ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಬರ್ಬನ್ ರೈಲ್ವೆ ಯೋಜನೆ ಮೋದಿಯಿಂದ ಮೂರು ವರ್ಷ ವಿಳಂಬ: ಎಚ್‌.ಡಿ. ಕುಮಾರಸ್ವಾಮಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂ21: ಸಬ್ ಅರ್ಬನ್ ರೈಲ್ವೆ ಯೋಜನೆ ನನ್ನ ಕಾಲದಲ್ಲೇ ಅನುಷ್ಠಾನಕ್ಕೆ ಬರಬೇಕಿತ್ತು ಆದರೆ, ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಮೂರು ವರ್ಷ ತಡವಾಗಿ ಆರಂಭವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಅವರು ಇಂದು ಕನಕಪುರ ತಾಲ್ಲೂಕಿನ ಮರಳವಾಡಿಯಲ್ಲಿ ಹಮ್ಮಿಕೊಂಡಿದ್ದ ರೈತರಿಗೆ ಸಾಗುವಳಿ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಹತ್ತಿರದಲ್ಲಿದೆ ಹಾಗಾಗಿ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಆರ್ಎಸ್ಎಸ್ ಯುವಕರನ್ನು ಸೇನೆಗೆ ತುಂಬುವ ಹುನ್ನಾರವೇ 'ಅಗ್ನಿಪಥ್' : ಎಚ್.ಡಿ.ಕುಮಾರಸ್ವಾಮಿಆರ್ಎಸ್ಎಸ್ ಯುವಕರನ್ನು ಸೇನೆಗೆ ತುಂಬುವ ಹುನ್ನಾರವೇ 'ಅಗ್ನಿಪಥ್' : ಎಚ್.ಡಿ.ಕುಮಾರಸ್ವಾಮಿ

ನಿನ್ನೆ ಪ್ರಧಾನಿಗಳು ಸಬ್ ಅರ್ಬನ್ ರೈಲ್ವೆ ಯೋಜನೆ ಬಗ್ಗೆ ಮಾತನಾಡಿದ್ದಾರೆ. ಇದು ನಾನು 2018ರಲ್ಲಿ ಸಿಎಂ ಆಗಿದ್ದಾಗಲೇ ಸಬ್ ಅರ್ಬನ್ ಯೋಜನೆ ರೂಪಿಸಿದ್ದೆ. ದೇವೇಗೌಡರ ಜೊತೆಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ರನ್ನು ಭೇಟಿ ಮಾಡಿ ಯೋಜನೆಯ ಬಗ್ಗೆ ಸುಧೀರ್ಘ ಚರ್ಚೆ ಮಾಡಿದ್ದೆ. ಸಬ್ ಅರ್ಬನ್ ಯೋಜನೆಗೆ ರಾಜ್ಯ ಸರ್ಕಾರದಿಂದ ನಾವು 19 ಷರತ್ತುಗಳನ್ನು ವಿಧಿಸಿದ್ದೇವು, ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರೇ ಕೃಷ್ಣ ಕಚೇರಿಗೆ ಬಂದಿದ್ದರು. ಯೋಜನೆಗೆ ಚಾಲನೆ ನೀಡಲು 2019 ರಲ್ಲೇ ಪ್ರಧಾನಿಗಳು ಬರಬೇಕಿತ್ತು ಬರಲಿಲ್ಲ, ಬಂದಿದ್ದರೆ ಸುಮಾರು 23 ಸಾವಿರ ಕೋಟಿ ವೆಚ್ಚದ ಸಬ್ ಅರ್ಬನ್ ರೈಲ್ವೆ ಯೋಜನೆ ಇಷ್ಟೊತ್ತಿಗೆ ಕಂಪ್ಲೀಟ್ ಆಗಬೇಕಿತ್ತು. ಅಂದು ನಾನು ತೆಗೆದುಕೊಂಡ ನಿರ್ಧಾರಗಳು ಸರ್ಕಾರದ ಕಡತದಲ್ಲಿದೆ ಎಂದು ಮಾಜಿ ಸಿಎಂ ಹೆಚ್ಡಿಕೆ ವಿವರಿಸಿದರು.

Ramanagara: Suburban rail project 3 years delayed because of Modi- HD Kumaraswamy

ರಾಜ್ಯಕ್ಕೆ ಭೇಟಿ ನೀಡಿರುವುದಕ್ಕೆ ಅಭಿನಂದನೆ : ಕುಮಾರಸ್ವಾಮಿ ವ್ಯಂಗ್ಯ

2019 ರಲ್ಲೇ ಗುದ್ದಲಿ ಪೂಜೆ ಮಾಡಬೇಕಿದ್ದ ಸಬ್ ಅರ್ಬನ್ ರೈಲ್ವೆ ಯೋಜನೆಗೆ 2022 ಕ್ಕೆ ಬಂದಿದ್ದಾರೆ ಎಂದು ಪ್ರಧಾನಿ ವಿರುದ್ಧ ಆರೋಪಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಬೆಂಗಳೂರು - ಮೈಸೂರು ಹೆದ್ದಾರಿ ಕಾಮಗಾರಿಗೆ ತ್ವರಿತವಾಗಿ ಅನುಷ್ಟಾನಕ್ಕೆ ತರಲು 8 ಸಭೆಗಳನ್ನು ಮಾಡಿದ್ದೇನೆ. ಇದೆಲ್ಲವೂ ಸಹ ನಾನು ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದಾಗ ಮಾಡಿದ್ದು ಎಂದರು. ಅವರು ಸನ್ಯಾಸಿಯಲ್ಲ, ಅಧಿಕಾರಕ್ಕಾಗಿ ಪಕ್ಷ ಇದೇ, ಹಾಗಾಗಿ ಬಂದಿದ್ದಾರೆ , ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಕರ್ನಾಟಕ ನೆನಪಿಗೆ ಬಂದಿದೆ,‌ ಸದ್ಯ ಈಗಲಾದರು ರಾಜ್ಯಕ್ಕೆ ಭೇಟಿ ನೀಡಿರುವುದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯವರು ವ್ಯಂಗ್ಯವಾಡಿದರು.

ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ಗಂಟುರೋಗ ಬಾಧೆ; ಆತಂಕದಲ್ಲಿ ರೇಷ್ಮೆ ಉದ್ಯಮರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ಗಂಟುರೋಗ ಬಾಧೆ; ಆತಂಕದಲ್ಲಿ ರೇಷ್ಮೆ ಉದ್ಯಮ

58 ರೈತರಿಗೆ ಸಾಗುವಳಿ ಚೀಟಿ ವಿತರಣೆ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಾಗುವಳಿ ಚೀಟಿ ವಿತರಣೆಯನ್ನು ಇಂದು ಕನಕಪುರ ತಾಲ್ಲೂಕಿನ ಮರಳವಾಡಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಯವರ ನೇತೃತ್ವದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿತ್ತು , ಕಾರ್ಯಕ್ರಮದಲ್ಲಿ ಸುಮಾರು 58 ರೈತರಿಗೆ ಸಾಗುವಳಿ ಚೀಟಿ ವಿತರಿಸಲಾಯಿತು. ಕಳೆದ 3-4, ವರ್ಷಗಳಿಂದ ಕೋರ್ಟ್ ತಕರಾರಿನಿಂದ ನೆನೆಗುದಿಗೆ ಬಿದ್ದಿತ್ತು. ಹಾಗಾಗಿ ಈ ಭಾಗದ ರೈತರಲ್ಲಿ ಆತಂಕ ಮನೆ ಮಾಡಿತ್ತು. ಇಂದು ಸುಮಾರ 58 ರೈತರಿಗೆ ಸಾಗುವಳಿ ಚೀಟಿ ವಿತರಿಸುವ ಮೂಲಕ ಅವರ ಆತಂಕ ಸ್ವಲ್ಪ ಮಟ್ಟಿಗೆ ದೂರ ಮಾಡಿದ್ದೇವೆ ಎಂದರು.

Ramanagara: Suburban rail project 3 years delayed because of Modi- HD Kumaraswamy

ಒತ್ತುವರಿ ಯಾಗಿರುವ ಅರಣ್ಯ ಭೂಮಿ ವಿಚಾರವಾಗಿ ಅರಣ್ಯ ಇಲಾಖೆಯೊಂದಿಗೆ ಚರ್ಚೆ ನಡೆಸಿದ್ದೇನೆ. ಹಾಗೂ ಕೈಗಾರಿಕೆಗಳ ಸ್ಥಾಪನೆಗಾಗಿ ಕೆಐಡಿಬಿ ಕೆಲ ಜಮೀನುಗಳನ್ನು ಗುರುತಿಸಿದೆ. ಹಾಗಾಗಿ ಕೆಐಡಿಬಿ ಯೊಂದಿಗೂ ಮಾತುಕತೆ ಮಾಡುತ್ತಿದ್ದೇವೆ ಎರಡು ಇಲಾಖೆಯಲ್ಲಿರುವ ಜಮೀನುಗಳನ್ನು ಬಿಡಿಸಿಕೊಂಡು ನಂತರ ಇನ್ನೂ 110 ಮಂದಿ ರೈತರಿಗೆ ಸಾಗುವಳಿ ಚೀಟಿ ವಿತರಿಸುತ್ತೇವೆ ಎಂದು ಹೆಚ್ಡಿಕೆ ತಿಳಿಸಿದರು.

Recommended Video

ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ವಿರಾಟ್ ಕೊಹ್ಲಿ ಆಕ್ಟಿಂಗ್!! ಇದು ಸಾಧ್ಯಾನಾ?? | *Cricket | OneIndia Kannada

English summary
Modi visits state: Suburban railway project delayed three years because of Prime Minister Narendra Modi: Ex CM HD Kumaraswamy blamed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X