ಅಂತರ್ಜಾತಿ ವಿವಾಹ ವಿರೋಧಿಸಿ ಹಕ್ಕು ನಿವೃತ್ತಿ ಪತ್ರಕ್ಕೆ ಸಹಿ ಪಡೆದ ವಧುವಿನ ಕುಟುಂಬ
ರಾಮನಗರ, ಫೆಬ್ರವರಿ 25: ಪ್ರೀತಿಸಿ ಅನ್ಯ ಜಾತಿ ಯುವಕಕನ್ನು ಮದುವೆಯಾಗಿದ್ದನ್ನು ಯುವತಿಯ ಕುಟುಂಬದವರು ವಧುವಿನಿಂದ ಹಕ್ಕು ನಿವೃತ್ತಿ ಪತ್ರಕ್ಕೆ ಸಹಿ ಪಡೆದ ಘಟನೆ ರಾಮನಗರ ಜಿಲ್ಲೆಯ ಮಾಗಡಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಡೆದಿದೆ.
ಪರಸ್ಪರ ಪ್ರೀತಿಸಿ ಪೋಷಕರ ವಿರೋಧದ ನಡುವೆಯು ಮದುವೆಯಾಗಿದ್ದ ನವ ದಂಪತಿಗಳು, ತಮ್ಮ ಮದುವೆಯನ್ನು ಕಾನೂನು ಬದ್ಧಗೊಳಿಸಲು ಪಟ್ಟಣದ ಉಪ ನೋಂದಣಿ ಕಚೇರಿಗೆ ಬಂದಿದ್ದ ಸಮಯದಲ್ಲಿ ಅಂತರ್ಜಾತಿ ವಿವಾಹವನ್ನು ವಿರೋಧಿಸಿದ ವಧುವಿನ ಪೋಷಕರು, ನವ ದಂಪತಿಗಳಿಂದ ಆಸ್ತಿ ಹಕ್ಕು ನಿವೃತ್ತಿ ಪತ್ರಕ್ಕೆ ಸಹಿ ಪಡೆದು ತವರು ಮನೆ ಸಂಬಂಧ ಮುರಿದುಕೊಂಡಿದ್ದಾರೆ.
"ಎಚ್ಡಿಕೆ ಅಧಿಕಾರವಧಿಯಲ್ಲಿ ತಮ್ಮ ಕಾರ್ಯಕರ್ತರಿಗೆ ಯಾವುದೇ ಅಧಿಕಾರ ನೀಡಿಲ್ಲ''
ಮಾಗಡಿ ತಾಲ್ಲೂಕಿನ ಸೋಲೂರು ಗ್ರಾಮದ ಎಸ್.ಹರ್ಷಿತಾ ಹಾಗೂ ಸಿ.ನವೀನ್ ಕುಮಾರ್ ಪರಸ್ಪರ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದಕ್ಕೆ ಹರ್ಷಿತಾ ಪೋಷಕರು ವಿರೋಧ ವ್ಯಕ್ತಪಡಿಸಿದರು. ಪೋಷಕರ ವಿರೋಧದ ನಡುವೆಯೂ ಹರ್ಷಿತಾ ಹಾಗೂ ನವೀನ್ ಜ.31 ರಂದು ಗ್ರಾಮದಲ್ಲೇ ಮದುವೆಯಾಗಿದ್ದರು.
ತನ್ನ ಪೋಷರ ವರ್ತನೆಯಿಂದ ಮನನೊಂದು ಮಾತನಾಡಿದ ನವವಧು ಹರ್ಷಿತಾ, ""ನಾನು, ನವೀನ್ ಪ್ರೀತಿಸಿ ಮದುವೆಯಾಗಿದ್ದೇವೆ. ಈ ಮದುವೆಗೆ ನಮ್ಮ ಪೋಷಕರ ವಿರೋಧ ಇತ್ತು. ಹಾಗಾಗಿ ನನಗೂ ನನ್ನ ಪೋಷಕರಿಗೂ ಯಾವುದೇ ಸಂಬಂಧವಿಲ್ಲ ಅಂತಾ ನನ್ನ ಕೈಯಲ್ಲಿ ಪತ್ರ ಬರೆಸಿಕೊಂಡಿದ್ದಾರೆ. ಮುಂದೆ ಯಾವುದೇ ಅನಾಹುತ ಸಂಭವಿಸಿದರೆ ನಮ್ಮ ಪೋಷಕರೇ ಹೊಣೆಯಾಗುತ್ತಾರೆ'' ಎಂದು ತನ್ನ ಆತಂಕ ವ್ಯಕ್ತಪಡಿಸಿದರು.