• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಜಿ ಸಚಿವ ಸಿಪಿವೈ ಹುಟ್ಟೂರಿನಲ್ಲಿ ಎರಡು ದೇವಾಲಯಗಳಿಗೆ ಕನ್ನ ಹಾಕಿದ ಕಳ್ಳರು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಸೆಪ್ಟೆಂಬರ್ 13: ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹುಟ್ಟೂರು ಚನ್ನಪಟ್ಟಣ ತಾಲ್ಲೂಕಿನ ಚಕ್ಕರೆ ಗ್ರಾಮದಲ್ಲಿ ಕಳ್ಳರು ತಡರಾತ್ರಿ ಎರಡು ದೇವಾಲಯಗಳಿಗೆ ಕನ್ನ ಹಾಕಿರುವ ಘಟನೆ ನಡೆದಿದೆ.

ಚಕ್ಕರೆ ಗ್ರಾಮದ ಪಟ್ಟಲದಮ್ಮ ದೇವಾಲಯ ಹಾಗೂ ವಡ್ಡರದೊಡ್ಡಿ ಗ್ರಾಮದ ಮಹದೇಶ್ವರ ದೇವಸ್ಥಾನದಲ್ಲಿ ಕಳ್ಳರು ಕಳ್ಳತನ ಮಾಡಿದ್ದಾರೆ. ಮಹದೇಶ್ವರ ದೇವಾಲಯದ ಬೀಗ ಮುರಿದು ಒಳನುಗ್ಗಿದ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.

ದೇವಾಲಯದಲ್ಲಿ ದೇವರಿಗೆ ಧರಿಸಿದ್ದ 30 ಕೆಜಿ ತೂಕದ ಪಂಚ ಲೋಹದ ಪ್ರಬಾಳೆ, ನಾಗರ ಸೆಡೆ, ದೀಪಗಳು, ಆರತಿ ತಟ್ಟೆ, ಬಿಂದಿಗೆ ಹುಂಡಿ ಹಾಗೂ ಗಂಟೆಗಳನ್ನು ಕಳ್ಳತನ ಮಾಡಿದ್ದಾರೆ. ಸುಮಾರು 30ರಿಂದ 40 ಸಾವಿರ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಮಹದೇಶ್ವರ ದೇವಾಲಯ ಕಳ್ಳತನ ಮಾಡಿದ ನಂತರ ಚಕ್ಕರೆ ಶಕ್ತಿ ದೇವತೆ ಪಟ್ಟಲದಮ್ಮ ದೇವಾಲಯ‌ ಕಳ್ಳತನ ಮಾಡಲು ಯತ್ನಿಸಿ ವಿಫಲರಾಗಿದ್ದಾರೆ. ದೇವಾಲಯಕ್ಕೆ ಅಳವಡಿಸಿದ ಸಿಸಿ ಕ್ಯಾಮರಾಗಳನ್ನು ಬೇರೆ ಕಡೆಗೆ ತಿರುಗಿಸಿದ್ದಾರೆ ಅಲ್ಲದೇ, ಕಿಟಕಿ ಗ್ಲಾಸ್ ಕೂಡ ಹೊಡೆದಿದ್ದಾರೆ. ಬಾಗಿಲಿನಲ್ಲಿ ನಿಂತು ಹಕ್ಕಿ ಪಕ್ಷಿಗಳನ್ನು ಹೊಡೆಯುವ ಕ್ಯಾಟರ್ ಬಿಲ್ ಬಳಸಿ ದೇವಾಲಯದ ಒಳಗೆ ಇದ್ದ ಸಿಸಿಟಿವಿಯ ಡಿವಿಆರ್‌ಗೆ ಹೊಡೆದಿದ್ದಾರೆ. ನಂತರ ಬಾಗಿಲನ್ನು ಹೊಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಬಾಗಿಲು ಹೊಡೆಯಲು ಸಾಧ್ಯವಾಗದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಚನ್ನಪಟ್ಟಣ ತಾಲ್ಲೂಕಿನ ಪಟ್ಟಲದಮ್ಮ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಕಳ್ಳರು ದೇವಾಲಯದ ಮುಂದೆ ಇರುವ ಸಿಸಿ ಕ್ಯಾಮರಾಗಳನ್ನು ಮಾತ್ರ ಬೇರೆ ಕಡೆಗೆ ತಿರುಗಿಸಿದ್ದಾರೆ. ಆದರೆ ಬಾಗಿಲನ ಬಲಭಾಗದಲ್ಲಿದ್ದ ಸಿಸಿ ಕ್ಯಾಮೆರವನ್ನು ಕಳ್ಳರು ಗಮನಿಸಲಿಲ್ಲ. ಹಾಗಾಗಿ ಇಬ್ಬರು ಕಳ್ಳರು ಬಾಗಿಲು ಹೊಡೆಯುವುದು ಹಾಗೂ ದೇವಾಲಯದ ಒಳಗಿದ್ದ ಸಿಸಿಟಿವಿ ಡಿವಿಆರ್‌ನನ್ನು ಕ್ಯಾಟರ್ ಬಿಲ್‌ನಿಂದ ಹೊಡೆಯುವ ದೃಶ್ಯ ಸೆರೆಯಾಗಿದೆ.

 Ramanagara: Stolen In The Chakkare Village Temples Of Channapattana Taluk

4-5 ದಿನಗಳಿಂದ ಗ್ರಾಮದಲ್ಲೆ ಇದ್ದ ಕಳ್ಳರು
ದೇವಾಲಯ ಕಳ್ಳತನ ಮಾಡಿರುವ ಕಳ್ಳರು ಕಳೆದ 5 ದಿನಗಳಿಂದ ಗ್ರಾಮದಲ್ಲೇ ವಾಸ್ತವ್ಯ ಹೂಡಿದ್ದರು. ಇಬ್ಬರು ಗಂಡಸರು ಓರ್ವ ಹೆಂಗಸು ಹಾಗೂ ಇಬ್ಬರು ಮಕ್ಕಳು ನಾವು ಜೇನು ಬಿಡಿಸುವವರು ಎಂದು ಹೇಳಿಕೊಂಡು ಗ್ರಾಮದ ಪಟ್ಟಲದಮ್ಮ ಕಲ್ಯಾಣ ಮಂಟಪದ ಮುಂದೆ ಉಳಿದುಕೊಂಡಿದ್ದರು. ಇದೀಗ ಸಿಸಿಟಿವಿಯಲ್ಲಿ ಸೆರೆಯಾದವರು ಹಾಗೂ ಜೇನು ಬಿಚ್ಚಲು ಬಂದಿದ್ದವರು ಒಂದೇ ಇಬ್ಬರು ಎಂದು ತಿಳಿದಿದೆ.

   ವಿರಾಟ್ & ಎಬಿಡಿ ಗೆ ಕಾಡ್ತಿದೆ ದೊಡ್ಡ ಸಮಸ್ಯೆ!| Oneindia Kannada

   ಪೊಲೀಸರು, ಶ್ವಾನದಳ ಭೇಟಿ‌
   ದೇವಸ್ಥಾನ ಕಳ್ಳತನ ಘಟನೆ ವಿಷಯ ತಿಳಿದ ಗ್ರಾಮಾಂತರ ಪಿಎಸ್ಐ ಶಿವಕುಮಾರ್ ಸಿಬ್ಬಂದಿಗಳು ಎರಡು ದೇವಾಲಯದ ಸ್ಥಳಗಳಿಗೆ ಬಂದು ಪರಿಶೀಲನೆ ನಡೆಸಿದರು. ಅಲ್ಲದೇ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

   English summary
   Two temples were stolen late night in the Chakkare village of Channapattana taluk.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X