ನೀಡುವುದು ಮತ್ತು ಅಗತ್ಯ ನೆರವು ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ.''

Ramanagara: Toyota Company That Handed Over Oxygen Concentrators To CM Yediyurappa

"ಜವಾಬ್ದಾರಿಯುತ ಕಾರ್ಪೋರೇಟ್ ಆಗಿ, ನಾವು ಉದಯೋನ್ಮುಖ ಅಗತ್ಯಗಳನ್ನು ವಿಶ್ಲೇಷಿಸುವುದನ್ನು ಮುಂದುವರಿಸುತ್ತೇವೆ ಮತ್ತು ಸಂಬಂಧಿತ ಸರ್ಕಾರಿ ಇಲಾಖೆಗಳಿಗೆ ಸಹಾಯ ಮಾಡಲು ಅಗತ್ಯ ಕ್ರಮಗಳನ್ನು ತರುತ್ತೇವೆ. ಸರ್ಕಾರ ಮತ್ತು ಸ್ಟೇಕ್ ಹೋಲ್ಡರ್ಸ್‌ನ ಸ್ಥಿರ ಮತ್ತು ಸಮಗ್ರ ಪ್ರಯತ್ನಗಳೊಂದಿಗೆ, ಬಿಕ್ಕಟ್ಟು ಶೀಘ್ರದಲ್ಲೇ ಶಮನವಾಗಲಿದೆ ಎಂದು ನಾವು ಆಶಿಸುತ್ತೇವೆ ಎಂದು ಅಭಿಪ್ರಾಯಪಟ್ಟರು.''

ಕರ್ನಾಟಕದಲ್ಲಿ ಸೋಂಕಿತ ರೋಗಿಗಳ ಚಿಕಿತ್ಸೆಗಾಗಿ ತ್ವರಿತವಾಗಿ ಆರೋಗ್ಯ ಮೂಲಸೌಕರ್ಯವನ್ನು ನಿರ್ಮಿಸಲು ಉದ್ಯಮ ಸಂಸ್ಥೆಗಳೊಂದಿಗೆ ಸಹಕರಿಸುವುದರ ಜೊತೆಗೆ ಉತ್ತರ ಪ್ರದೇಶ ಪೊಲೀಸ್ ಇಲಾಖೆಗೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸಲು ಟಿಕೆಎಂ ಕೆಲಸ ಮಾಡುತ್ತಿದೆ.

ಇತ್ತೀಚೆಗೆ, ಟಿಕೆಎಂ ರಾಮನಗರ ಜಿಲ್ಲೆಯ ವಿವಿಧ ಕರ್ನಾಟಕ ಸರ್ಕಾರದ ಸೌಲಭ್ಯಗಳಲ್ಲಿ ಗಂಭೀರ ರೋಗಿಗಳಿಗೆ ಚಿಕಿತ್ಸೆ ನೀಡಲು ಆಮ್ಲಜನಕ ಸಾಂದ್ರಕಗಳನ್ನು ಒಳಗೊಂಡ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಿತು. ಆಮ್ಲಜನಕ ಸಾಂದ್ರಕಾರಕಗಳನ್ನು ಹೊರತುಪಡಿಸಿ, ಟಿಕೆಎಂ ಅಂಬು ಬ್ಯಾಗ್ಸ್, ಬೆಡ್ ಮಾನಿಟರ್ ಗಳು, ಆಕ್ಸಿಮೀಟರ್‌ಗಳು, ಗ್ಲುಕಾ ಮೀಟರ್‌ಗಳು, ಮಾಸ್ಕ್, ಸ್ಯಾನಿಟೈಸರ್ ಮತ್ತು ಇತರ ಅಗತ್ಯ ವಸ್ತುಗಳನ್ನು ರಾಮನಗರದ ಜಿಲ್ಲಾ ಆರೋಗ್ಯ ಅಧಿಕಾರಿಗೆ ಅವರ ತಕ್ಷಣದ ಅವಶ್ಯಕತೆಗಳಿಗಾಗಿ ಒದಗಿಸಿದೆ. ಇದಲ್ಲದೆ, ಟಿಕೆಎಂ ಪೊಲೀಸ್ ಮತ್ತು ಬೆಂಗಳೂರು ಮತ್ತು ರಾಮನಗರದ ಇತರ ಸರ್ಕಾರಿ ಇಲಾಖೆಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಜರ್‌ಗಳನ್ನು ಒದಗಿಸುವ ಮೂಲಕ ನೆರವನ್ನು ವಿಸ್ತರಿಸಿತು.

Recommended Video

ಯಡಿಯೂರಪ್ಪ ಚಾಣಾಕ್ಷ ನಡೆಗೆ ಬಿಲ ಸೇರಿಕೊಂಡ BJP ಅತೃಪ್ತರು | Oneindia Kannada

ಇದಲ್ಲದೆ, ಟಿಕೆಎಂ ಜಿಲ್ಲಾ ಆಸ್ಪತ್ರೆಗೆ ಸಿಟಿ ಸ್ಕ್ಯಾನರ್ ಕೊಡುಗೆ ನೀಡುವ ಪ್ರಕ್ರಿಯೆಯಲ್ಲಿದೆ ಮತ್ತು ಕರ್ನಾಟಕದ ಬಿಡದಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕ ಉತ್ಪಾದಿಸುವ ಘಟಕವನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿ ಮುಂದುವರೆಯುತ್ತಿದೆ‌ ಎಂದು ಕಂಪನಿ ತಿಳಿಸಿದೆ.

English summary
Toyota Kirloskar Motor handed over oxygen concentrators to Health Minister Dr K Sudhakar in the presence of CM B.S Yediyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X