ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರದ ಶ್ರೀರಂಗನಾಥಸ್ವಾಮಿ ದೇಗುಲದ ಹುಂಡಿಯಲ್ಲಿ 27 ಲಕ್ಷ ಸಂಗ್ರಹ

By ರಾಮನಗರ ಪ್ರತಿನಿಧಿ
|
Google Oneindia Kannada News

ಮಾಗಡಿ, ಆಗಸ್ಟ್ 2: ಶ್ರೀರಂಗನಾಥಸ್ವಾಮಿ ದೇವಾಲಯದ ಹುಂಡಿಯಲ್ಲಿ ಈ ಬಾರಿ ವಿದೇಶಿ ಕರೆನ್ಸಿಗಳು, ಅಮಾನ್ಯಗೊಂಡ ನೋಟುಗಳೂ ದೊರೆತಿವೆ. ಹುಂಡಿಯಲ್ಲಿ 27 ಲಕ್ಷಕ್ಕೂ ಅಧಿಕ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.

ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಅಮಾನ್ಯಗೊಂಡ 500 ರೂ ಮುಖಬೆಲೆಯ 10 ಹಾಗೂ 1000 ರೂ. ಮುಖ ಬೆಲೆಯ 3 ನೋಟುಗಳ ಒಟ್ಟು 8 ಸಾವಿರ ರೂಪಾಯಿ ನೋಟುಗಳು ದೊರಕಿವೆ. ಇದರ ಜೊತೆಗೆ ಅಮೇರಿಕಾ, ಇಂಗ್ಲೆಂಡ್, ಬ್ಯಾಂಕಾಕ್, ಯುಎಇ ಸೇರಿದಂತೆ ವಿದೇಶಿ ಕರೆನ್ಸಿಗಳು ದೊರಕಿರುವುದಾಗಿ ಮುಜರಾಯಿ ಇಲಾಖೆಯ ಕಾರ್ಯನಿವಾಹಕ ಅಧಿಕಾರಿ ರಘು ತಿಳಿಸಿದ್ದಾರೆ.

 ಸಾವನದುರ್ಗದ ಲಕ್ಷೀನರಸಿಂಹಸ್ವಾಮಿ ದೇಗುಲದ ಹುಂಡಿಯಲ್ಲಿ 32 ಲಕ್ಷ ಸಂಗ್ರಹ ಸಾವನದುರ್ಗದ ಲಕ್ಷೀನರಸಿಂಹಸ್ವಾಮಿ ದೇಗುಲದ ಹುಂಡಿಯಲ್ಲಿ 32 ಲಕ್ಷ ಸಂಗ್ರಹ

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಆ ಸಮಯದಲ್ಲಿ 27.87.160 ರೂ. ಸಂಗ್ರಹವಾಗಿತ್ತು. ಈ ಬಾರಿ 27,31,180 ರೂಪಾಯಿ ಸಂಗ್ರಹವಾಗಿದೆ. ಹುಂಡಿಯಲ್ಲಿ ಹಣ ಹೊರತುಪಡಿಸಿ ಚಿನ್ನದ ಮಾಂಗಲ್ಯ ಹಾಗೂ ಬೆಳ್ಳಿಯ ತೊಟ್ಟಿಲುಗಳು ಸಿಕ್ಕಿವೆ.

Sriranganatha Temple Of Ramanagar Hundi Collection

ಬೆಳೆಯೋ ರಂಗ: ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಬೆಳೆಯೋ ರಂಗನ ವಿಗ್ರಹವಿದ್ದು, ಮಕ್ಕಳಾಗದವರು ಭಕ್ತಿಯಿಂದ ಬೆಳ್ಳಿಯ ತೊಟ್ಟಿಲು ಸಲ್ಲಿಸುತ್ತೇನೆ ಎಂದು ಹರಿಸಿಕೊಂಡರೆ ಮಕ್ಕಳಾಗುತ್ತದೆ ಎನ್ನುವ ನಂಬಿಕೆ ಇರುವ ಹಿನ್ನೆಲೆಯಲ್ಲಿ ಈ ಬಾರಿ ಬಹಳಷ್ಟು ಬೆಳ್ಳಿಯ ತೊಟ್ಟಿಲುಗಳು ಹಾಗೂ 8 ಚಿನ್ನದ ಮಾಂಗಲ್ಯ ಸಂಗ್ರಹವಾಗಿವೆ.

ಕುಮಾರಣ್ಣನ ತವರು ಜಿಲ್ಲೆಯಲ್ಲಿ ಬಿಜೆಪಿ ಸಂಭ್ರಮಕುಮಾರಣ್ಣನ ತವರು ಜಿಲ್ಲೆಯಲ್ಲಿ ಬಿಜೆಪಿ ಸಂಭ್ರಮ

ತಹಶೀಲ್ದಾರ್ ರಮೇಶ್ ಹಾಗೂ ಮುಜರಾಯಿ ಇಲಾಖೆ ಚಂದ್ರಶೇಖರ್ ರವರ ನೇತೃತ್ವದಲ್ಲಿ ದೇವಾಲಯ ಹುಂಡಿ ಎಣಿಕೆ ಕಾರ್ಯ ನಡೆಯಿತು. ಹುಂಡಿಯಲ್ಲಿ ದೊರೆತ ಹಣ, ವಿದೇಶಿ ಕರೆನ್ಸಿ, ಬೆಳ್ಳಿ ತೊಟ್ಟಿಲುಗಳು ಮತ್ತು ಚಿನ್ನದ ತಾಳಿಗಳನ್ನು ಎಸ್ ಬಿಐ ಖಾತೆಗೆ ಜಮಾ ಮಾಡಲಾಗಿದೆ ಎಂದು ರಘು ಅವರು ತಿಳಿಸಿದ್ದಾರೆ.

English summary
Sriranganatha Temple Of Ramanagar Hundi Collection amounted to 27,31,180 rs thsi time. This time, foreign currency and invalid notes were also found in the hundi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X