ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ ಜಿಲ್ಲೆಗೆ ಮರು ನಾಮಕರಣ, ಹೆಸರು ಏನಾಗಲಿದೆ?

|
Google Oneindia Kannada News

ರಾಮನಗರ, ಜನವರಿ 4: ರಾಮನಗರ ಜಿಲ್ಲೆಗೆ ನವ ಬೆಂಗಳೂರು ಎಂದು ನಾಮಕರಣ ಮಾಡುವ ಚರ್ಚೆ ಇದೀಗ ಆರಂಭವಾಗಿದೆ.

ದೇಶ-ವಿದೇಶಗಳ ಬಂಡವಾಳವನ್ನು ಸೆಳೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಮನಗರ ಜಿಲ್ಲೆಯಲ್ಲಿ ಬಿಡದಿ ಹಾಗೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಿವೆ. ಆದರೆ ನಿರೀಕ್ಷಿತ ಅಭಿವೃದ್ಧಿಯನ್ನು ಈ ಜಿಲೆಲ ಕಂಡಿಲ್ಲ.

ಇದೀಗ ನವ ಬೆಂಗಳೂರು ಎಂದು ನಾಮಕರಣ ಮಾಡುವುದರಿಂದ ಜಿಲ್ಲೆಯ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ಎನ್ನುವ ಅಭಿಪ್ರಾಯ ಮೂಡಿದೆ. ಜಿಲ್ಲೆಯಲ್ಲಿ ದೇಶ, ವಿದೇಶಗಳ ಕಂಪನಿಗಳು ಬಂಡವಾಳ ಹೂಡಿಕೆ ಮಾಡಲಿವೆ.

Re Naming Of Ramnagar District

ಜಿಲ್ಲೆಯ ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಲಿದೆ. ಬೆಂಗಳೂರು ಮಾದರಿಯಲ್ಲಿಯೇ ಜಿಲ್ಲೆ ಐಟಿ ಹಬ್ ಆಗಲಿದೆ. ರೈತರ ಭೂಮಿಗೆ ಚಿನ್ನದ ಬೆಲೆ ದೊರೆಯಲಿದೆ. ಸಾವಿರಾರು ನಿರುದ್ಯೋಗಿಗಳಿಗೆ ಕೆಲಸ ದೊರೆಯಲಿದೆ ಎನ್ನುವ ಭರವಸೆ ಇದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಸಾಕಷ್ಟು ಗ್ರಾಮಗಳನ್ನು ರಾಮನಗರಕ್ಕೆ ಸೇರಿಸಿ ಎನ್ನುವ ಒತ್ತಾಯದ ಕೂಗು ಹಲವು ವರ್ಷಗಳಿಂದಾ ಇದೆ.
ಜಿಲ್ಲೆಯಾಗಿ 13 ವರ್ಷ ಕಳೆದರೂ ಅಭಿವೃದ್ಧಿ ಕಾಣದ ಹಿನ್ನೆಲೆಯಲ್ಲಿ ರಾಮನಗರವನ್ನು ನವ ಬೆಂಗಳೂರು ಎಂದು ಮರು ನಾಮಕರಣ ಮಾಡುವ ಪ್ರಸ್ತಾವನೆ ಇದೀಗ ರಾಜ್ಯ ಸರ್ಕಾರದ ಮುಂದಿದೆ.

ಖುದ್ದು ರಾಮನಗರ ಜಿಲ್ಲಾ ಉಸ್ತುವಾರಿಯಾಗಿರುವ ಉಪಮುಖ್ಯಮಂತ್ರಿ ಡಾ. ಸಿಎನ್ ಅಶ್ವತ್ಥನಾರಾಯಣ ಅವರೇ ಈ ಬಗ್ಗೆ ಆಸಕ್ತಿವಹಿಸಿ ಪ್ರಯತ್ನ ಆರಂಭಿಸಿದ್ದಾರೆ.

English summary
The debate over Renaming Ramnagar district as New Bengaluru has begun.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X