• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮನಗರ: ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್ ಕಿಟ್ ವಿತರಿಸಿದ ಡಿಸಿಎಂ

By ರಾಮನಗರ ಪ್ರತಿನಿಧಿ
|

ರಾಮನಗರ, ಮೇ 18: ರಾಮನಗರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಕೊರೊನಾ ವಿರುದ್ಧ ರಕ್ಷಣಾ ಸಾಮಾಗ್ರಿಗಳನ್ನು ಸಂಕೇತಿಕವಾಗಿ ಉಪ ಮುಖ್ಯಮಂತ್ರಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಸಿ.ಎನ್ ಅಶ್ವಥ್ ನಾರಾಯಣ ಅವರು ವಿತರಿಸಿದರು.

ಡಿಸಿಎಂ ಇಂದು ಹೊಸ ಜಿಲ್ಲಾಸ್ಪತ್ರೆಯ ಕಾಮಗಾರಿಯ ಪರಿಶೀಲನೆ ವೇಳೆ ರಕ್ಷಣಾ ಸಾಮಗ್ರಿಗಳನ್ನು ವಿತರಿಸಿದರು. ರಾಮನಗರ ಜಿಲ್ಲೆಯಲ್ಲಿ 1543 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 1301 ಮುಖ್ಯ ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ ಒಬ್ಬರು ಕಾರ್ಯಕರ್ತೆ ಮತ್ತು ಒಬ್ಬ ಸಹಾಯಕಿ ಕಾರ್ಯ ನಿರ್ವಹಿಸುತ್ತಿದ್ದಾರೆ. 242 ಮಿನಿ ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಇವರುಗಳಿಗೆ ಸ್ಯಾನಿಟೈಸರ್, ಎನ್ 95 ಮಾಸ್ಕ್, ಫೇಸ್ ಶೀಲ್ಡ್, ಮತ್ತು ಹ್ಯಾಂಡ್ ಗ್ಲೋವ್ಸ್ ಗಳನ್ನು ಸಾಂಕೇತಿಕವಾಗಿ ನೀಡಿದರು.

ಪ್ರತಿ ಅಂಗನವಾಡಿ ಕೇಂದ್ರಕ್ಕೆ 500 ಎಂ.ಎಲ್ ನಂತೆ ಒಟ್ಟು 7715 ಸ್ಯಾನಿಟೈಸರ್ ಬಾಟಲ್, ಪ್ರತಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ 2ರಂತೆ ಒಟ್ಟು 5688 ಎನ್ 95 ಮಾಸ್ಕ್, ಪ್ರತಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ತಲಾ 20ರಂತೆ ಒಟ್ಟು 42,660 ಸರ್ಜಿಕಲ್ ಮಾಸ್ಕ್, ಪ್ರತಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ತಲಾ 1ರಂತೆ ಒಟ್ಟು 2844 ಫೇಸ್ ಶೀಲ್ಡ್ ಹಾಗೂ ಪ್ರತಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ 1 ಜೊತೆಯಂತೆ ಒಟ್ಟು 2844 ಹ್ಯಾಂಡ್ ಗ್ಲೋವ್ಸ್ ಗಳನ್ನು ರಾಮನಗರ ಜಿಲ್ಲೆಯಲ್ಲಿ ವಿತರಿಸಲಾಯಿತು.

   Israeli ಸೇನೆಯ ಆರ್ಭಟಕ್ಕೆ ಉಗ್ರರ ಲೀಡರ್ ಮಟಾಶ್ | Oneindia Kannada

   ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಮನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

   English summary
   Deputy Chief Minister Dr.CN Ashwath Narayana has symbolically distributed defense equipment against Covid-19 to the Anganwadi workers in Ramanagara district.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X