ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ: ಬ್ಯಾಂಕ್ ಕನ್ನಡ ವಿರೋಧಿ ನೀತಿ ಖಂಡಿಸಿ ಗ್ರಾಮಸ್ಥರಿಂದ ಪ್ರತಿಭಟನೆ

By ನಮ್ಮ ಪ್ರತಿನಿಧಿ
|
Google Oneindia Kannada News

ರಾಮನಗರ, ಅಕ್ಟೋಬರ್ 27: ಸಮರ್ಪಕ ಸೇವೆ ನೀಡದ ಮತ್ತು ಕನ್ನಡ ವಿರೋಧಿಯಂತೆ ವರ್ತಿಸುವ ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ಗ್ರಾಹಕರು ಪ್ರತಿಭಟನೆ ನಡೆಸಿದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಕಚೇರಿ ಎದರು ನೂರಾರು ಖಾತೆದಾರರು ಹಾಗೂ ಗ್ರಾಮಸ್ಥರುವ ಪ್ರತಿಭಟನೆ ನಡೆಸಿದರು. ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Ramanagara: Protest against Bank condemning anti-Kannada policy

ಈ ಬ್ಯಾಂಕ್ ಅವ್ಯವಸ್ಥೆಯಿಂದ ಕೂಡಿದೆ ಬ್ಯಾಂಕ್‌ನಲ್ಲಿ ಸುಮಾರು 70 ಸಾವಿರ ಖಾತೆದಾರರು ಇದ್ದು ಅಗತ್ಯ ಸಿಬ್ಬಂದಿಗಳ ಕೊರತೆ ಇದೆ. 15 ಸಿಬ್ಬಂದಿಗಳ ಪೈಕಿ ಕೇವಲ 4-5 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಲ್ಲದೇ ಬ್ಯಾಂಕ್‌ನ ಮ್ಯಾನೇಜರ್‌ಗೆ ಕನ್ನಡ ಭಾಷೆ ಬರುತ್ತಿಲ್ಲ. ಇದ್ರಿಂದ ಗ್ರಾಹಕರಿಗೆ ವ್ಯವಹರಿಸಲು ಕಷ್ಟವಾಗುತ್ತಿದೆ. ಈ ಕೂಡಲೇ ಕನ್ನಡ ಭಾಷೆ ಗೊತ್ತಿರುವ ಮ್ಯಾನೇಜರ್ ನೇಮಿಸಬೇಕೆಂದು ಆಗ್ರಹಿಸಿದರು. ಬ್ಯಾಂಕ್ ಬಳಿಯಿರುವ ಎಟಿಎಂ ಇದ್ದು ಇಲ್ಲದಂತಾಗಿದ್ದು ಎಟಿಎಂನಲ್ಲಿ ಹಣವೆ ಇರುವುದಿಲ್ಲ ಎಂದು ಗ್ರಾಹಕರು ಕಿಡಿಕಾರಿದರು.

ಈ ವೇಳೆ ಸ್ಥಳಕ್ಕೆ ಬಂದ ರೀಜನಲ್ ಮ್ಯಾನೇಜರ್ ರಾಮಕೃಷ್ಣ ಗ್ರಾಹಕರ ಸಮಸ್ಯೆ ಆಲಿಸಿ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಆದಾಷ್ಟು ಬೇಗ ಬಗೆಹರಿಸುವ ಭರವಸೆ ನೀಡಿದರು.

English summary
Villagers protested against bank staff for their anti-Kannada policy at Kodamballi village in Channapatna taluk of Ramanagara district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X