ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಬ್ಬರು ದೇವಸ್ಥಾನ ಕಳ್ಳರ ಬಂಧನ: 40 ಗ್ರಾ ಚಿನ್ನ, 1.5 ಕೆಜಿ ಬೆಳ್ಳಿ ವಶ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 14: ದೇವಸ್ಥಾನಗಳಿಗೆ ಕನ್ನ ಹಾಕಿ ದೇವರ ಚಿನ್ನ, ಬೆಳ್ಳಿ ಒಡವೆ ಮತ್ತು ಹುಂಡಿಯ ದುಡ್ಡು ದೋಚುತ್ತಿದ್ದ ಇಬ್ಬರು ಐನಾತಿ ಕಳ್ಳರನ್ನು ಬಂಧಿಸಿ ರಾಮನಗರ ಜಿಲ್ಲೆಯ ಸುಮಾರು 8 ಪ್ರಕರಣಗಳನ್ನು ಭೇದಿಸುವಲ್ಲಿ ಸಾತನೂರು ಪೊಲೀಸರು ಯಶ್ವಸಿಯಾಗಿದ್ದಾರೆ.

ಬೆಂಗಳೂರಿನ ಬನಶಂಕರಿ ಮೂಲದ ವೆಂಕಟರಾಜು ಮತ್ತು ಸಾತನೂರು ಹೋಬಳಿಯ ವಡ್ಡರದೊಡ್ಡಿ ಗ್ರಾಮದ ಮುನೇಶ್ ಎಂಬ ಇಬ್ಬರು ಐನಾತಿ ಕಳ್ಳರನ್ನು ಬಂಧಿಸಿ, ಅವರಿಂದ ಸುಮಾರು 40 ಗ್ರಾಂ ಚಿನ್ನದ ಒಡವೆಗಳು ಮತ್ತು 1.5 ಕೆಜಿ ಬೆಳ್ಳಿಯ ವಸ್ತುಗಳು ಹಾಗೂ 3,920 ರೂಪಾಯಿ ಹುಂಡಿ ಹಣವನ್ನು ವಶಪಡಿಸಿಕೊಂಡಿದ್ದಾರೆ.

ರಾಮನಗರ: ಮಾಂಸದೂಟ ಸೇವಿಸಿ 100 ಜನ ತೀವ್ರ ಅಸ್ವಸ್ಥರಾಮನಗರ: ಮಾಂಸದೂಟ ಸೇವಿಸಿ 100 ಜನ ತೀವ್ರ ಅಸ್ವಸ್ಥ

ಡಿ.9 ರಂದು ರಾತ್ರಿ ಸಾತನೂರು ಗ್ರಾಮದ ಮಾರಮ್ಮ ದೇವಸ್ಥಾನದ ಬೀಗ ಹೊಡೆದು ದೇವರ ಮೈಮೇಲಿದ್ದ ಚಿನ್ನದ ಮತ್ತು ಬೆಳ್ಳಿಯ ಒಡವೆಗಳು ಮತ್ತು ಹುಂಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ ಎಂದು ಗ್ರಾಮಸ್ಥರು ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Ramanagara: Temple Robbers Arrested: 40g Gold Siezed In Satanuru

Recommended Video

ಪ್ರತಿಭಟನಾ ಸ್ಥಳದಲ್ಲಿಯೇ ತನ್ನ ಮಗಳ ಜನ್ಮದಿನ ಆಚರಿಸಿದ ರೈತ | Oneindia Kannada

ಸಾತನೂರು ಪೊಲೀಸ್ ಠಾಣೆಯ 1 ಪ್ರಕರಣ, ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯ 4 ಪ್ರಕರಣ, ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ 1, ಕಗ್ಗಲೀಪುರ ಪೊಲೀಸ್ ಠಾಣೆಯ 1 ಮತ್ತು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ 1 ಒಟ್ಟು 8 ದೇವಾಲಯ ಕಳವು ಪ್ರಕರಣಗಳನ್ನು ಸಾತನೂರು ಪೊಲೀಸರು ಭೇದಿಸಿದ್ದಾರೆ.

English summary
The Satanur police have cracked down eight cases of Ramanagar district, arresting two temple robbers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X