• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮನಗರದಲ್ಲಿ ನಾಪತ್ತೆಯಾಗಿದ್ದ 18ರ ಯುವತಿ ಶವವಾಗಿ ಪತ್ತೆ

By ರಾಮನಗರ, ಪ್ರತಿನಿಧಿ
|

ರಾಮನಗರ, ಅಕ್ಟೋಬರ್.10: ಕಳೆದ ಮೂರು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ಯುವತಿ ಶನಿವಾರ ಶವವಾಗಿ ಪತ್ತೆಯಾದ ಘಟನೆ ರಾಮನಗರ ಜಿಲ್ಲೆ ಬೆಟ್ಟಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪ್ರಿಯಕರನೇ ಕೊಲೆ ಮಾಡಿರುವ ಬಗ್ಗೆ ಮೃತ ಹೇಮಲತಾ ಪೋಷಕರು ಆರೋಪಿಸುತ್ತಿದ್ದಾರೆ.

ರಾಮನಗರ ತಾಲೂಕಿನ ಕುದೂರು ಹೋಬಳಿ ಬೆಟ್ಟಹಳ್ಳಿ ಗ್ರಾಮದ ಕೃಷ್ಣಪ್ಪ ಎಂಬುವವರ ಪುತ್ರಿ ಹೇಮಲತಾ(18) ಅಕ್ಟೋಬರ್.08ರಂದು ಮನೆಯಿಂದ ನಾಪತ್ತೆಯಾಗಿದ್ದರು. ಹೇಮಲತಾ ಕಾಣೆಯಾಗಿರುವ ಬಗ್ಗೆ ಕುದೂರು ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ಸಲ್ಲಿಸಿದ್ದರು.

ಮರ್ಯಾದಾ ಹತ್ಯೆ: ರಾಮನಗರದಲ್ಲಿ ಮಗಳ ಪ್ರೇಮಿಯನ್ನು ಕೊಂದ ತಂದೆ

ಪೋಷಕರು ನೀಡಿದ ದೂರು ದಾಖಲಿಸಿಕೊಂಡ ಕುದೂರು ಪೊಲೀಸರು ತನಿಖೆ ಕೈಗೊಂಡ ಬೆನ್ನಲ್ಲೇ ಕಾಣೆಯಾಗಿದ್ದ ಹೇಮಲತಾ ಗ್ರಾಮದ ಬಳಿಯ ತಮ್ಮ ಸಂಬಂಧಿ ರವೀಂದ್ರ ಕುಮಾರ್ ಎಂಬುವರ ತೋಟದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅಡಿಕೆ ಸಸಿ ನೆಡವುದಕ್ಕಾಗಿ ಗುಂಡಿ ತೋಡುವ ಸಂದರ್ಭದಲ್ಲಿ ಹೇಮಲತಾ ಕಳೆಬರವು ಪತ್ತೆಯಾಗಿದೆ.

   ಹಿಂದು ದೇವಸ್ಥಾನ ಹೊಡಿಯೋ ಅಂತ ಕೆಟ್ಟ ಮನಸ್ಸು ಯಾಕೆ?? | Oneindia Kannada

   ಪ್ರಿಯಕರನ ಮೇಲೆ ಪೋಷಕರ ಅನುಮಾನ:

   ಕುದೂರು ಕಾಲೇಜಿನಲ್ಲಿ ಪ್ರಥಮ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಹೇಮಲತಾ ಅದೇ ಗ್ರಾಮದ ಪುನೀತ್ ಎಂಬಾತನನ್ನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಹೇಮಲತಾ ಕಾಣೆಯಾದ ಅಕ್ಟೋಬರ್.8ರಂದೇ ತಮ್ಮ ಸಂಭಂದಿಕರ ಜಮೀನಿನ ಬಳಿ ಕಾಪಾಡಿ ಎಂದು ಕಿರುಚಾಟದ ಶಬ್ದ ಕೇಳಿದ ಎಂದು ಊರಿನವರು ಹೇಳುತ್ತಿದ್ದಾರೆ. ಅದೇ ಶಬ್ಧವನ್ನು ಕೇಳಿದ ಸಂಬಂಧಿಕರು ರಾತ್ರಿಯಿಡೀ ಹುಡುಕಾಟ ನಡೆಸಿದ್ದಾರೆ.

   ಅಕ್ಟೋಬರ್.09ರಂದು ಹುಡುಗಿ ಪ್ರಿಯಕರ ಪುನೀತ್, ಹೇಮಲತಾ ಪೋಷಕರಿಗೆ ಕರೆ ಮಾಡಿ ನಿಮ್ಮ ಹುಡುಗಿ ಜೋಪಾನವಾಗಿದ್ದಾಳೆ. ಆಕೆಗಾಗಿ ಹುಡುಕಾಟ ಬೇಡ ಎಂದು ಪೋಷಕರಿಗೆ ಹೇಳಿದ್ದೂ ಅಲ್ಲದೇ ನಿಮ್ಮ ಜೊತೆ ಗೌಪ್ಯವಾಗಿ ಮಾತನಾಡಬೇಕು ಎಂದು ಕರೆದಿರುವ ಬಗ್ಗೆ ಪೋಷಕರು ಆರೋಪಿಸುತ್ತಿದ್ದಾರೆ.

   ಅಕ್ಟೋಬರ್.10ರಂದು ಶನಿವಾರ ಬೆಳಗ್ಗೆ ಸ್ಥಳೀಯರು ಹೇಮಲತಾಗಾಗಿ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಜಮೀನಿನ ಪಕ್ಕದಲ್ಲೇ ಹುಡುಗಿಯ ಒಂದು ಚಪ್ಪಲಿ ಸಿಕ್ಕಿದೆ. ಅಕ್ಕಪಕ್ಕದಲ್ಲಿ ಹುಡುಕಾಡಿದಾಗ ರಕ್ತಸಿಕ್ತವಾದ ಕಲ್ಲು ಪತ್ತೆಯಾಗಿದೆ. ಅಲ್ಲಿಂದ ಮುಂದೆ ನೋಡುತ್ತಾ ಹೋದಂತೆ ಹೇಮಲತಾ ಸಂಬಂಧಿ ರವೀಂದ್ರಕುಮಾರ್ ಜಮೀನಿನಲ್ಲೇ ಮೃತದೇಹ ಪತ್ತೆಯಾಗಿದೆ.

   ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ತಪಾಷಣೆ ನಡೆಸಿದ್ದಾರೆ. ರಾಮನಗರ ಉಪ ಜಿಲ್ಲಾಧಿಕಾರಿ ದ್ರಾಕ್ಷಾಯಣಿ, ಮಾಗಡಿ ತಹಸಿಲ್ದಾರ್ ಬಿ.ಕೆ. ಶ್ರೀನಿವಾಸ್‍ಪ್ರಸಾದ್ , ರಾಮನಗರ ಎಎಸ್ ‍ಪಿ .ರಾಮರಾಜ್ ನೇತೃತ್ವದ ಅಧಿಕಾರಿಗಳ ತಂಡವು ಹೇಮಲತಾ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೆಂಗಳೂರಿಗೆ ರವಾನಿಸಿದ್ದಾರೆ.

   English summary
   Ramanagar: 18 Years Old Girl Who Missed Two Days Back, Today Found As Deadbody
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X