ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾಲಿ ಮಾಡಲು ಬ್ಯಾಂಕ್ ಖಾತೆಗೆ ಕನ್ನ ಹಾಕಿದ ತಾಂಜೇನಿಯ ವಿದ್ಯಾರ್ಥಿಗಳು

By ರಾಮನಗರ ಪ್ರತಿನಿಧಿ
|
Google Oneindia Kannada News

ಮಾಗಡಿ, ಫೆಬ್ರವರಿ 25: ಎಟಿಎಂ ಯಂತ್ರಗಳಿಗೆ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಬ್ಯಾಂಕ್ ಖಾತೆದಾರರ ಎಟಿಎಂ ಕಾರ್ಡ್ ಮಾಹಿತಿ ಕಳವು ಮಾಡಿ ಖಾತೆದಾರರ ಖಾತೆಯಿಂದ ಹಣ ಲಪಟಾಯಿಸುತ್ತಿದ್ದ ಇಬ್ಬರು ತಾಂಜೇನಿಯ ಮೂಲದ ವಿದೇಶಿ ವಿದ್ಯಾರ್ಥಿಗಳನ್ನು ಮಾಗಡಿಯ ಕುದೂರು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿ ವೀಸಾ ಪಡೆದು ಭಾರತಕ್ಕೆ ಬಂದು ಮೋಜು ಮಸ್ತಿ ಮಾಡಿಕೊಂಡಿದ್ದ ತಾಂಜೇನಿಯಾ ಮೂಲದ ವಿದ್ಯಾರ್ಥಿಗಳಾದ ಅಲೆಕ್ಸ್‌ ಮಾಂಡೆರ್ಡ್ ಮಿಸ್ಕೆ (20), ಜಾರ್ಜ್ ಜೀನಿಯಸ್ ಅಸ್ಸೆ (20) ಇದೀಗ ಬಂಧಿಯಾಗಿದ್ದಾರೆ. ಉನ್ನತ ವ್ಯಾಸಂಗ ಮಾಡಿ ಜೀವನ ರೂಪಿಸಿಕೊಳ್ಳಬೇಕಾದ ಈ ಇಬ್ಬರು ಮೋಜು ಮಸ್ತಿಗಾಗಿ ಈ ರೀತಿಯ ವಂಚನೆ‌ ಜಾಲ‌ ಆರಂಭಿಸಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

1.60 ಕೋಟಿ ಕಳ್ಳತನ: ಸಿನಿಮಾ ಹೀರೋ ಬಂಧನ1.60 ಕೋಟಿ ಕಳ್ಳತನ: ಸಿನಿಮಾ ಹೀರೋ ಬಂಧನ

ಏನಿದು ಪ್ರಕರಣ: ಕುದೂರು ಸಮೀಪದ ಗೊಲ್ಲಹಳ್ಳಿ ಗ್ರಾಮದ ವಾಸಿ ಶಿವಕುಮಾರ್‌ ಎಂಬುವರು ಕುದೂರು ಕೆನರಾ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದು, ಬ್ಯಾಂಕಿನ ಎಟಿಎಂ ಅವರ ಬಳಿಯೇ ಇದ್ದರೂ ಅವರ ಬ್ಯಾಂಕ್‌ ಖಾತೆಯಿಂದ ಎಟಿಎಂ ಮೂಲಕ ಹಣ ಡ್ರಾ ಮಾಡಿರುವ ಸಂಬಂಧ ಪೊಲೀಸರಿಗೆ ದೂರು‌ ನೀಡಿದ್ದರು.

Tanzania Students Arrested In Magadi For Stealing Money From ATM

ಪ್ರಕರಣ ದಾಖಲಿಸಿ‌ ತನಿಖೆ‌ ಆರಂಭಿಸಿದಾಗ ಪೊಲೀಸರಿಗೆ ಈ ಇಬ್ಬರ ಮೇಲೆ ಅನುಮಾನ ಹುಟ್ಟಿಕೊಂಡಿತ್ತು. ಇವರಿಬ್ಬರೂ ಆಫ್ರಿಕಾ ಖಂಡದ ತಾಂಜೇನಿಯಾ ರಾಷ್ಟ್ರದವರಾಗಿದ್ದು ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದು ನೆಲೆಸಿದ್ದರು. ಮೋಜು, ಮಸ್ತಿ ಮಾಡಲು ಹಣದ ಅವಶ್ಯಕತೆ ಇದ್ದುದರಿಂದ ಇತರೆ ಆಫ್ರಿಕನ್‌ ಸ್ನೇಹಿತರೊಂದಿಗೆ ಸೇರಿಕೊಂಡು ಬ್ಯಾಂಕ್‌ ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಬ್ಯಾಂಕ್‌ ಖಾತೆದಾರರ ಎಟಿಎಂ ಮಾಹಿತಿಗಳನ್ನು ಕದ್ದು ನಕಲಿ ಎಟಿಎಂ ಕಾರ್ಡ್ ಗಳನ್ನು ಸೃಷ್ಟಿಸಿ ಹಣ ದೋಚುವ ಪ್ರವೃತ್ತಿ ಬೆಳಸಿಕೊಂಡಿದ್ದರು.

ಎಟಿಎಂ ಕಳ್ಳರ ಬಂಧನಕ್ಕೆ ನೆರವಾದ ಬ್ಯಾಂಕಿನ ಕಂಟ್ರೋಲ್ ರೂಮ್ಎಟಿಎಂ ಕಳ್ಳರ ಬಂಧನಕ್ಕೆ ನೆರವಾದ ಬ್ಯಾಂಕಿನ ಕಂಟ್ರೋಲ್ ರೂಮ್

ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರು ಬಂಧಿತರಿಂದ 1 ಕಾರು, 2 ದ್ವಿಚಕ್ರವಾಹನ, 1 ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌ಗಳು, ನಕಲು ಎಟಿಎಂ ಕಾರ್ಡ್‌ಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

English summary
Two Tanzanian based students have been arrested by Kudur police in Magadi for getting bank account holders' ATM card information by using a skimming machine in ATM and stealing money
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X