ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜರ್ಮನಿಯಿಂದ ರಾಮನಗರಕ್ಕೆ ಬಂದಿರೋ ಕೊರೊನಾ ಶಂಕಿತ ಯುವತಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮಾರ್ಚ್ 16: ರಾಮನಗರ ಜಿಲ್ಲೆಯಲ್ಲಿ ಕೊರೊನಾ ಶಂಕಿತ ಯುವತಿ ಪತ್ತೆಯಾಗಿದ್ದು, ಅವಳು ಜರ್ಮನ್ ದೇಶದಿಂದ ಬಂದಿದ್ದಾರೆ ಎನ್ನವುದು ಎಲ್ಲರನ್ನು ಬೆಚ್ಚಿ ಬೀಳಿಸಿದೆ.

ಚನ್ನಪಟ್ಟಣ ನಗರದ ಮೇಘಾ (22) ಎಂಬ ಯುವತಿ ಕಳೆದ ಒಂದು ವರ್ಷದಿಂದ ಉನ್ನತ ವ್ಯಾಸಂಗಕ್ಕಾಗಿ ಜರ್ಮನಿಯಲ್ಲಿದ್ದಳು. ಕಳೆದ ಮೂರು ದಿನಗಳ ಹಿಂದೆ ಚನ್ನಪಟ್ಟಣಕ್ಕೆ ಆಗಮಿಸಿದ್ದಳು.

ತಂದೆಯ ಜನ್ಮದಿನದ ಸ್ಮರಣೆಗಾಗಿ ಉಚಿತ ಮಾಸ್ಕ್ ವಿತರಿಸಿದ ವೈದ್ಯತಂದೆಯ ಜನ್ಮದಿನದ ಸ್ಮರಣೆಗಾಗಿ ಉಚಿತ ಮಾಸ್ಕ್ ವಿತರಿಸಿದ ವೈದ್ಯ

ಮೂರು ದಿನದಿಂದಲೂ ಈಕೆಗೆ ಜ್ವರ ಇದ್ದು, ಹೀಗಾಗಿ ತಂದೆಯೇ ಡಿಎಚ್ಒ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸೋಮವಾರ ಬೆಳಿಗ್ಗೆಯಿಂದಲೂ ಈಕೆಗೆ ಮಾತ್ರವಲ್ಲ, ಈಕೆಯ ಸಂಪರ್ಕದಲ್ಲಿದ್ದ ಪೋಷಕರ ಪರೀಕ್ಷೆಯು ನಡೆಯುತ್ತಿದೆ. ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಮೂವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

Corona Suspect Young Woman Who Came To Channapattana From Germany

ಗಂಟಲ ದ್ರವ ಪರೀಕ್ಷೆ ನಡೆಯುತ್ತಿದೆ. ಇನ್ನು ಎರಡು ದಿನಗಳ ಬಳಿಕ ಶಂಕಿತರಿಗೆ ಕೊರೊನಾ ಪಾಸಿಟಿವ್ ಇದೆಯಾ ಇಲ್ಲ ನೆಗೆಟಿವ್ ಇದೆಯಾ ಎಂಬುದು ದೃಡಪಡಲಿದೆ.

ಸಾರ್ವಜನಿಕರು ಯಾವುದೇ ಆಂತಕಕ್ಕೆ ಒಳಗಾಗಬೇಕಿಲ್ಲ. ಇದು ಶಂಕಿತ ಪ್ರಕರಣ ಅಷ್ಟೇ. ವರದಿ ಪಡೆಯಲು ಬೆಂಗಳೂರಿಗೆ ಶಂಕಿತರ ಗಂಟಲು ದ್ರವ ಮಾದರಿ ಕಳುಹಿಸಲಾಗಿದೆ. ಸಾರ್ವಜನಿಕರು ಭಯ ಪಡುವ ಅಗತ್ಯ ಇಲ್ಲ‌. ಇದು ನೆಗೆಟಿವ್ ಇರಬಹುದು. ಮುನ್ನೆಚ್ಚರಿಕೆಯ ಕ್ರಮ ವಹಿಸುವುದು ಉತ್ತಮ ಎಂದು ಡಿಎಚ್ಒ ಡಾ.ನಿರಂಜನ್ ತಿಳಿಸಿದ್ದಾರೆ.

English summary
Corona suspected young woman found in Ramanagara district, she came from Germany.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X