ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಕ್ರಾಂತಿ ವಿಶೇಷ; ಹಬ್ಬದಲ್ಲಿ ಪಟ್ಲು ಕರಿಕಬ್ಬುಗೆ ವಿಶೇಷ ಸ್ಥಾನ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 14; ವರ್ಷದ ಮೂದಲ ಹಬ್ಬ ಸಂಕ್ರಾಂತಿ. ಸಂಕ್ರಾಂತಿ ಹಬ್ಬದಂದು ಹೆಣ್ಣು ಮಕ್ಕಳು ಹೊಸ ಬಟ್ಟೆ ತೊಟ್ಟು ಸಿಂಗಾರ ಮಾಡಿಕೊಂಡು ಮನೆ ಮನೆಗಳಿಗೆ ತೆರಳಿ ಎಳ್ಳು, ಬೆಲ್ಲ ಹಾಗೂ ತುಂಡು ಕರಿ ಕಬ್ಬು ಹಂಚಿ 'ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು' ಎನ್ನುವುದು ಹಬ್ಬದ ಸಂಪ್ರದಾಯ.

ಸಂಕ್ರಾಂತಿ ಹಬ್ಬದಲ್ಲಿ ಕರಿ ಕಬ್ಬಿಗೆ ವಿಶಿಷ್ಟ ಸ್ಥಾನ, ಕರಿ ಕಬ್ಬು ಇಲ್ಲದೇ ಹಬ್ಬ ಪೂರ್ತಿಯಾಗುವುದಿಲ್ಲ. ಹಬ್ಬದಲ್ಲಿ ಮಾರುಕಟ್ಟೆಯಲ್ಲಿ ಕರಿ ಕಬ್ಬಿಗೆ ಭಾರೀ ಬೇಡಿಕೆ ಇರುತ್ತದೆ. ರಾಜ್ಯದಲ್ಲಿ ಕರಿ ಕಬ್ಬು ಬೆಳೆಯವ ಪ್ರದೇಶ ಬಹಳ ಕಡಿಮೆ. ‌ಸಂಕ್ರಾಂತಿ ಹಬ್ಬದಲ್ಲಿ ಗ್ರಾಹಕನ ಕರಿಕಬ್ಬು ಬೇಡಿಕೆಯನ್ನು ನೀಗಿಸುವುದೇ ಬೊಂಬೆನಾಡು ಚನ್ನಪಟ್ಟಣದ ಪಟ್ಲು ಗ್ರಾಮ.

ವಿಶೇಷ ವರದಿ: ಕೊರೊನಾ ಆರ್ಭಟದಲ್ಲಿ ಕಳೆಗುಂದಿದ ಸಂಕ್ರಾಂತಿ ಹಬ್ಬವಿಶೇಷ ವರದಿ: ಕೊರೊನಾ ಆರ್ಭಟದಲ್ಲಿ ಕಳೆಗುಂದಿದ ಸಂಕ್ರಾಂತಿ ಹಬ್ಬ

ವಿಶ್ವದಲ್ಲೇ ಬೊಂಬೆನಾಡು ಚನ್ನಪಟ್ಟಣ ಖ್ಯಾತಿ ಪಡೆದಿದ್ದರೆ, ಸಂಕ್ರಾಂತಿ ಕರಿಕಬ್ಬು ಗ್ರಾಮ ಎಂದು ರಾಜ್ಯದಲ್ಲೇ ಹೆಸರುವಾಸಿಯಾಗಿರುವುದು ಪಟ್ಲು ಗ್ರಾಮ. ಪಟ್ಲು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಬೆಳೆಯುವ ಪಟಾವಳಿ ಕರಿಕಬ್ಬು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

Makar Sankranti 2022: ಸಂಕ್ರಾಂತಿ ಹಬ್ಬ ಯಾವಾಗ ಜ.14 ಅಥವಾ 15; ಗೊಂದಲಗಳಿಗೆ ಇಲ್ಲಿದೆ ಉತ್ತರ Makar Sankranti 2022: ಸಂಕ್ರಾಂತಿ ಹಬ್ಬ ಯಾವಾಗ ಜ.14 ಅಥವಾ 15; ಗೊಂದಲಗಳಿಗೆ ಇಲ್ಲಿದೆ ಉತ್ತರ

ತಾಲೂಕಿನ ಪಟ್ಲು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ರೈತರು ಹಲವಾರು ವರ್ಷಗಳಿಂದ ಪ್ರಮುಖ ವಾಣಿಜ್ಯ ಬೆಳೆಯಾಗಿ ಈ ಕರಿಕಬ್ಬು ಬೆಳೆಯುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಈ ಕಬ್ಬು ಪಟ್ಲು ಪಟಾವಳಿ ಕಬ್ಬು ಎಂದೇ ಮಾರುಕಟ್ಟೆಯಲ್ಲಿ ಪ್ರಸಿದ್ಧವಾಗಿದೆ.

ಸಂಕ್ರಾಂತಿ ನಂತರ ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬದಲಾವಣೆ! ಸಂಕ್ರಾಂತಿ ನಂತರ ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬದಲಾವಣೆ!

ರಾಮನಗರ ಜಿಲ್ಲೆ ಚನ್ನಪಟ್ಟಣ

ರಾಮನಗರ ಜಿಲ್ಲೆ ಚನ್ನಪಟ್ಟಣ

ಪಟ್ಲು ಸೇರಿದಂತೆ ತಿಟ್ಟಮಾರನಹಳ್ಳಿ, ಅಬ್ಬೂರು, ಅಬ್ಬೂರುದೊಡ್ಡಿ, ಕಳ್ಳಿಹೊಸೂರು, ತೊರೆಹೊಸೂರು, ಚಿಕ್ಕನದೊಡ್ಡಿ, ಮೈಲನಾಯ್ಕನಹಳ್ಳಿ ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ಕರಿಕಬ್ಬು ಬೆಳೆಯುತ್ತಬರಲಾಗುತ್ತಿದೆ. ಈ ಹಿಂದೆ ಸುಮಾರು 300 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತಿತ್ತು. ಆದರೆ ಈ ಬೇಸಾಯಕ್ಕೆ ಸಾಕಷ್ಟು ಕಠಿಣ ಶ್ರಮ ಹಾಗೂ ಕಾರ್ಮಿಕರ ಅವಶ್ಯಕತೆ ಇರುವುದರಿಂದ ಇತ್ತೀಚೆಗೆ ಸ್ವಲ್ಪ
ಕಡಿಮೆಯಾಗಿದೆ.

‌ಪಟ್ಲು ಕರಿಕಬ್ಬಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಜೊತೆಗೆ ಕೇರಳ, ತಮಿಳುನಾಡು ಸೇರಿದಂತೆ ಹಲವು ಭಾಗಗಳಿಗೆ ಈ ಕಬ್ಬು ಕಳಿಸಲಾಗುತ್ತದೆ.

100 ಎಕರೆಗೂ ಅಧಿಕ ಪ್ರದೇಶ

100 ಎಕರೆಗೂ ಅಧಿಕ ಪ್ರದೇಶ

ಹೆಚ್ಚಿನ ಲಾಭ ತಂದುಕೊಡುವ ಕರಿಕಬ್ಬು ಬೆಳೆಯನ್ನು ಸಾಕಷ್ಟು ಮುತುವರ್ಜಿಯಿಂದ ಬೆಳೆಯುತ್ತಾ ಬಂದಿದ್ದಾರೆ ರೈತರು. ಬೆಳೆ ಬೆಳೆಯಲು ಒಂದು ವರ್ಷದ ಅವಧಿ ಬೇಕಾಗಿದ್ದು, ಸುಮಾರು 2 ರಿಂದ 7 ಮೀಟರ್‌ ತನಕ ಈ ಕಬ್ಬು ಬೆಳೆಯುತ್ತದೆ. ಪ್ರಸ್ತುತ ತಾಲ್ಲೂಕಿನಲ್ಲಿ 100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕರಿ ಕಬ್ಬು ಬೆಳೆದಿದ್ದು, ಪ್ರತಿ ಎಕರೆ ಕರಿಕಬ್ಬು ಬೆಳೆಯಲು ಸುಮಾರು 2 ಲಕ್ಷ ಖರ್ಚು ಬರುತ್ತದೆ. ಕರಿಕಬ್ಬನ್ನು ಜನವರಿ, ಫೆಬ್ರವರಿ ತಿಂಗಳಿನಲ್ಲಿ ಬಿತ್ತನೆ ಮಾಡಿದರೆ, ಡಿಸೆಂಬರ್ ತಿಂಗಳಿನಲ್ಲಿ ಕಟಾವಿಗೆ ಸಿದ್ದವಾಗುತ್ತದೆ.

ಹೊಲದಿಂದ ಮಾರುಕಟ್ಟೆಗೆ

ಹೊಲದಿಂದ ಮಾರುಕಟ್ಟೆಗೆ

ಕಳೆದ ಒಂದು ವಾರದಿಂದ ಈ ಪ್ರದೇಶದಲ್ಲಿ ನಿರಂತರವಾಗಿ ಕಬ್ಬಿನ ಕಟಾವು ನಡೆಯುತ್ತಿದೆ. ರೈತರು ಕೂಲಿ ಕಾರ್ಮಿಕರ ಜೊತೆಗೂಡಿ ಕಬ್ಬನ್ನು ಕಟಾವು ಮಾಡಿ ವಾಹನಗಳಿಗೆ ತುಂಬಿಕೊಂಡು ಮಾರುಕಟ್ಟೆಯತ್ತ ತೆರಳುತ್ತಿದ್ದಾರೆ. ಕೆಲ ರೈತರು ತಾವೇ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಇನ್ನು ಕೆಲ
ರೈತರ ಬಳಿ ವರ್ತಕರು ಎಕರೆ ಲೆಕ್ಕದಲ್ಲಿ ಕಬ್ಬು ಖರೀದಿಸಿಕೊಂಡು ಹೋಗುತ್ತಿದ್ದಾರೆ. ಒಟ್ಟಿನಲ್ಲಿ ಈ ಕರಿಕಬ್ಬುಗ್ರಾಹಕರ ಬಾಯಿ ಸಿಹಿ ಮಾಡುವ ಜೊತೆಗೆ ಬೆಳೆದ ರೈತರ ಬಾಳನ್ನು ಸಹ ಈ ವರ್ಷ ಸಿಹಿ ಮಾಡಿದೆ.

ರೈತರ ಬದುಕಿನ ಆಶಾಕಿರಣ

ರೈತರ ಬದುಕಿನ ಆಶಾಕಿರಣ

ಪಟ್ಲು ಗ್ರಾಮದ ಕಬ್ಬು ಬೆಳೆಗಾರ ರಾಜು ಮಾತನಾಡಿ, "ಈ ಕರಿಕಬ್ಬು ನಮ್ಮ ಬದುಕಿನ ಆಶಾಕಿರಣವಾಗಿದೆ. ಗ್ರಾಮದಲ್ಲಿ ಹತ್ತಾರು ಎಕರೆಯಲ್ಲಿ ಕರಿಕಬ್ಬು ಬೆಳೆಯಲಾಗಿದೆ. ಕೆಲ ವರ್ತಕರು ಈ ಬಾರಿ ಉತ್ತಮ ದರಕೊಟ್ಟು ಈಗಾಗಲೇ ಖರೀದಿ ಮಾಡಿದ್ದಾರೆ. ಈ ಬಾರಿ ಫಸಲು ಹಾಗೂ ಬೆಲೆ ಎರಡು ಉತ್ತಮವಾಗಿದೆ. ಉತ್ತಮ ಬೆಲೆಗೆ ಕಷ್ಟಪಟ್ಟು ಬೆಳೆದ ಬೆಳೆ ಖರೀದಿಯಾಗಿರುವುದು ಸಂತೋಷ ತಂದಿದೆ" ಎಂದು ಹೇಳಿದ್ದಾರೆ.

ತಿಟ್ಟಮಾರನಹಳ್ಳಿ ಗ್ರಾಮದ ರಘು ರಾಜಣ್ಣ ಮಾತನಾಡಿ, "ಗೇಣು ಚಿಕ್ಕದಾಗಿ ಬರುವ ಈ ಕರಿಕಬ್ಬು ಪಟಾವಳಿ ಕಬ್ಬು ಎಂದು ಪ್ರಸಿದ್ಧವಾಗಿದೆ. ಈ ಬೆಳೆ ಬೆಳೆಯಲು ಅಧಿಕ ಖರ್ಚು ಹಾಗೂ ಶ್ರಮದ ಅವಶ್ಯಕತೆ ಇದೆ. ನಮ್ಮ ಪ್ರದೇಶದ ವಾತಾವರಣ ಹಾಗೂ ಮಣ್ಣು ಈ ಬೆಳೆ ಬೆಳೆಯಲು ಅನುಕೂಲವಾಗಿರುವ ಕಾರಣ ನಮ್ಮ ಅಕ್ಕಪಕ್ಕದ ಗ್ರಾಮಗಳ ರೈತರು ಪ್ರಮುಖ ಬೆಳೆಯಾಗಿ ಇದನ್ನು ಬೆಳೆಯುತ್ತಾರೆ" ಎಂದರು.

English summary
Sankranti 2022 special. Black sugarcane cultivation at Ramanagara district Chennapatna. Huge demand for black sugarcane in Sankranti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X