• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮನಗರ ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದಕ ಘಟಕ ಶೀಘ್ರ ಪ್ರಾರಂಭ

|
Google Oneindia Kannada News

ರಾಮನಗರ, ಆಗಸ್ಟ್ 05: ರಾಮನಗರದ ಜಿಲ್ಲಾಸ್ಪತ್ರೆ, ಚನ್ನಪಟ್ಟಣದ ತಾಲ್ಲೂಕು ಆಸ್ಪತ್ರೆ ಹಾಗೂ ಮಾಗಡಿ ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದಕ ಘಟಕಗಳನ್ನು ಸ್ಥಾಪಿಸುವ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದು ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ತಿಳಿಸಿದರು.

ರಾಮನಗರ ಜಿಲ್ಲೆಯ ಕೋವಿಡ್ ಪರಿಸ್ಥಿತಿಯನ್ನು ಅಧಿಕಾರಿಗಳೊಂದಿಗೆ ಅವಲೋಕಿಸಿದ ನಂತರ ಮಾತನಾಡಿದ ಅವರು, "ಈ 3 ತಾಲ್ಲೂಕು ಆಸ್ಪತ್ರೆಗಳ ಘಟಕಗಳಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಇದೇ 15ರ ಹೊತ್ತಿಗೆ ಬಳಕೆ ಮಾಡಿಕೊಳ್ಳಲಾಗುವುದು. ಆ ದಿನದೊಳಗೆ ಬಾಕಿ ಇರುವ ಎಲ್ಲ ಕೆಲಸಗಳನ್ನು ಮುಗಿಸಬೇಕು,'' ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ ಸಚಿವರು ಹೇಳಿದರು.

"ಪ್ರತಿ ದಿನವೂ ರಾಮನಗರ ಜಿಲ್ಲೆಯಲ್ಲಿ 1,800 ಆರ್‌-ಪಿಸಿಆರ್ ಮತ್ತು RAT ಪರೀಕ್ಷೆಗಳನ್ನು ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಆದರೆ, ಆ ಗುರಿಯನ್ನು ಮೀರಿ 2,400 ಪರೀಕ್ಷೆಗಳನ್ನು ಮಾಡುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಇದು ಶ್ಲಾಘನೀಯ ಕೆಲಸ," ಎಂದು ಬಣ್ಣಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಸಂಪುಟಕ್ಕೆ ಸೇರ್ಪಡೆಯಾದ ಮರುದಿನವೇ ರಾಮನಗರ ಜಿಲ್ಲಾ ಕೋವಿಡ್ ಹಾಗೂ ಪ್ರವಾಹ ನಿಯಂತ್ರಣ ಉಸ್ತುವಾರಿ ಹೊತ್ತಿರುವ ಸಚಿವ ಅಶ್ವಥ್ ನಾರಾಯಣ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

"ಕೋವಿಡ್ ಮೂರನೇ ಅಲೆಯನ್ನು ಪರಿಣಾಮಕಾರಿಯಾಗಿ ತಡೆಯುವುದು ಸೇರಿ ಇಡೀ ರಾಮನಗರ ಜಿಲ್ಲೆಯಲ್ಲಿ ಕೈಗೊಂಡಿರುವ ಲಸಿಕಾಕರಣ, ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿ ಇನ್ನಿತರೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಬಾಕಿ ಯಾವುದಾದರೂ ಕೆಲಸ ಇದ್ದರೆ ಅದನ್ನು ವೇಗವಾಗಿ ಮುಗಿಸಬೇಕು," ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

"ರಾಮನಗರ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ 0.22ರಷ್ಟಿದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಹಾಗಂತ ಎಚ್ಚರ ತಪ್ಪುವುದೂ ಬೇಡ. ಕೋವಿಡ್ ಪರೀಕ್ಷೆ, ಲಸಿಕೆ ಹಾಗೂ ಆರೋಗ್ಯ ಮೂಲಸೌಕರ್ಯಗಳ ಬಗ್ಗೆ ನಿತ್ಯವೂ ಗಮನವಿಟ್ಟು ಕೆಲಸ ಮಾಡಬೇಕು," ಎಂದು ಸೂಚಿಸಿದರು.

 Ramanagar: Oxygen Manufacturing Units Will Started Soon In Taluk Hospitals; Minister Ashwath Narayan

ಇದೇ ವೇಳೆ ರಾಮನಗರ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡುವುದನ್ನು ಚುರುಕುಗೊಳಿಸಲಾಗಿದೆ. ಈಗಾಗಲೇ 18 ವರ್ಷ ಮೇಲ್ಪಟ್ಟ ಶೇ.54ರಷ್ಟು ಜನಕ್ಕೆ ಕೊರೊನಾ ಲಸಿಕೆ ನೀಡಲಾಗಿದೆ. ಇದರಲ್ಲಿ ಸೆಕೆಂಡ್ ಡೋಸ್ ಪಡೆದವರು ಶೇ.34ರಷ್ಟು ಇದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ರಾಮನಗರ ಜಿಲ್ಲಾಧಿಕಾರಿ ರಾಕೇಶ್ ಸಿಂಗ್, ಜಿಲ್ಲಾ ಪಂಚಾಯತ್ ಸಿಇಒ ಇಕ್ರಂ ಸೇರಿ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.

ಸಚಿವ ಬಿ.ಸಿ. ಪಾಟೀಲ್‌ಗೆ ಅದ್ಧೂರಿ ಸ್ವಾಗತ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ತವರು ಕ್ಷೇತ್ರ ಹಿರೇಕೆರೂರಿಗೆ ಆಗಮಿಸಿದ ಸಚಿವ ಬಿ.ಸಿ. ಪಾಟೀಲರನ್ನು ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು.

ಹಿರೇಕೆರೂರು ಪಟ್ಟಣದ ಜಿ.ಬಿ. ಶಂಕರರಾವ್ ವೃತ್ತಕ್ಕೆ ಸಚಿವ ಬಿ.ಸಿ. ಪಾಟೀಲ್ ಬರುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮದಿಂದ ಸ್ವಾಗತಿಸಿದರು.

ನಂತರ ಬೈಕ್ ರ‍್ಯಾಲಿ ಮೂಲಕ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸಚಿವ ಪಾಟೀಲರನ್ನು ಅವರ ನಿವಾಸಕ್ಕೆ ಕರೆತಂದ ಬೆಂಬಲಿಗರು, ಮನೆಗೆ ಬರುತ್ತಿದ್ದಂತೆ ಹಿರಿಯ ಪುತ್ರಿ ಸೌಮ್ಯ ಮನೆಯಲ್ಲಿ ಸಚಿವ ಪಾಟೀಲ್‌ರನ್ನು ಆರತಿ ಬೆಳಗಿ ಸ್ವಾಗತಿಸಿದರು.

ಹಿರಿಯ ಪುತ್ರಿ ಆರತಿ ಬೆಳಗಿದ ನಂತರ ಸಚಿವರಿಗೆ ಹಾರ ಹಾಕಿ ಸ್ವಾಗತಿಸಿದ ಪತ್ನಿ ವನಜಾ ಪಾಟೀಲ, ಪತ್ನಿ ಹಾರ ಹಾಕಿದ ನಂತರ ಮರಳಿ ಪತ್ನಿಗೆ ಹಾರ ಹಾಕಿ ಖುಷಿಪಟ್ಟರು.

   ಬೆಳ್ಳಿ ಗೆಲ್ಲೋದಕ್ಕೆ ನಾನು ಟೋಕಿಯೋಗೆ ಬರಲಿಲ್ಲ ಎಂದು ನಿರಾಸೆಯಾದ ಪೈಲ್ವಾನ್ | oneindia kannada

   ಸಚಿವ ಬಿ.ಸಿ. ಪಾಟೀಲರು ಕಳೆದ ಉಪ ಚುನಾವಣೆಯಲ್ಲಿ ಅವರ ಗೆಲುವಿಗೆ ಸಹಕಾರ ನೀಡಿದ್ದ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ವೆರವಣಿಗೆ ಉದ್ದಕ್ಕೂ ತೆರದ ವಾಹನದಲ್ಲಿ ತೆರಳುವ ಮೂಲಕ ಬಿ.ಸಿ. ಪಾಟೀಲ ಹಾಗೂ ನಾನು ಜೋಡೆತ್ತುಗಳೆಂದು ಮತ್ತೊಮ್ಮೆ ಸಾಬೀತು ಪಡಿಸಿದರು.

   English summary
   Oxygen-producing plants will be started soon in Ramanagara, Channapattana and Magadi taluk hospitals, Minister CN Ashwath Narayana said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X