ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಬಾರಿಯ ಚುನಾವಣೆಯಲ್ಲಿ ಮೋದಿ ಅಲೆ ಇಲ್ಲ : ಡಿಕೆಶಿ

|
Google Oneindia Kannada News

Recommended Video

ಕನಕಪುರದಲ್ಲಿ ಮತ ಚಲಾಯಿಸಿ ನಂತರ ಮೋದಿ ಬಗ್ಗೆ ಮಾತನಾಡಿದ ಡಿ ಕೆ ಶಿವಕುಮಾರ್ | Lok Sabha Elections 2019

ರಾಮನಗರ, ಏಪ್ರಿಲ್ 18 : 'ಒಳ್ಳೆಯ ದಿನ ಬರಲಿಲ್ಲ, ಈ ಬಾರಿ ದೇಶದಲ್ಲಿ ಎಲ್ಲೂ ಮೋದಿ ಅಲೆ ಇಲ್ಲ. ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದವರನ್ನು ಜನರು ನಂಬುವುದಿಲ್ಲ' ಎಂದು ಜಲಸಂನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಗುರುವಾರ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತದಾನ ಮಾಡಿದರು. ಕನಕಪುರದ ಸಾತನೂರಿನ ದೊಡ್ಡಾಲಹಳ್ಳಿಯಲ್ಲಿ ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್ ಅವರು ಪತ್ನಿ ಉಷಾ ಮತ್ತು ಪುತ್ರಿ ಐಶ್ವರ್ಯ ಅವರ ಜೊತೆ ಬಂದು ಮತ ಚಲಾವಣೆ ಮಾಡಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣಾ ಪುಟ

ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಅಚ್ಛೇದಿನ್ ಎಂದು ಹೇಳಿದ್ದರು. ಒಳ್ಳೆಯ ದಿನ ಬರಲಿಲ್ಲ. ಸ್ವಚ್ಛ ಭಾರತ್ ಎನ್ನುತ್ತಾರೆ. ವಾರಣಾಸಿಯಲ್ಲಿ ಸ್ವಚ್ಛತೆಯೇ ಇಲ್ಲ' ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದರು.

14 ಕ್ಷೇತ್ರಗಳಲ್ಲಿ ಮತದಾನ live updates14 ಕ್ಷೇತ್ರಗಳಲ್ಲಿ ಮತದಾನ live updates

There is no Modi wave in this elections says D.K.Shivakumar

'ಈ ಬಾರಿ ರಾಜ್ಯದ ಇಪ್ಪತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶ್ ಅವರನ್ನು ಮತ್ತೊಮ್ಮೆ ಆಶೀರ್ವಾದ ಮಾಡುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿಕೆಶಿ ಸಹೋದರರ ಕೋಟೆಯಲ್ಲಿ ಕಮಲ ಅರಳುವುದೇ?ಡಿಕೆಶಿ ಸಹೋದರರ ಕೋಟೆಯಲ್ಲಿ ಕಮಲ ಅರಳುವುದೇ?

ಡಿ.ಕೆ.ಸುರೇಶ್ ಮತದಾನ : ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ. ಸುರೇಶ್ ಅವರು ಕನಕಪುರದ ಸಾತನೂರಿನ ದೊಡ್ಡ ಆಲಹಳ್ಳಿಯಲ್ಲಿ ಗುರುವಾರ ಮತ ಚಲಾಯಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಸತತ ಮೂರನೇ ಬಾರಿ ಆಯ್ಕೆ ಬಯಸಿರುವ ತಮ್ಮನ್ನು ಕ್ಷೇತ್ರದಲ್ಲಿ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳೇ ಕೈ ಹಿಡಿಯಲಿವೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

English summary
Water resources minister D.K.Shivakumar said that there is no Narendra Modi wave in this election. JD(S) and Congress will win more than 20 seats in Karnataka. D.K.Shivakumar cast his vote in Bangalore Rural lok sabha seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X