ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ ಉಪ ಚುನಾವಣೆ : ಜೆಡಿಎಸ್ ಅಭ್ಯರ್ಥಿ ಘೋಷಣೆ

|
Google Oneindia Kannada News

Recommended Video

ರಾಮನಗರ ಲೋಕಸಭಾ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಘೋಷಣೆ | Oneindia Kannada

ರಾಮನಗರ, ಅಕ್ಟೋಬರ್ 09 : ರಾಮನಗರ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಅಂತಿಮವಾಗಿದೆ. ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದ್ದು, ನ.6ರಂದು ಫಲಿತಾಂಶ ಪ್ರಕಟವಾಗಲಿದೆ.

ರಾಮನಗರ ತಾಲೂಕು ಜೆಡಿಎಸ್ ಘಟಕದ ಮುಖಂಡರು ಮಂಗಳವಾರ ಅನಿತಾ ಕುಮಾರಸ್ವಾಮಿ ಅವರು ಅಭ್ಯರ್ಥಿ. ಅಕ್ಟೋಬರ್ 11ರಂದು ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ರಾಮನಗರ ಉಪಚುನಾವಣೆ : ನಾನೇ ಅಭ್ಯರ್ಥಿ ಎಂದ ಅನಿತಾ ಕುಮಾರಸ್ವಾಮಿರಾಮನಗರ ಉಪಚುನಾವಣೆ : ನಾನೇ ಅಭ್ಯರ್ಥಿ ಎಂದ ಅನಿತಾ ಕುಮಾರಸ್ವಾಮಿ

ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಇಂದು ಸಭೆ ಕರೆದಿದ್ದು, ಸಭೆಯಲ್ಲಿ ಈ ಬಗ್ಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕ್ಷೇತ್ರದ ನಾಯಕರ ಜೊತೆ ಮಧ್ಯಾಹ್ನ ಸಭೆ ನಡೆಸಲಿದ್ದಾರೆ.

ರಾಮನಗರದಲ್ಲಿ ಸಿಎಂ ವಿರುದ್ಧವೇ ಗರಂ ಆದ ಜೆಡಿಎಸ್ ಕಾರ್ಯಕರ್ತರುರಾಮನಗರದಲ್ಲಿ ಸಿಎಂ ವಿರುದ್ಧವೇ ಗರಂ ಆದ ಜೆಡಿಎಸ್ ಕಾರ್ಯಕರ್ತರು

2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ರಾಮನಗರದಿಂದ ಕಣಕ್ಕಿಳಿದು ಜಯಗಳಿಸಿದ್ದರು. ರಾಮನಗರ, ಚನ್ನಪಟ್ಟಣ ಎರಡೂ ಕ್ಷೇತ್ರದಲ್ಲಿ ಗೆದ್ದಿದ್ದ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಆದ್ದರಿಂದ, ಉಪ ಚುನಾವಣೆ ಎದುರಾಗಿದೆ....

ಸಿಎಂ ಸ್ಥಾನ ಭದ್ರಪಡಿಸಿಕೊಳ್ಳಲು ಕುಮಾರಸ್ವಾಮಿ ನಿರಂತರ ತಂತ್ರ!ಸಿಎಂ ಸ್ಥಾನ ಭದ್ರಪಡಿಸಿಕೊಳ್ಳಲು ಕುಮಾರಸ್ವಾಮಿ ನಿರಂತರ ತಂತ್ರ!

ಅಸಮಾಧಾನ ಸ್ಫೋಟ

ಅಸಮಾಧಾನ ಸ್ಫೋಟ

ರಾಮನಗರ ತಾಲೂಕು ಜೆಡಿಎಸ್ ಘಟಕದ ಮುಖಂಡರು ಅನಿತಾ ಕುಮಾರಸ್ವಾಮಿ ಅವರು ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಆದರೆ, ಪಕ್ಷದಲ್ಲಿಯೇ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಯಾರನ್ನು ಕೇಳಿ ಅಭ್ಯರ್ಥಿ ಘೋಷಣೆ ಮಾಡಿದ್ದೀರಿ? ಎಂದು ಜೆಡಿಎಸ್ ಕಾರ್ಯಕರ್ತ ಅಪ್ಪಾಜಿ ಗೌಡ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ಇಬ್ಬರ ಹೆಸರು ಇತ್ತು

ಇಬ್ಬರ ಹೆಸರು ಇತ್ತು

ರಾಮನಗರ ಕ್ಷೇತ್ರದಿಂದ ಪಕ್ಷದ ಹಿರಿಯ ನಾಯಕ ಪಿ.ಜಿ.ಆರ್.ಸಿಂಧ್ಯಾ, ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಇಂದು ತಾಲೂಕು ಘಟಕದ ನಾಯಕರು ಅನಿತಾ ಕುಮಾರಸ್ವಾಮಿ ಹೆಸರನ್ನು ಘೋಷಣೆ ಮಾಡಿದ್ದಾರೆ. ಇದಕ್ಕೆ ಪಕ್ಷದ ವರಿಷ್ಠರ ಒಪ್ಪಿಗೆ ಇದೆಯೇ? ಕಾದು ನೋಡಬೇಕಿದೆ.

ರಾಮನಗರ ಉಪ ಚುನಾವಣೆ : ಜೆಡಿಎಸ್ ಪಟ್ಟಿಗೆ 2 ಹೆಸರು ಸೇರ್ಪಡೆ!ರಾಮನಗರ ಉಪ ಚುನಾವಣೆ : ಜೆಡಿಎಸ್ ಪಟ್ಟಿಗೆ 2 ಹೆಸರು ಸೇರ್ಪಡೆ!

ಕುಮಾರಸ್ವಾಮಿ ಸಭೆ

ಕುಮಾರಸ್ವಾಮಿ ಸಭೆ

ರಾಮನಗರ ತಾಲೂಕು ಜೆಡಿಎಸ್ ಘಟಕದ ಮುಖಂಡರು ಅನಿತಾ ಕುಮಾರಸ್ವಾಮಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಆದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇದಕ್ಕೆ ಒಪ್ಪಿಗೆ ನೀಡಿಲ್ಲ. ಮಧ್ಯಾಹ್ನ 2 ಗಂಟೆಗೆ ರಾಮನಗರ ತಾಲೂಕು ಘಟಕದ ಮುಖಂಡರ ಜೊತೆ ಕುಮಾರಸ್ವಾಮಿ ಅವರು ಸಭೆ ನಡೆಸಲಿದ್ದು, ಬಳಿಕ ಅಭ್ಯರ್ಥಿ ಘೋಷಣೆಯಾಗುವ ನಿರೀಕ್ಷೆ ಇದೆ.

ಕುಮಾರಸ್ವಾಮಿ ಗೆದ್ದಿದ್ದರು

ಕುಮಾರಸ್ವಾಮಿ ಗೆದ್ದಿದ್ದರು

ರಾಮನಗರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ತವರು ಕ್ಷೇತ್ರ. 2008, 2013 ಮತ್ತು 2018ರ ಚುನಾವಣೆಯಲ್ಲಿ ಸತತವಾಗಿ ಕುಮಾರಸ್ವಾಮಿ ಅವರು ಗೆದ್ದಿದ್ದಾರೆ.

2018ರ ಚುನಾವಣೆಯಲ್ಲಿ 92,626 ಮತಗಳನ್ನು ಪಡೆದು ಕುಮಾರಸ್ವಾಮಿ ಗೆಲುವು ಸಾಧಿಸಿದ್ದರು. ಆದರೆ, ಚನ್ನಪಟ್ಟಣದಲ್ಲೂ ಗೆದ್ದಿದ್ದ ಅವರು ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಆದ್ದರಿಂದ, ಈಗ ಉಪ ಚುನಾವಣೆ ಎದುರಾಗಿದೆ.

ಬಿಜೆಪಿ ಅಭ್ಯರ್ಥಿ ಯಾರು?

ಬಿಜೆಪಿ ಅಭ್ಯರ್ಥಿ ಯಾರು?

ರಾಮನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಆದ್ದರಿಂದ, ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಯುವುದಿಲ್ಲ. ಆದರೆ, ಪ್ರತಿಪಕ್ಷ ಬಿಜೆಪಿ ತನ್ನ ಅಭ್ಯರ್ಥಿ ಕಣಕ್ಕಿಳಿಸಲಿದೆ. 2018ರ ಚುನಾವಣೆಯಲ್ಲಿ ಲೀಲಾವತಿ ಅವರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿದ್ದರು, ಕೇವಲ 4871 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ಕುಸಿದಿದ್ದರು.

English summary
Ramanagara taluk JD(S) leaders announced Anitha Kumaraswamy name as party candidate for Ramanagara assembly constituency by election. Election will be held on November 3, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X