ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೆಸಾರ್ಟ್ ಮೋಜು-ಮಸ್ತಿ: 6 ಯುವತಿಯರು ಸೇರಿ 26 ಜನರ ಬಂಧನ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂನ್ 21: ಕೊರೊನಾ ವೈರಸ್ ನ ಲಾಕ್ ಡೌನ್ ನಿಯಮ ಉಲ್ಲಂಘಿಸಿ ರೆಸಾರ್ಟ್ ನಲ್ಲಿ ಮದ್ಯ ಸೇವಿಸಿ ಮೋಜು-ಮಸ್ತಿ ಮಾಡುತ್ತಿದ್ದ 6 ಯುವತಿಯರು ಸೇರಿದಂತೆ 26 ಜನರನ್ನು ರಾಮನಗರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ತಡರಾತ್ರಿ ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ನಡೆದಿದೆ.

Recommended Video

ಜಗತ್ತಿಗೆ ಕಾದಿದೆಯಾ ಆಪತ್ತು..?ನಿಜವಾಗುತ್ತಾ ಮಾಯನ್ ಕ್ಯಾಲೆಂಡರ್ ಭವಿಷ್ಯ?? | Mayan Calendar | Oneindia Kannada

ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದ ಬಳಿಯಿರುವ ಕ್ಯೂ ಮ್ಯಾಂಗೋ ಪಾರೆಸ್ಟ್ ರೆಸಾರ್ಟ್ ಮೇಲೆ ಶನಿವಾರ ರಾತ್ರಿ 9.30 ರ ಸಮಯದಲ್ಲಿ ದಾಳಿ ಮಾಡಿದ ಗ್ರಾಮಾಂತರ ಪೋಲೀಸರು, ಕಾನೂನು ಬಾಹಿರವಾಗಿ ಪಾರ್ಟಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ರೆಸಾರ್ಟ್ ಮಾಲೀಕ ಸೇರಿದಂತೆ 6 ಯುವತಿಯರು ಹಾಗೂ 19 ಪುರುಷರನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

ಜನ ವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಕೇಂದ್ರ; ರಾಮನಗರದಲ್ಲಿ ತಡರಾತ್ರಿ ನಿವಾಸಿಗಳ ವಿರೋಧಜನ ವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಕೇಂದ್ರ; ರಾಮನಗರದಲ್ಲಿ ತಡರಾತ್ರಿ ನಿವಾಸಿಗಳ ವಿರೋಧ

ಕೋವಿಡ್-19 ಆತಂಕದ ನಡುವೆ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ರೆಸಾರ್ಟ್ ನಲ್ಲಿ ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮತ್ತು ಮದ್ಯಪಾನ ಮಾಡಿಕೊಂಡು ಮೋಜು-ಮಸ್ತಿ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು, 30 ಬಿಯರ್ ಮತ್ತು ಅಪಾರ ಪ್ರಮಾಣದ ವಿವಿಧ ಬ್ರಾಂಡ್ ನ ಮದ್ಯದ ಬಾಟಲ್ ಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.

Resort Fun In Ramanagara: The Arrest Of 26 People, Including 6 Young Women

ರೆಸಾರ್ಟ್‌ನ ಪಾಲುದಾರರಾದ ಶಿವಲಿಂಗೇಗೌಡ ಮತ್ತು 19 ಜನ ಪುರುಷರು ಹಾಗೂ 06 ಯುವತಿಯರ ಮೇಲೆ ಮೊ.ನಂ.208/2020, ಕಲಂ 32, 34 ಕೆ.ಇ ಆಕ್ಸ್ ಮತ್ತು 188, 269 ಐಪಿಸಿ ಜೊತೆಗೆ ಕಲಂ 51 (ಬಿ) ಡಿ.ಎಂ.ಅಸ್ಟ್-2005 ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನಕಪುರ ಸೋಂಕಿತ ವೈದ್ಯ ದಂಪತಿಯಿಂದ ಚಿಕಿತ್ಸೆ ಪಡೆದಿದ್ದ 25 ಮಂದಿಗೆ ಸೋಂಕುಕನಕಪುರ ಸೋಂಕಿತ ವೈದ್ಯ ದಂಪತಿಯಿಂದ ಚಿಕಿತ್ಸೆ ಪಡೆದಿದ್ದ 25 ಮಂದಿಗೆ ಸೋಂಕು

ಬಂಧಿತರಲ್ಲಿ ಹೆಚ್ಚಿನವರು ಬೆಂಗಳೂರು ಮೂಲದವರೇ ಆಗಿದ್ದು, ಕೋವಿಡ್-೧೯ ನಿಯಮ ಉಲ್ಲಂಘಿಸಿ ರೆಸಾರ್ಟ್ ಗೆ ಬಂದು ವೀಕೆಂಡ್ ಮಸ್ತಿಯಲ್ಲಿ ತೊಡಗಿದ್ದರು.

English summary
The Ramanagara police arrested 26 people, including 6 young girls, for drinking alcohol and Fun at the resort.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X