ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ ಎಪಿಎಂಸಿ ಅಧ್ಯಕ್ಷ ಸ್ಥಾನ ಲಾಟರಿ ಮೂಲಕ ಕಾಂಗ್ರೆಸ್ ತೆಕ್ಕೆಗೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂನ್ 30: ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನ ಹಿಡಿದ ಬೆನ್ನಲ್ಲೇ ಬಹುಮತ ಇದ್ದರೂ ರಾಮನಗರ ಎಪಿಎಂಸಿ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸೋಲೊಪ್ಪಿದೆ. ಕಾಂಗ್ರೆಸ್ ಬೆಂಬಲಿತರಾದ ರಮೇಶ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಾಲಾಗಿದೆ.

ಜೆಡಿಎಸ್ ಬೆಂಬಲಿತರಾಗಿ ಹಾಲಿ ಅಧ್ಯಕ್ಷ ದೊರೆಸ್ವಾಮಿ ಅವರು ಮತ್ತೊಂದು ಅವಧಿಗೆ ಅಧ್ಯಕ್ಷರಾಗಲು ನಾಮಪತ್ರ ಸಲ್ಲಿಸಿದ್ದರು. ಇತ್ತ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಾಗಿ ವಾಜರಹಳ್ಳಿ ರಮೇಶ್ ಅವರು ನಾಮಪತ್ರ ಸಲ್ಲಿಸಿದ್ದರು.

ಹೋಂ ಕ್ವಾರಂಟೈನ್ ಉಲ್ಲಂಘನೆ; ರಾಮನಗರದಲ್ಲಿ 8 ಮಂದಿ ಮೇಲೆ FIRಹೋಂ ಕ್ವಾರಂಟೈನ್ ಉಲ್ಲಂಘನೆ; ರಾಮನಗರದಲ್ಲಿ 8 ಮಂದಿ ಮೇಲೆ FIR

11 ಸದಸ್ಯ ಬಲದ ರಾಮನಗರ ಎಪಿಎಂಸಿ ಸಮಿತಿಯಲ್ಲಿ 6 ಸದಸ್ಯರು ಜೆಡಿಎಸ್ ಬೆಂಬಲಿತರಾಗಿದ್ದರು. ನಾಲ್ವರು ಕಾಂಗ್ರೆಸ್ ಬೆಂಬಲಿತರು. ಮತ್ತು ಓರ್ವ ಸ್ವತಂತ್ರ ಸದಸ್ಯರಿದ್ದರು.

Ramesh Elected As A Ramanagara APMC President

ಹಿಂದಿನ ಎರಡು ಅವಧಿಗೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಅವಿರೋಧವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಮೂರನೇ ಅವಧಿಗೆ ಇಂದು ಚುನಾವಣೆ ನಡೆಯಿತು.

ರಾಮನಗರ; ತಿಂಗಳ ಅಂತ್ಯದವರೆಗೆ ಸ್ವಯಂ ಲಾಕ್ ಡೌನ್ ಗೆ ವರ್ತಕರ ನಿರ್ಧಾರರಾಮನಗರ; ತಿಂಗಳ ಅಂತ್ಯದವರೆಗೆ ಸ್ವಯಂ ಲಾಕ್ ಡೌನ್ ಗೆ ವರ್ತಕರ ನಿರ್ಧಾರ

11 ಮಂದಿ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇಬ್ಬರು ತಲಾ 5 ಮತಗಳನ್ನು ಪಡೆದರು. ಒಂದು ಮತ ತಿರಸ್ಕೃತವಾಗಿದೆ. ನಂತರ ಲಾಟರಿ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರಮೇಶ್ ಗೆಲುವಿನ ನಗೆ ಬೀರಿದರು.

English summary
JDS party defeated in Ramanagar APMC president election, Ramesh who is a Congress-backed, has Won In the election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X