ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್. ಡಿ. ಕುಮಾರಸ್ವಾಮಿ ಭೇಟಿಯಾದ ಸ್ವಾಮೀಜಿಗಳು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಏಪ್ರಿಲ್ 05; "ರಾಜ್ಯದಲ್ಲಿ ಜಾತಿಗಳ, ಕೋಮುಗಳ ನಡುವೆ ಘರ್ಷಣೆ ಉಂಟು ಮಾಡಬಾರದು. ಶಾಂತಿ ಕದಡುವ ಕೆಲಸವನ್ನು ಯಾರು ಮಾಡಬಾರದು" ಎಂದು ಈಡಿಗ ಮಠದ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದರು.

ಮಂಗಳವಾರ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯನ್ನು ಬಿಡದಿಯ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ವಾಲ್ಮೀಕಿ ಗುರುಪೀಠದ ಬ್ರಹ್ಮಾನಂದ ಗುರೂಜಿ, ಈಡಿಗ ಮಠದ ಪ್ರಣವಾನಂದ ಸ್ವಾಮೀಜಿ, ಬಂಜಾರ ಮಠದ ಸರ್ದಾರ್ ಸೇವಲಾಲ್ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಭೇಟಿ ಮಾಡಿದರು.

ಸಾವಿರ ಮಠ, ಪೀಠ ಮಾಡಿಕೊಳ್ಳಲಿ ನಾವೇನೂ ವಿಚಲಿತರಾಗಲ್ಲ; ಜಯಮೃತ್ಯುಂಜಯ ಸ್ವಾಮೀಜಿಸಾವಿರ ಮಠ, ಪೀಠ ಮಾಡಿಕೊಳ್ಳಲಿ ನಾವೇನೂ ವಿಚಲಿತರಾಗಲ್ಲ; ಜಯಮೃತ್ಯುಂಜಯ ಸ್ವಾಮೀಜಿ

ಹಿಂದುಳಿದ ಮಠಗಳ ಪೀಠಾಧ್ಯಕ್ಷರು ನಮ್ಮ ಸಮುದಾಯದ ಜನರ ಸಂಕಷ್ಟಕ್ಕೆ ನೆರವಾಗುವಂತೆ ಮಾಜಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಹಿಂದುಳಿದ ಮಠಗಳ ಒಕ್ಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು.

ರಾಜ್ಯದಲ್ಲಿ ಬಿಜೆಪಿಯಿಂದ ಶಾಂತಿ ಕದಡುವ ಕೆಲಸ: ಎಚ್‌ಡಿಕೆ ಕಿಡಿ ರಾಜ್ಯದಲ್ಲಿ ಬಿಜೆಪಿಯಿಂದ ಶಾಂತಿ ಕದಡುವ ಕೆಲಸ: ಎಚ್‌ಡಿಕೆ ಕಿಡಿ

Ramanagara: Swamijis Met HD Kumaraswamy In Bidadi Farm House

ಮಾಧ್ಯಮಗಳೊಂದಿಗೆ ಮಾತನಾಡಿದ ಈಡಿಗ ಮಠದ ಪ್ರಣವಾನಂದ ಸ್ವಾಮೀಜಿ, "ನಮ್ಮ ಕುಲ ಕಸುಬಾದ ಸೇಂದಿ ಮಾರಾಟ ನಿಲ್ಲಿಸಿದ್ದಾರೆ. ಸೇಂದಿ ಇಳಿಸಿ ಮಾರಾಟ ಮಾಡಿ ಬದುಕುವ ಸಮಾಜ ನಮ್ಮದು. ಹೀಗಾಗಿ ಸಮುದಾಯಕ್ಕೆ ನ್ಯಾಯ ಒದಗಿಸಲು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ಮನವಿ ಮಾಡಿದ್ದೇವೆ" ಎಂದರು.

ಯಾರ ಜತೆಯೂ ಚುನಾವಣೆ ಮೈತ್ರಿ ಇಲ್ಲ: ಎಚ್‌ಡಿ ಕುಮಾರಸ್ವಾಮಿ ಯಾರ ಜತೆಯೂ ಚುನಾವಣೆ ಮೈತ್ರಿ ಇಲ್ಲ: ಎಚ್‌ಡಿ ಕುಮಾರಸ್ವಾಮಿ

"ನಮ್ಮ ಈಡಿಗ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಿ, ನಿಗಮಕ್ಕೆ 500 ಕೋಟಿ ಮೀಸಲಿಡಬೇಕು. ನಮ್ಮ ವಿವಿಧ ಬೇಡಿಕೆಗಳನ್ನು ಬಿಜೆಪಿ ಸರ್ಕಾರ ಈಡೇರಿಸಬೇಕು. ಒಂದು ವೇಳೆ ಈಡಿಗ ಸಮುದಾಯ ಕಡೆಗಣಿಸಿದರೆ ಬಿಜೆಪಿ ವಿರುದ್ಧ ಹೋರಾಟ ಮಾಡಿ ತಕ್ಕ ಪಾಠವನ್ನು ಕಲಿಸುತ್ತೇವೆ" ಎಂದು ಎಚ್ಚರಿಕೆ ನೀಡಿದರು.

ನನ್ನ ಬೆಂಬಲವಿದೆ; ಮಾಧ್ಯಮಗಳ ಜೊತೆ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ, "ಸಣ್ಣ-ಸಣ್ಣ ಮಠದ ಮಠಾಧೀಶರು ಬಂದು ನನ್ನನ್ನು ಭೇಟಿ ಮಾಡಿದ್ದಾರೆ. ಅವರಾರು ದೊಡ್ಡ ಮಠದ ಸ್ವಾಮೀಜಿಗಳಲ್ಲ
ದಲಿತ ಒಕ್ಕೂಟ, ಹಿಂದುಳಿದ ವರ್ಗಗಳ ಸಮಾಜದ ಸ್ವಾಮೀಜಿ ತಮ್ಮ ಸಮಾಜದಲ್ಲಿ ಬಡತನ ಇರುವ ಬಗ್ಗೆ ಚರ್ಚೆ ಮಾಡಿ ಸಹಕಾರ ಕೇಳಲು ಬಂದಿದ್ದಾರೆ" ಎಂದರು.

"ಸಣ್ಣ ಸಣ್ಣ ಸಮಾಜದ ಮಠಗಳ ಸ್ವಾಮೀಜಿಗಳು ಸೇರಿ ಒಕ್ಕೂಟ ಸ್ಥಾಪಿಸಲು ಮುಂದಾಗಿದ್ದಾರೆ. ಒಕ್ಕೂಟದ ಮೂಲಕ ತಮ್ಮ ಸಮಾಜದ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಚಿಂತನೆ ನಡೆಸಿದ್ದಾರೆ. ಅದಕ್ಕೆ ನನ್ನ ಸಹಕಾರ ಕೇಳಿದ್ದಾರೆ. ನನ್ನ ಸಹಕಾರ ಇದೆ, ನಿಮ್ಮ ಭಾವನೆಗಳಿಗೆ ಸ್ಪಂದಿಸುತ್ತೇನೆ ಎಂದು ತಿಳಿಸಿದ್ದೇನೆ" ಎಂದು ಹೇಳಿದರು.

ಅಜಾನ್ ವಿಚಾರ; "ಮುಸ್ಲಿಂ ಬಾಂಧವರು ಹಲವಾರು ವರ್ಷಗಳಿಂದ ಪ್ರಾರ್ಥನೆ ಮಾಡಿಕೊಂಡು ಬಂದಿದ್ದಾರೆ. ಈಗ ಶಬ್ದ ಮಾಲಿನ್ಯ ಅಂತಿರಾ. ಹಿಂದೂ ಪರಿಷತ್, ಶ್ರೀರಾಮ ಸೇನೆಯವರು ಧ್ವನಿ ಎತ್ತಿದ್ದಾರೆ ಹಿಂದಿನಿಂದ ಯಾಕೆ ಸುಮ್ಮನಿದ್ದರು?" ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

"‌ನಮ್ಮ ಸಮಾಜದ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಬೆಳಗ್ಗೆ 5 ಗಂಟೆ ಹಾಗೂ ಸಂಜೆ 6 ಗಂಟೆಗೆ ದೀಪ ಹಚ್ಚುವ ಸಮಯದಲ್ಲಿ ದೇವರ ಪ್ರಾರ್ಥನೆಯ ಮೈಕ್ ಹಾಕಿ ಇದಕ್ಕೆ ನಮ್ಮ ಬೆಂಬಲ ಇದೆ. ಆದರೆ ಬೇರೆ ಸಮಾಜದವರನ್ನು ನಿಲ್ಲಿಸಿ ಎನ್ನಲು ಹಕ್ಕಿಲ್ಲ. ನಾನು ಚಿಕ್ಕವನಿದ್ದಾಗ ಹೊಳೆನರಸೀಪುರದಲ್ಲಿ ಸಂಜೆ 7:30 ಕ್ಕೆ ದೀಪಸ್ತಂಭ ಹಿಡಿದು ಭಜನೆ ಮಾಡಿದ್ದೇನೆ, ಬೆಳಗ್ಗೆ 5 ಗಂಟೆಗೆ ದೇವಸ್ಥಾನಕ್ಕೆ ಹೋಗಿದ್ದೇನೆ ಇದರ ಅನುಭವ ನನಗಿದೆ" ಎಂದರು.

"ದೇವಾಲಯಗಳಲ್ಲಿ ಕರತಾಡನ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ. ವೆಂಕಟೇಶ್ವರನ ದೇವಾಲಯದಲ್ಲಿ ಬೆಳಗ್ಗೆ ಸುಪ್ರಭಾತ ಹಾಕುತ್ತಾರೆ.‌ ಹಾಗೆ ಪ್ರತಿ ಹಳ್ಳಿಗಳ ದೇವಾಲಯಗಳಲ್ಲಿ ಭಕ್ತಿ ಗೀತೆ ಮೈಕ್ ನಲ್ಲಿ ಹಾಕಿ ಇದಕ್ಕೆ ನಮ್ಮ ಬೆಂಬಲ ಇದೆ. ಇದರಿಂದ ನಮ್ಮ ಮಕ್ಕಳಿಗೆ 5 ಗಂಟೆಗೆ ಏಳುವ ಅಭ್ಯಾಸ ಬೆಳೆಸಿದಂತೆ ಆಗುತ್ತದೆ. ನಮ್ಮ ಸಮಾಜದ ಮಕ್ಕಳಲ್ಲಿ ಸಂಸ್ಕೃತಿಯ ಅರಿವು ಮೂಡಿಸಿ" ಎಂದು ಕರೆ ನೀಡಿದರು.

ಇದು ಮೌನಿ ಸರ್ಕಾರ; ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ, "ರಾಜ್ಯವನ್ನು ಲೂಟಿ ಮಾಡಿ ಹಣವನ್ನು ದೋಚಿದ್ದಾರೆ. ಈಗ ಭಾವನಾತ್ಮಕವಾದ ವಿಷಯ ಇಟ್ಟುಕೊಂಡು ಮತ ಕೇಳಲು ಸಂಘಟನೆ ಮಾಡಿಕೊಳ್ಳಲು ಹೊರಟ್ಟಿದ್ದಾರೆ. ಭಾವನಾತ್ಮಕ ವಿಚಾರ ಎಳೆದು ತರುವ ‌ಸಂಘಟನೆಗಳು ಬಿಜೆಪಿ ಪಕ್ಷದ ಅಂಗ ಪಕ್ಷಗಳು. ಇದರಲ್ಲಿ ಯಾವುದೇ ಸಂಶಯ ಇಲ್ಲ, ಅವರೇ ಇವರಿಗೆಲ್ಲಾ ಕುಮ್ಮಕ್ಕು ಕೊಟ್ಟಿರುವುದು. ಇದೀಗ ಮೌನಕ್ಕೆ ಶರಣಾಗಿದ್ದಾರೆ. ಇದು ಮೌನಿ ಸರ್ಕಾರ" ಎಂದು ಆರೋಪಿಸಿದರು.

Recommended Video

Jos Buttler ಮುಂದೆ ಎದುರಾಳಿ ತಂಡದ ಎಲ್ಲಾ ಲೆಕ್ಕಾಚಾರ ಧೂಳೀಪಟವಾಗೋದು ಹೇಗೆ? | Oneindia Kannada

English summary
Sree's of various mutt met former chief minister H. D. Kumaraswamy in Bidadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X