ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಡಿಕೆಶಿ ಅವಾಜ್ ಹಾಕಿದ್ದ ಅಧಿಕಾರಿಗೆ ಕೋವಿಡ್ ಸೋಂಕು!

|
Google Oneindia Kannada News

ರಾಮನಗರ, ಜನವರಿ 10; ಪಾದಯಾತ್ರೆ ನಡೆಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ಗೆ ಕೋವಿಡ್ ಪರೀಕ್ಷೆ ಮಾಡಲು ಬಂದಿದ್ದ ಅಧಿಕಾರಿಗೆ ಕೋವಿಡ್ ಸೋಂಕು ತಗುಲಿದೆ.

ರಾಮನಗರ ಎಡಿಸಿ ಜವರೇಗೌಡರಿಗೆ ಕೋವಿಡ್ ಆಂಟಿಜೆನ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಆರ್‌ಟಿಪಿಸಿಆರ್ ಪರೀಕ್ಷೆಗೆ ಸ್ವ್ಯಾಬ್‌ಗೆ ಕಳಿಸಲಾಗಿದೆ. ಈ ಕುರಿತು ಮಾಧ್ಯಮಗಳಿಗೆ ಅವರು ಮಾಹಿತಿ ನೀಡಿದ್ದಾರೆ.

ಮೇಕೆದಾಟು ಪಾದಯಾತ್ರೆ: ಡಿಕೆಶಿ ಸೇರಿ 30 ಮಂದಿ ವಿರುದ್ಧ ಸಾತನೂರು ಠಾಣೆಯಲ್ಲಿ ಎಫ್ಐಆರ್ ಮೇಕೆದಾಟು ಪಾದಯಾತ್ರೆ: ಡಿಕೆಶಿ ಸೇರಿ 30 ಮಂದಿ ವಿರುದ್ಧ ಸಾತನೂರು ಠಾಣೆಯಲ್ಲಿ ಎಫ್ಐಆರ್

ಎಡಿಸಿ ಜವರೇಗೌಡ 9/1/2022ರಂದು ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ್ದರು. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದರು. ಆದರೆ ಡಿ. ಕೆ. ಶಿವಕುಮಾರ್ ಅವಾಜ್ ಹಾಕಿ ವಾಪಸ್ ಕಳಿಸಿದ್ದರು.

ಮೇಕೆದಾಟು ಪಾದಯಾತ್ರೆ ಆರಂಭ; ಕೋವಿಡ್ ನಿಯಮಗಳು ಗಾಳಿಗೆ ಮೇಕೆದಾಟು ಪಾದಯಾತ್ರೆ ಆರಂಭ; ಕೋವಿಡ್ ನಿಯಮಗಳು ಗಾಳಿಗೆ

Ramanagara ADC Tested Positive For Covid 19

ಮೊದಲ ದಿನದ ಪಾದಯಾತ್ರೆ ಮುಗಿಸಿ ಟೆಂಟ್‌ಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದ ಡಿ. ಕೆ. ಶಿವಕುಮಾರ್‌ರನ್ನು ಎಡಿಸಿ ಜವರೇಗೌಡ ಮತ್ತು ಡಿಎಚ್‌ಓ ನಿರಂಜನ್ ಭೇಟಿ ಮಾಡಿದ್ದರು. ಆಗ ಡಿ. ಕೆ. ಶಿವಕುಮಾರ್ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು.

ವಿಶೇಷ ವರದಿ: 'ಕೈ’ನ ಮೇಕೆದಾಟು ಪಾದಯಾತ್ರೆಗೆ ಅಡ್ಡಗಾಲಾಗಿದ್ದು ಯಾರು?ವಿಶೇಷ ವರದಿ: 'ಕೈ’ನ ಮೇಕೆದಾಟು ಪಾದಯಾತ್ರೆಗೆ ಅಡ್ಡಗಾಲಾಗಿದ್ದು ಯಾರು?

"ನಾನು ಫಿಟ್ ಮತ್ತು ಫೈನ್ ಆಗಿದ್ದೇನೆ. ನನಗೆ ಸಲಹೆ ಕೊಡಲು ಬಂದಿದ್ದೀರಾ?. ನಾನೊಬ್ಬ ಜನಪ್ರತಿನಿಧಿ, ನನಗೆ ಬ್ಲ್ಯಾಕ್​ ​ಮೇಲ್​ ಮಾಡುತ್ತಿದ್ದೀರಾ?. ನೀವು ನಿಮ್ಮ ಆರೋಗ್ಯ ಇಲಾಖೆ ಸಚಿವರಿಗೆ ಹೋಗಿ ಹೇಳಿ. ನನಗೆ ಏನಾಗಿದೆ ಎಂದು ಟೆಸ್ಟ್​ ಮಾಡಲು ಬಂದಿದ್ದೀರಾ?" ಎಂದು ಪ್ರಶ್ನಿಸಿದ್ದರು.

ಡಿ. ಕೆ. ಶಿವಕುಮಾರ್ ಅಧಿಕಾರಿಗಳ ಜೊತೆ ಮಾತನಾಡಿದ ರೀತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಸಚಿವರು ಡಿ. ಕೆ. ಶಿವಕುಮಾರ್ ಮಾತನಾಡಿದ ರೀತಿಗೆ ಪ್ರತಿಕ್ರಿಯೆ ನೀಡಿದ್ದರು.

Recommended Video

2 ಕೋಟಿಗೆ ಮಾರಾಟವಾದ ರತನ್ ಟಾಟಾ ಆತ್ಮಚರಿತ್ರೆ | Oneindia Kannada

ಬಿಜೆಪಿ ಷಡ್ಯಂತ್ರ ಮಾಡುತ್ತಿದೆ; ಕಾಂಗ್ರೆಸ್ ಪಾದಯಾತ್ರೆ ಕುರಿತು ಮಾತನಾಡಿರುವ ಸಂಸದ ಡಿ. ಕೆ. ಸುರೇಶ್, "ನಮ್ಮ ಹೋರಾಟ ನೋಡಿ ಬಿಜೆಪಿ ಷಡ್ಯಂತ್ರ ಮಾಡುತ್ತಿದೆ. ಇದ್ಯಾವುದಕ್ಕೂ ನಾವು ಹೆದರುವುದಿಲ್ಲ. ಇಡಿಗಾದರೂ ಕೊಡಲಿ, ಸಿಬಿಐಗಾದರೂ ಕೊಡಲಿ ನಾವು ಭಯ ಪಡುವುದಿಲ್ಲ. ಮೇಕೆದಾಟುವಿಗಾಗಿ ಹೋರಾಟ ಮಾಡುತ್ತೇವೆ. ಈ ಯೋಜನೆ ಜಾರಿಯಾಗಲೇ ಬೇಕು" ಎಂದು ಹೇಳಿದರು.

English summary
Ramanagara ADC Jaware Gowda who met KPCC president D. K. Shivakumar on January 9 tested positive for Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X