ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೇಷ್ಮೆ ನಗರಿಯಲ್ಲಿ 108 ದಂಪತಿಗಳಿಂದ ಶನಿ ಶಾಂತಿ ಪೂಜೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 24: ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ಶನಿ ಗ್ರಹ ಸರಿ ಸುಮಾರು 30 ವರ್ಷಗಳ ಬಳಿಕ ರಾಶಿ ಚಕ್ರಗಳ ಪ್ರಯಾಣ ಮುಗಿಸಿ ತನ್ನ ಸ್ವಕ್ಷೇತ್ರ ಮಕರ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ದೇಶದಾದ್ಯಂತ ವಿಶೇಷ ಹೋಮ ಹವನಗಳು ನಡೆಯುತ್ತಿವೆ.

ಅದೇ ರೀತಿ ರೇಷ್ಮೆನಗರಿ ರಾಮನಗರದಲ್ಲೂ ಇಂದು ವಿಶೇಷ ಪೂಜೆ ನಡೆಯಿತು. 108 ದಂಪತಿಗಳಿಂದ ಶನಿ ದೇವರ ಶಾಂತಿ ಪೂಜೆ ಹಾಗೂ ಮಹಾ ಮೃತ್ಯುಂಜಯ ಹೋಮ ಹಮ್ಮಿಕೊಳ್ಳಲಾಯಿತು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಘೋಷಣೆಗೂ ಮುನ್ನ ಕಬ್ಬಾಳಮ್ಮಗೆ ಪೂಜೆ ಸಲ್ಲಿಸಿದ ಡಿಕೆಶಿ ತಾಯಿಕೆಪಿಸಿಸಿ ಅಧ್ಯಕ್ಷ ಸ್ಥಾನ ಘೋಷಣೆಗೂ ಮುನ್ನ ಕಬ್ಬಾಳಮ್ಮಗೆ ಪೂಜೆ ಸಲ್ಲಿಸಿದ ಡಿಕೆಶಿ ತಾಯಿ

ತಾಲೂಕಿನ ಲಕ್ಷ್ಮೀಪುರ ಗ್ರಾಮದ ಶನಿಮಹಾತ್ಮನ ದೇವಾಲಯದಲ್ಲಿ ಇಂದು ಶನಿ ದೇವರ ಪೂಜೆ ಹಾಗೂ ಮಹಾ ಮೃತ್ಯುಂಜಯ ಹೋಮ ನಡೆಯಿತು. ಸುಮಾರು 108 ದಂಪತಿಗಳು ಈ ಪೂಜೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಲೋಕ ಕಲ್ಯಾಣ ಹಾಗೂ ಮನಸ್ಸಿನ ನೆಮ್ಮದಿಗಾಗಿ ಈ ಪೂಜೆ ಹಮ್ಮಿಕೊಳ್ಳಲಾಗಿತ್ತು.

Special Pooja Performed by 108 couples In Ramanagara

ಶನಿ ಗ್ರಹವು ಮಕರ ರಾಶಿ ಪ್ರವೇಶದಿಂದಾಗಿ ಧನಸ್ಸು ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿಗಳಿಗೆ ಸಾಡೇ ಸಾಥ್ ಕಾಡಲಿದೆ ಎನ್ನುವ ಭೀತಿಯಿಂದ ಜನರು ತಮ್ಮ ನೆಮ್ಮದಿಗೋಸ್ಕರ ಹಾಗೂ ಮುಂದೆ ಮಾಡುವ ಕೆಲಸಗಳಿಗೂ ಯಾವುದೇ ಅಡ್ಡಿಯಾಗಬಾರದು ಎಂದು ಪೂಜೆಯಲ್ಲಿ ಪಾಲ್ಗೊಂಡಿದ್ದರು.
Special Pooja Performed by 108 couples In Ramanagara

ಇಷ್ಟಪಟ್ಟಿದ್ದವರನ್ನು ಮದುವೆಯಾಗಬೇಕೆ? ಪರಿಹಾರ ಇಲ್ಲಿದೆ ಇಷ್ಟಪಟ್ಟಿದ್ದವರನ್ನು ಮದುವೆಯಾಗಬೇಕೆ? ಪರಿಹಾರ ಇಲ್ಲಿದೆ

ಶನಿ ಶಾಂತಿ ಪೂಜೆ ಹಾಗೂ ಮಹಾ ಮೃತ್ಯುಂಜಯ ಹೋಮದಲ್ಲಿ ದಂಪತಿಗಳಷ್ಟೇ ಅಲ್ಲದೇ, ಹಲವು ಮಠದ ಗುರುಗಳು ಪೂಜೆಯಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. ಇನ್ನು ಪೂಜೆಗೆ ಬಂದಿರುವ ಸುಮಾರು ಎರಡು ಸಾವಿರ ಜನರಿಗೆ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

English summary
108 couples Performed Shani special Pooja at Ramanagara Today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X