ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನಕಪುರ ಬಂಡೆ ಬ್ರದರ್ಸ್‌ಗೆ ಡೈನಾಮೇಡ್ ಆಗುತ್ತಾರ ಭಾವ ಶರತ್ ಚಂದ್ರ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮೇ 28: ವಿಧಾನಸಭಾ ಚುನಾವಣೆಯ ಹೊತ್ತಿನಲ್ಲೇ ಜಿಲ್ಲಾ ಕಾಂಗ್ರೆಸ್ ಭಿನ್ನಮತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರಿಗೆ ತಲೆ ನೋವಾಗಿದೆ. ಕೆಪಿಸಿಸಿ ಸಾರಥಿ ತವರು ಜಿಲ್ಲೆಯಲ್ಲೇ ಭಿನ್ನಮತ ಶಮನ ಮಾಡುವ ಅನಿವಾರ್ಯತೆ ಎದರುರಾಗಿದೆ.

ಸ್ವತಃ ನೇತೃತ್ವ ವಹಿಸಿ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ಗೆ ಕರೆತಂದ ಮಾಗಡಿಯ ಹೆಚ್.ಸಿ.ಬಾಲಕೃಷ್ಣ, ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಹೆಚ್.ಎಂ‌.ರೇವಣ್ಣ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇನ್ನೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನೂತನ ಸಾರಥಿ ಘೋಷಣೆ ಮಾಡುವ ಸಮಯಕ್ಕೆ ಸರಿಯಾಗಿ ಡಿಕೆಶಿ ಸಹೋದರರ ಭಾವ ಶರತ್ ಚಂದ್ರ ಬಂಡಾಯದ ಬಾವುಟ ಹಾರಿಸಿದ್ದಾರೆ.

ಬೊಂಬೆನಾಡು ಖ್ಯಾತಿಯ ಚನ್ನಪಟ್ಟಣ ವಿಧಾನಕ್ಷೇತ್ರದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ತೊರೆದ ನಂತರದ ದಿನಗಳಲ್ಲಿ ಸಮರ್ಥ ಅಭ್ಯರ್ಥಿಯ ಕೊರತೆ ಅನುಭವಿಸುತ್ತಿರುವ ಚನ್ನಪಟ್ಟಣ ಕಾಂಗ್ರೆಸ್ ಪಾಳಯಕ್ಕೆ ಉದ್ಯಮಿ ಪಂಚಮಿ ಪ್ರಸನ್ನ ಅವರನ್ನು ಕರೆತಂದು ಪಕ್ಷ ಸಂಘಟನೆಗೆ ಮುಂದಾಗಿರುವ ಕನಕಪುರದ ಬಂಡೆ ಬ್ರದರ್ಸ್‌ಗಳಿಗೆ ಭಾವ ಶರತ್‌ಚಂದ್ರ ಡೈನಾಮೇಡ್ ಪರಿಣಮಿಸಿದ್ದಾರೆ ಎನ್ನಲಾಗುತ್ತಿದೆ.

ಕ್ಷೇತ್ರದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿತ್ತು ಆಗ ನನ್ನನ್ನು ಕೈ ನಾಯಕರು ಬಳಸಿಕೊಂಡರು ಇದೀಗ ನನ್ನ ರಾಜಕಾರಣಕ್ಕೆ ಸಂಬಂಧಿಗಳೇ ಮುಳುವಾಗುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ರವರ ತಂಗಿ ಗಂಡ ಶರತ್ ಚಂದ್ರ, ಚುನಾವಣೆ ವರ್ಷಕ್ಕೂ ಮುನ್ನವೇ ಚನ್ನಪಟ್ಟಣದ ಕೈ ಪಾಳಯದಲ್ಲಿ ಬಂಡಾಯದ ಹೊಗೆ ಎಬ್ಬಿಸಿದ್ದಾರೆ.

ಅಭ್ಯರ್ಥಿ ಇಲ್ಲದೆ ಸೊರಗಿದ್ದ ಪಕ್ಷ

ಅಭ್ಯರ್ಥಿ ಇಲ್ಲದೆ ಸೊರಗಿದ್ದ ಪಕ್ಷ

ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲದೆ ಸೊರಗಿದ್ದ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಗೆ ತಂದಿದ್ದೇ ನಾನು. 2013 ಎಂಪಿ ಎಲೆಕ್ಷನ್‌ನಲ್ಲಿ ನಾನು ಡಿ.ಕೆ.ಸುರೇಶ್ ಪರ ನಿಂತು ಕಲಸ ಮಾಡಿದ್ದೇನೆ. ಕಳೆದ ಬಾರಿ ಕ್ಷೇತ್ರದ ಟಿಕೆಟ್ ನೀಡುವ ಸಮಯದಲ್ಲಿ ಎಐಸಿಸಿಗೆ ನನ್ನ ಸಿಂಗಲ್ ಹೆಸರು ಹೋದರು ಸಹ ಟಿಕೆಟ್ ಕೊಡಲಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.


ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ತೊರೆದ ಮೇಲೆ ನನ್ನನ್ನು ಅಭ್ಯರ್ಥಿಯಾಗುವಂತೆ ಕಾರ್ಯಕರ್ತರು ಒತ್ತಾಯಿಸಿದರು. ನಾನು ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ನಿಯತ್ತಾಗಿ ಕೆಲಸ ಮಾಡಿರುವೆ ಕಾರ್ಯಕರ್ತರ ಒತ್ತಾಯಕ್ಕೆ 2018 ರ ಚುನಾವಣೆಯಲ್ಲಿ ಸ್ಪರ್ಧೆಗೆ ಒಪ್ಪಿ ಉತ್ತಮ ಕೆಲಸ ಮಾಡಿದೆ.ಆದರೆ ಡಿಕೆ ಸಹೋದರರು ಪಕ್ಕದ ಕ್ಷೇತ್ರದ ಮಾಜಿ ಶಾಸಕ ಎಚ್.ಎಮ್.ರೇವಣ್ಣ ಅವರಿಗೆ ಟಿಕೆಟ್ ನೀಡಿದರು. ಆಗಲೂ ನಾನು ಸುಮ್ಮನಾಗಿ ಕೆಲಸ ಮಾಡಿದೆ.

ಮನೆಯಿಂದ ಹೆಣ್ಣು ತಂದರೆ ಕುಟುಂಬ ರಾಜಕಾರಣ ಹೇಗೆ ಸಾಧ್ಯ

ಮನೆಯಿಂದ ಹೆಣ್ಣು ತಂದರೆ ಕುಟುಂಬ ರಾಜಕಾರಣ ಹೇಗೆ ಸಾಧ್ಯ

ಇತ್ತೀಚೆಗೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಂಸದ ಸುರೇಶ್ ನಮ್ಮ ಭಾವ ಶರತ್ ಚಂದ್ರ ಅವರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ ಅವರಿಗೆ ಟಿಕೆಟ್ ನೀಡಿದ್ರೆ ಕುಟುಂಬ ರಾಜಕಾರಣವಾಗುತ್ತದೆ ಎಂಬ ಸಬೂಬು ನೀಡಿದ್ದಾರೆ. ನಾನು ಅವರ ಕುಟುಂಬಕ್ಕೆ ಸೇರಿದವನಲ್ಲ , ಅವರ ಮನೆಯಿಂದ ಹೆಣ್ಣು ತಂದಿದ್ದಕ್ಕೆ ಕುಟುಂಬ ರಾಜಕಾರಣ ಹೇಗೆ ಸಾಧ್ಯ ಎಂದು ಶರತ್ ಚಂದ್ರ ಡಿಕೆ ಸಹೋದರರ ವಿರುದ್ಧ ಬೇಸರ ವ್ಯಕ್ತಡಿಸಿದರು.

ನಾನು ಜನರ ಸೇವೆ ಮಾಡಲು ಟಿಕೆಟ್ ಕೇಳುತ್ತಿದ್ದೇನೆ ಆದರೆ ಡಿಕೆ ಸಹೋದರರು ನಿಗಮ‌ ಮಂಡಳಿ ಅಧ್ಯಕ್ಷನನ್ನಾಗಿ ಮಾಡುವ ಆಶ್ವಾಸನೆ ನೀಡುತ್ತಿದ್ದಾರೆ. ನನಗೆ ಯಾವುದೇ ನಿಗಮ ಮಂಡಳಿಯ ಅಧ್ಯಕ್ಷ ಗಿರಿ ಬೇಡ, ಅವರ ಕುಟುಂಬ ರಾಜಕಾರಣದ ಆರೋಪಕ್ಕೆ ನಾನು ಆಹಾರ ಆಗಲು ಇಷ್ಟವಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ಹಾಗೂ ಡಿಕೆ ಸಹೋದರರ ರಿಂದ ಅಂತರ ಕಾಯ್ದುಕೊಳ್ಳುವ ಸೂಚನೆ ನೀಡಿದರು.

‌ನಾನು ನನ್ನ ಕ್ಷೇತ್ರಕ್ಕೆ ಸೋಲಲು ಬಂದಿಲ್ಲ.

‌ನಾನು ನನ್ನ ಕ್ಷೇತ್ರಕ್ಕೆ ಸೋಲಲು ಬಂದಿಲ್ಲ.

ಡಿಕೆ ಸಹೋದರರು ತಾಲ್ಲೂಕಿನ ಮೂಲದವರೇ ಆದ ಉದ್ಯಮಿ ಪಂಚಮಿ ಪ್ರಸನ್ನ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಕ್ಷೇತ್ರದಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಮಂತ್ರಿ ಸೇರಿದಂತೆ ಕ್ಷೇತ್ರದಲ್ಲಿ ಈಗಾಗಲೇ ಇಬ್ಬರು ಘಟಾನುಘಟಿ ನಾಯಕರಿದ್ದಾರೆ, ಅವರ ಜೊತೆ ಸೆಣೆಸಲು ನಾಯಕರಾದ ಡಿ ಕೆ ಶಿವಕುಮಾರ್ ಮತ್ತು ಡಿ ಕೆ ಸುರೇಶ್ ರವರು ನನ್ನ ಗೆಲುವಿಗೆ ಮುನ್ನುಡಿ ಬರೆಯಲು ಆಶೀರ್ವದಿಸಿದ್ದಾರೆ. ಕ್ಷೇತ್ರದಲ್ಲಿರುವ ಕಾಂಗ್ರೆಸ್ ಮುಖಂಡರು, ನನ್ನ ಹಿತೈಷಿಗಳು ಹಾಗೂ ಮತದಾರರು ನನ್ನ ಜೊತೆಗಿದ್ದಾರೆ‌ ಎಂದು ಉದ್ಯಮಿ ಪಂಚಮಿ ಪ್ರಸನ್ನ ತಿಳಿಸಿದರು.

‌ನಾನು ನನ್ನ ಕ್ಷೇತ್ರಕ್ಕೆ ಸೋಲಲು ಬಂದಿಲ್ಲ. ಗೆದ್ದೇ ಗೆಲ್ಲಬೇಕು ಎಂದು ಹಠತೊಟ್ಟು ಕ್ಷೇತ್ರಕ್ಕೆ ಬಂದಿದ್ದೇನೆ. ಯಾವುದೇ ಕಾರಣಕ್ಕೂ ನಾನು ಸೋಲು ಒಪ್ಪಿಕೊಳ್ಳುವವನೂ ಅಲ್ಲ ಸೋಲುವವನೂ ಅಲ್ಲ. ಕಾಂಗ್ರೆಸ್‍ನಲ್ಲಿ ಸಶಕ್ತ ಕಾರ್ಯಕರ್ತರ ಪಡೆಯೇ ಇದ್ದು, ದೇವರು ಮತ್ತು ಜನರ ಆಶೀರ್ವಾದದಿಂದ ಗೆದ್ದೇ ಗೆಲ್ಲುತ್ತೇನೆ ಎಂಬ ಭರವಸೆ ಇದೆ ಎಂದು ಉದ್ಯಮಿ ಪಂಚಮಿ ಪ್ರಸನ್ನ ವಿಶ್ವಾಸ ವ್ಯಕ್ತಪಡಿಸಿದರು.

ಪಂಚಮಿ ಪ್ರಸನ್ನ ಹೇಳಿಕೆ

ಪಂಚಮಿ ಪ್ರಸನ್ನ ಹೇಳಿಕೆ

ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಕಾಂಗ್ರೆಸ್‍ನಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಕೊರತೆಯೇನು ಇಲ್ಲ. ಕೆಲ ಕಾಲದಿಂದ ನಾಯಕತ್ವದ ಕೊರತೆ ಇದ್ದ ಕಾರಣ ಹೊರಗಿನವರಿಗೆ ಮಣೆ ಹಾಕಲಾಗಿತ್ತು. ಪ್ರತಿ ಚುನಾವಣೆಯಲ್ಲೂ ಬೇರೆ ಬೇರೆ ನಾಯಕರಿಗೆ ಟಿಕೆಟ್ ನೀಡಲಾಗಿತ್ತು ಆದ್ದರಿಂದ ಪಕ್ಷ ಸಂಘಟನೆ ಕುಂಠಿತಗೊಂಡಿತ್ತು. ಮುಂದಿನ ದಿನಗಳಲ್ಲಿ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪಕ್ಷವನ್ನು ಬಲಿಷ್ಠಗೊಳಿಸಲು ಶ್ರಮಿಸುವುದಾಗಿ ಪಂಚಮಿ‌ ಪ್ರಸನ್ನ ತಿಳಿಸಿದರು.

English summary
KPCC president DK Shivakumar suffered headache during the assembly elections from Ramanagara District Congress dissident .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X