ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ್ಯಾಯಾಂಗ ಬಂಧನಕ್ಕೆ ನಿತ್ಯಾನಂದನ ವಿರುದ್ಧ ಹೋರಾಟ ಮಾಡಿದ್ದ ರಮೇಶ್ ಗೌಡ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮಾರ್ಚ್ 4: ಬಿಡದಿ ನಿತ್ಯಾನಂದ ಸ್ವಾಮಿಯ ರಾಸಲೀಲೆ ಪ್ರಕರಣದ ವಿರುದ್ಧ ಹೋರಾಟ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಹೋರಾಟಗಾರ ರಮೇಶ್ ಗೌಡಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ರಾಮನಗರದ ಜೆ ಎಂ ಎಫ್ ಸಿ ನ್ಯಾಯಾಲಯ ಅದೇಶ ಹೊರಡಿಸಿದೆ.

ಎಂಟು ವರ್ಷದ ಹಿಂದಿನ ಎರಡು ಪ್ರಕರಣಗಳ ವಿಚಾರಣೆಗೆ ಗೈರಾಗಿದ್ದ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಇಂದು ನ್ಯಾಯಾಲಯದಲ್ಲಿ ಹಾಜರಿದ್ದ ಸಮಯದಲ್ಲಿ ರಾಮನಗರ ಜೆ ಎಂ ಎಪ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಮಿಲನ 17-03-2020 ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಮಾಡಿದ್ದಾರೆ.

ನಿತ್ಯಾನಂದನ ಆಸ್ತಿ ಪರಿಶೀಲನೆ ಮಾಡಲು ಸಿಐಡಿಗೆ ಸೂಚಿಸಿದ ನ್ಯಾಯಾಲಯನಿತ್ಯಾನಂದನ ಆಸ್ತಿ ಪರಿಶೀಲನೆ ಮಾಡಲು ಸಿಐಡಿಗೆ ಸೂಚಿಸಿದ ನ್ಯಾಯಾಲಯ

2012 ರಲ್ಲಿ ನಿತ್ಯಾನಂದನ ರಾಸಲೀಲೆ ಪ್ರಕರಣ ಖಂಡಿಸಿ ಕನ್ನಡ ಪರ ಹೋರಾಟಗಾರ ರಮೇಶ್ ಗೌಡ ನೇತೃತ್ವದಲ್ಲಿ ಬಿಡದಿ ಆಶ್ರಮಕ್ಕೆ ಮುತ್ತಿಗೆ ಹಾಕಿದ್ದ ಪ್ರಕರಣ ಹಾಗೂ ನಿತ್ಯಾನಂದನ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದ ವಿರುದ್ದ ಬಿಡದಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು

Ramesh Gowda Sent to 14 days judicial Custody

ಆಶ್ರಮಕ್ಕೆ ಮುತ್ತಿಗೆ ಹಾಕಿದ್ದ ಹಾಗೂ ನಿತ್ಯಾನಂದ ವಿರುದ್ಧ ಪ್ರತಿಭಟನೆ ನಡೆಸಿದ್ದ ಎರಡು ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಎರಡೂ ಬಾರಿಯೂ ವಿಚಾರಣೆಗೆ ರಮೇಶ್ ಗೌಡ ಗೈರಾದ ಕಾರಣ ಲ್ಲಿ ಕೋರ್ಟ್ ಬಂಧನ ವಿಧಿಸಿದೆ. ನ್ಯಾಯಾಲಯದ ಆದೇಶ ಮೇರೆಗೆ ಪೋಲೀಸರು ರಾಮನಗರ ಜಿಲ್ಲಾ ಕಾರಾಗೃಹ ವಶಕ್ಕೆ ರಮೇಶ್ ಗೌಡರನ್ನು ಒಪ್ಪಿಸಿದ್ದಾರೆ.

English summary
Ramesh Gowda Sent to 14 days judicial custody. Ramesh Gowda who had protest against Nithyananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X