ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಟ್ಟೂರಿನ ಋಣ ತೀರಿಸಲು ಆಹಾರ ಧಾನ್ಯ ವಿತರಿಸಿದ ಶಿಕ್ಷಕ ದಂಪತಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಏಪ್ರಿಲ್ 28: ಶಿಕ್ಷಕ ದಂಪತಿಗಳು ತಾವು ಹುಟ್ಟಿದ ಗ್ರಾಮದ ಋಣ ತೀರಿಸಲು 300 ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಚನ್ನಪಟ್ಟಣ ನಗರದ ಮಂಗಳವಾರಪೇಟೆಯ ಅಮರಜ್ಯೋತಿ ಕಾಲೋನಿಯ ಮೂಲ ನಿವಾಸಿಗಳಾದ ಭಾಗ್ಯಮ್ಮ ಮತ್ತು ಲಕ್ಷ್ಮಣ್ ಶಿಕ್ಷಕ ದಂಪತಿಗಳು. ಅಮರಜ್ಯೋತಿ ಕಾಲೋನಿಯಲ್ಲಿ 300 ಬಡ ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ವಿತರಿಸಿದರು. ಈ ಆಹಾರ ಧಾನ್ಯ ಕಿಟ್ ನ ಸಂಪೂರ್ಣ ವೆಚ್ಚವನ್ನು ಶಿಕ್ಷಕ ವೃತ್ತಿಯಲ್ಲಿ ಗಳಿಸಿದ ಆದಾಯವನ್ನು ವ್ಯಯಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

Teacher couple Distributing Food Grains In Channapattana

ಇನ್ನು ಲಾಕ್ ಡೌನ್ ಸಂಕಷ್ಟದ ಸಮಯದಲ್ಲಿ ಸಂಪಾದನೆಯ ಹಣ ವ್ಯಯಿಸಿ ತಮ್ಮ ಬಡಾವಣೆಯ ಕಡು ಬಡವರಿಗೆ ನೆರವಾಗುವ ಮೂಲಕ ಹುಟ್ಟೂರಿನ ಋಣ ತೀರಿಸಿ ಸಾರ್ಥಕತೆ ಮೆರೆದ, ಶಿಕ್ಷಕ ದಂಪತಿಗಳಿಗೆ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರ್.ಸುರೇಶ್ ಕೃತಜ್ಞತೆ ಸಲ್ಲಿಸಿದ್ದಾರೆ.

English summary
Teacher couples are distributing Food groceries to 300 poor families in Channapattana Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X