ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರಿದ್ದಾರೆ; ಎಚ್‌ಡಿಕೆ ಆರೋಪ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಅಕ್ಟೋಬರ್ 16: "ಬಿಜೆಪಿ ಸರ್ಕಾರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರುಗಳನ್ನಾಗಿ ನೇಮಿಸಿದೆ, ಈ ಸಿಂಡಿಕೇಟ್ ಸದಸ್ಯರುಗಳು ಕೆಲಸ ಮಾಡಿಕೊಡಲು ಲಕ್ಷ ಲಕ್ಷ ಹಣ ಕೇಳುತ್ತಿದ್ದಾರೆ, ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ನೀಡಿದರು.

ಕೆಲ ದಿನಗಳ ಹಿಂದೆ ಆರ್‌ಎಸ್‌ಎಸ್ ವಿರುದ್ಧ ಹರಿಹಾಯ್ದಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಚನ್ನಪಟ್ಟಣ ಶಾಸಕ ಎಚ್.ಡಿ. ಕುಮಾರಸ್ವಾಮಿ, ಶನಿವಾರ ಕೂಡ ಚನ್ನಪಟ್ಟಣದ ವಿದ್ಯಾರ್ಥಿ ವಸತಿ ನಿಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೇರವೆರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

"ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ಗಳಲ್ಲಿ ಸರ್ಕಾರ ನೇಮಿಸಿರುವ ಆರ್‌ಎಸ್‌ಎಸ್‌ನ ಕಾರ್ಯಕರ್ತರು ಕೆಲಸ ಮಾಡಿಕೊಡಲು ಲಕ್ಷ ಲಕ್ಷ ಹಣ ಕೇಳುತ್ತಾರೆ," ಎಂದು ಮಾಜಿ ಸಿಎಂ ಎಚ್‌ಡಿಕೆ ಆರೋಪಿಸಿದರು.

There Is RSS Activists In The Universities Syndicate Board; HD Kumaraswamy Allegation

"40 ವರ್ಷದ ಹಿಂದಿನ ಆರ್‌ಎಸ್‌ಎಸ್ ಬೇರೆ, ಇವತ್ತಿನ ಆರ್‌ಎಸ್‌ಎಸ್ ಬೇರೆ. ವಿಜಯದಶಮಿಯ ದಿನದಂದು ಆರ್‌ಎಸ್‌ಎಸ್‌ನ ಮೋಹನ್ ಭಾಗವತ್ ಒಂದು ಹೇಳಿಕೆ ನೀಡಿದ್ದಾರೆ. ಎಲ್ಲ ಹಿಂದೂ ದೇವಸ್ಥಾನಗಳನ್ನು ಆರ್‌ಎಸ್‌ಎಸ್ ಸುಪರ್ದಿಗೆ ನೀಡಿ ಎಂದು. ಹಿಂದೂ ದೇವಾಲಯಗಳನ್ನು ಆರ್‌ಎಸ್‌ಎಸ್ನವರು ಗುತ್ತಿಗೆ ಹಾಕಿಕೊಂಡಿದ್ದಾರಾ," ಎಂದು ಪ್ರಶ್ನಿಸಿದರು.

"ಹಿಂದೆ ರಾಮಮಂದಿರ ನಿರ್ಮಾಣಕ್ಕೆ ಎಲ್‌.ಕೆ. ಅಡ್ವಾಣಿಯವರು ರಥಯಾತ್ರೆ ಮಾಡಿ ಇಟ್ಟಿಗೆ ಮತ್ತು ಹಣ ಸಂಗ್ರಹ ಮಾಡಿದರು ಅದರ ಲೆಕ್ಕ ಇಲ್ಲ. ಮತ್ತೆ ಇದೀಗ ರಾಮ ಮಂದಿರ ಹೆಸರಿನಲ್ಲಿ ಹಣ ಸಂಗ್ರಹ ಆಯ್ತು. ಇದರ ಹಣ ಎಲ್ಲಿ ಇಟ್ಟಿದ್ದಾರೆ ಯಾರು ಲೆಕ್ಕ ಕೊಡುತ್ತಾರೆ? ರಾಮನ ಹೆಸರಿನಲ್ಲಿ ಕೂಡ ಹಣದ ಅವ್ಯವಹಾರ ನಡೆದಿದೆ. ಹಣದ ಲೆಕ್ಕವನ್ನು ಕೇಳುವುದಕ್ಕೆ ನೀವ್ಯಾರು ಅಂತ ಕೇಳುತ್ತಾರೆ. ರಾಮನ ಹೆಸರಿನಲ್ಲಿ ಹೇಗೆಲ್ಲಾ ಹಣದ ದುರುಪಯೋಗ ಆಗಿದೆ ಅನ್ನೋದನ್ನು ಹೇಳಿದ್ದೇನೆ," ಎಂದರು.

ಸಿಎಂ ಇಬ್ರಾಹಿಂ ಕೇವಲ ಭಾಷಣಕಾರನಾಗಿ ಕಾಂಗ್ರೆಸ್‌ನಲ್ಲಿದ್ದಾರೆ
"ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ತಮಗೆ ಆದಂತಹ ಅನುಭವದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಸಿಎಂ ಇಬ್ರಾಹಿಂರನ್ನು ಕಾಂಗ್ರೆಸ್ ಪಕ್ಷ ಕೇವಲ ಭಾಷಣಕ್ಕಾಗಿ ಇರಿಸಿಕೊಂಡಿದೆ. ಭಾಷಣದ ಮೂಲಕ ಜನರನ್ನು ಆಕರ್ಷಣೆಯನ್ನು ಮಾಡುವುದಕ್ಕೆ ಕಾಂಗ್ರೆಸ್ ನಾಯಕರು ಇಬ್ರಾಹಿಂರನ್ನು ಇಟ್ಟುಕೊಂಡಿದ್ದಾರೆ," ಎಂದು ಮಾಜಿ ಸಿಎಂ ಎಚ್‌ಡಿಕೆ ವ್ಯಂಗ್ಯವಾಡಿರು.

There Is RSS Activists In The Universities Syndicate Board; HD Kumaraswamy Allegation

"ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಕಾಂಗ್ರೆಸ್ ತೊರೆದು ಬಂದ ಸಿ.ಎಂ. ಇಬ್ರಾಹಿಂರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ದೇವೆಗೌಡರು ಪ್ರಧಾನಿಯಾದಾಗ ಸಿ.ಎಂ. ಇಬ್ರಾಹಿಂರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಎರಡು ಖಾತೆಗಳನ್ನು ನೀಡಲಾಗಿತ್ತು. ನಾವು ಯಾವತ್ತೂ ಅಲ್ಪಸಂಖ್ಯಾತರಿಗೆ ದ್ರೋಹ ಬಗೆದಿಲ್ಲ," ಎಂದು ಎಚ್‌ಡಿಕೆ ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯಗೆ ಪಂಚ ಪ್ರಶ್ನೆ ಕೇಳಿದ ಕುಮಾರಸ್ವಾಮಿ
"ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಹಾಕುವುದು ಕಾಂಗ್ರೆಸ್ ಅಭ್ಯರ್ಥಿ ಸೋಲಿಸುವುದಕ್ಕೆ ಅಂತ ಪದೇಪದೇ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಯ ಬಿ ಟೀಂ ಅಂತಾ ಕಾಂಗ್ರೆಸ್ ನಾಯಕರ ಪ್ರಚಾರ ಮಾಡಿದ್ದರು," ಎಂದು ಕಿಡಿಕಾರಿದರು.

"2013ರ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು. ಇಕ್ಬಾಲ್ ಸರಡಗಿಯನ್ನು ಚುನಾವಣೆಯಲ್ಲಿ ಸೋಲಿಸಿದವರು ಯಾರು?, ಕಾಂಗ್ರೆಸ್ ಪಕ್ಷದಿಂದಲೇ ಅಧಿಕೃತವಾಗಿ ಸ್ಪರ್ಧೆ ಮಾಡಿದಂತ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಸೋಲಿಸುವಲ್ಲಿ ಸಿದ್ದರಾಮಯ್ಯನವರ ಪಾತ್ರ ಏನು?," ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ರೋಷನ್ ಬೇಗ್‌ರನ್ನು 6 ವರ್ಷ ಸಸ್ಪೆಂಡ್ ಮಾಡಿದ್ರು
"ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೊಟ್ಟಂತಹ ಒಂದು ಹೇಳಿಕೆಯನ್ನೇ ಆಧರಿಸಿ ರೋಷನ್ ಬೇಗ್‌ಗೆ ನೋಟಿಸ್ ನೀಡದೆ 6 ವರ್ಷ ಸಸ್ಪೆಂಡ್ ಮಾಡಿ ಬಿಟ್ಟರು. ಜಾಫರ್ ಶರೀಫ್‌ರವರ ಮೊಮ್ಮಗನನ್ನು ಚುನಾವಣೆಗೆ ನಿಲ್ಲಿಸಿ, ಆತನ ಸೋಲಿನಲ್ಲಿ ಯಾರು ಕಾರಣರಾಗಿದ್ದರು. ಸಿದ್ದರಾಮಯ್ಯನವರ ಪಾತ್ರ ಏನಿತ್ತು? ಇವರ ಹಿಂಬಾಲಕರ ಪಾತ್ರ ಏನಿತ್ತು?," ಎಂದು ನೇರವಾಗಿ ಪ್ರಶ್ನಿಸಿದರು.

"ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಾಗ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಬಗ್ಗೆ ಯಾವ ರೀತಿ ಪದ ಬಳಕೆಯನ್ನು ಮಾಡಿದ್ದರು ಅನ್ನುವುದನ್ನು ಹೇಳಬೇಕಾ? ವಿಧಾನಸೌಧದ ಮುಂದೆ ಸಿದ್ದರಾಮಯ್ಯನವರ ಭಾಷಣ ಮಾಡಿದಾಗ ರೋಷನ್ ಬೇಗ್ ಬಗ್ಗೆ ಏನೆಲ್ಲ ಪದಬಳಕೆ ಮಾಡಿದ್ದರು ಎಂಬುದು ಗೊತ್ತಿದೆ," ಎಂದರು.

"ಸಲೀಂ ವಿಚಾರದಲ್ಲಿ ಸಿದ್ದರಾಮಯ್ಯನವರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಿದ್ದಾರೆ. ನಮ್ಮ ನಾಯಕರು, ನಮ್ಮ ಗುರುಗಳು, ನಮ್ಮ ಗಾಡ್‌ ಫಾದರ್ ಅಂತೇಳಿ ಸಲೀಂ ಹೇಳುತ್ತಿದರು. ಈಗ ಆತನನ್ನು ಆರು ವರ್ಷ ಅಮಾನತು ಮಾಡಿದ್ದಾರೆ. ಆರು ಬಾರಿ ಸಂಸದರಾಗಿದ್ದ ಕೋಲಾರದ ಮುನಿಯಪ್ಪರವರ ಸೋಲಿಗೂ ಕೂಡ ಸಿದ್ದರಾಮಯ್ಯನವರ ಹಿಂದೆ ಮುಂದೆ ಇದ್ದ ನಾಯಕರೇ ಕಾರಣ," ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದರು.

"ಅಲ್ಪಸಂಖ್ಯಾತ ಹಾಗೂ ದಲಿತ ಮುಖಂಡರುಗಳಿಗೆ ಕಾಂಗ್ರೆಸ್ ಏನು ಗೌರವ ನೀಡಿದೆ. ಈಗ ಒಬಿಸಿ ಹೆಸರಿನಲ್ಲಿ ಸಮಾವೇಶವನ್ನು ಮಾಡಲಿಕ್ಕೆ ಸಿದ್ದರಾಮಯ್ಯನವರು ಹೊರಟಿದ್ದಾರೆ. ನಮ್ಮ ಪಕ್ಷದ ಬಗ್ಗೆ ಮಾತನಾಡುವುದಿರಲಿ, ನಿಮ್ಮ ಕಣ್ಣ ಮುಂದೆ ನಡೆದ ಘಟನೆಗಳ ಬಗ್ಗೆ ಸಿದ್ದರಾಮಯ್ಯನವರೇ ಉತ್ತರ ಕೊಡಿ," ಎಂದು ಕೇಳಿದರು.

"ನಾನು ಪದ ಬಳಕೆಯಲ್ಲಿ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಿ ಮಾತನಾಡಿಲ್ಲ. ರಾಜಕೀಯದ ನರಮೇಧ ಅಂತ ಹೇಳಿದ್ದೇನೆ ಹೊರತು ಸಿದ್ದರಾಮಯ್ಯನವರ ನರಮೇಧ ಅಂತ ಹೇಳಿಲ್ಲ. ಅಲ್ಪಸಂಖ್ಯಾತ ನಾಯಕರ ನರಮೇಧ ಹೇಗೆ ನಡೆಯಿತು ಅಂತ ಹೇಳಿದ್ದೇನೆ. ನಾನು ಯಾರ ಬಗ್ಗೆಯೂ ಲಘುವಾಗಿ ಪದ ಬಳಕೆಗಳನ್ನು ಮಾಡಿಲ್ಲ," ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಮಜಾಯಿಷಿ ನೀಡಿದರು.

Recommended Video

ಮುಂಬೈನಲ್ಲಿ ಕೋವಿಡ್ ಪ್ರಕರಣಗಳು ಸೊನ್ನೆ | Oneindia Kannada

English summary
RSS activists has appointed as Universities syndicates members in the BJP government Former chief minister HD Kumaraswamy accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X