ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಈ ಭಾರತ್ ಬಂದ್ ನೂರಕ್ಕೆ ನೂರರಷ್ಟು ರಾಜಕೀಯ ಪ್ರೇರಿತ"

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 08: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕರೆ ನೀಡಿದ್ದ "ಭಾರತ್ ಬಂದ್" ನೂರಕ್ಕೆ ನೂರು ರಾಜಕೀಯ ಪ್ರೇರಿತ ಎಂದು ಮಾಜಿ ಎಂಎಲ್ ಸಿ ಅಶ್ವಥ್ ನಾರಾಯಣ್ ಗೌಡ ಆರೋಪಿಸಿದರು.

ನಗರದಲ್ಲಿ ಬಿಜೆಪಿ ರೈತ ಮೋರ್ಚ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಶ್ವಥ್ ನಾರಾಯಣ್ ಗೌಡ, ಈಗಾಗಲೇ ರಾಜ್ಯ ಸಭೆ ಮತ್ತು ಲೋಕಸಭೆ ಎರಡು ಸದನಗಳಲ್ಲಿ ಒಪ್ಪಿಗೆಯಾಗಿ ಅಂತಿಮವಾಗಿ ರಾಷ್ಟ್ರಪತಿಗಳಿಂದ ಅಂಕಿತ ಪಡೆದಿರುವ, ರೈತರಿಗೆ ಪೂರಕವಾದ ರೈತ ಉತ್ಪನ್ನ ವ್ಯಾಪಾರ ವಾಣಿಜ್ಯ ಕಾಯ್ದೆ, ರೈತರ ಬೆಳೆ ಭರವಸೆ ಸೇವಾ ಕಾಯ್ದೆ ಮತ್ತು ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆಯನ್ನು ದೇಶದ ರೈತರು ಸ್ವಾಗತಿಸಿದ್ದಾರೆ. ಈ ರೈತ ಪರ ಕಾಯ್ದೆಗಳನ್ನು ಹರಿಯಾಣ ಮತ್ತು ಪಂಜಾಬ್ ಈ ಎರಡು ರಾಜ್ಯದ ರೈತರು ವಿರೋಧಿಸಿ ಬಂದ್ ಗೆ ಕರೆ ನೀಡಿರುವುದನ್ನು ಗಮನಿಸಿದರೆ ಇದು ಕೇವಲ ರಾಜಕೀಯ ಪ್ರೇರಿತ ಬಂದ್ ಎನಿಸುತ್ತದೆ ಎಂದು ಆರೋಪಿಸಿದರು.

ರೈತರಿಗೆ ಮನವಿ ಮಾಡಿದ ಸಚಿವ ಸೋಮಶೇಖರ್‌
.
ರೈತರು ಎಪಿಎಂಸಿ ಹೊರಗೆ ಮಾರಾಟ ಮಾಡಲು ಇಚ್ಛಿಸದೇ ಇದ್ದ ಪಕ್ಷದಲ್ಲಿ ತಮ್ಮ ಉತ್ಪನ್ನಗಳನ್ನು ಹಿಂದಿನಂತೆ ಎಪಿಎಂಸಿಯಲ್ಲೇ ಮಾರಾಟ ಮಾಡಬಹುದು‌ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ದಶಕಗಳಿಂದ ಕಮ್ಯುನಿಸ್ಟ್ ಆಡಳಿತದಲ್ಲಿರುವ ಕೇರಳ ಹಾಗೂ ಬಿಹಾರದಲ್ಲಿ ಎಪಿಎಂಸಿ ಪದ್ಧತಿ ಇಲ್ಲ, ಆದರೆ ಅಲ್ಲಿಯ ರೈತರು ಪ್ರತಿಭಟನೆ ಮಾಡುತ್ತಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.

Ramanagar: This Bharath Bandh Is Just Political Motivated Alleges Former MLC Ashwath Narayan Gowda

ಕೇವಲ ಹರಿಯಾಣ ಮತ್ತು ಪಂಜಾಬ್ ರಾಜ್ಯದ ದಲ್ಲಾಳಿಗಳ ಚಿತಾವಣೆಯಿಂದ ರೈತರು ಬಂದ್ ಕರೆ ಕೊಟ್ಟಿದ್ದಾರೆ. ಅಲ್ಲದೇ ದೆಹಲಿ ಹೊರ ವಲಯದಲ್ಲಿ ಪ್ರತಿಭಟನಾಕಾರರು ಎಲ್ಲಾ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ದೆಹಲಿಗೆ ಬರಬೇಕಿದ್ದ ಹಣ್ಣು, ತರಕಾರಿ ಬರದೇ ಸುಮಾರು 12 ಸಾವಿರ ಕೋಟಿ ರೂ ನಷ್ಟವಾಗಿದೆ ಎಂದು ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಅಮರೇಂದ್ರ ಸಿಂಗ್ ಹೇಳಿದ್ದಾರೆ. ಹೀಗಿದ್ದಾಗ ರೈತರು ಮಾಡುತ್ತಿರುವ ಹೋರಾಟ ಯಾರ ಮೇಲೆ ಎಂದು ಅಶ್ವಥ್ ನಾರಾಯಣ್ ಗೌಡ ಪ್ರಶ್ನಿಸಿದರು.

Recommended Video

ಸಿದ್ದರಾಮಯ್ಯಗೆ ತೀವ್ರ ಮುಜುಗರ ತಂದೊಡ್ಡಿದ ಅವರು ಬರೆದಿದ್ದ 7ವರ್ಷದ ಹಿಂದಿನ ಆ ಪತ್ರ | Oneindia Kannada

English summary
"This bharath bandh is just political motivated. Not for farmers goodness" alleges Former MLC Ashwath Narayan Gowda in ramanagar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X