ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ; ಮಳೆಗೆ ಗೋಡೆ ಕುಸಿತ, ನಾಲ್ವರಿಗೆ ಗಾಯ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ ಅಕ್ಟೋಬರ್ 20; ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಇತ್ತೀಚಿಗೆ ಸುರಿದ ಬಿರು ಮಳೆಯಿಂದಾಗಿ ಹಳೆಯ ಮನೆಗಳು ಕುಸಿಯುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ.

ನಗರದ ಎಂ. ಜಿ. ರಸ್ತೆಯಲ್ಲಿರುವ ಶಿವನಾಂದ ಥಿಯೇಟರ್ ಸಮೀಪದ ದಿನೇಶ್ ಲ್ಯಾಬ್ ಮುಂಭಾಗದಲ್ಲಿದ್ದ ಹಳೆಯ ಮಂಗಳೂರಿನ ಹೆಂಚಿನ ಮನೆಯ ಗೋಡೆ ಕುಸಿದು ಬಿದ್ದು, ನಾಲ್ವರಿಗೆ ಗಾಯಗಳಾಗಿವೆ.

ರಾಮನಗರ; ಮಳೆಯಿಂದ ಜೀವಕಳೆ ಪಡೆದ ಜಲಾಶಯ, ಕೆರೆ-ಕಟ್ಟೆ ರಾಮನಗರ; ಮಳೆಯಿಂದ ಜೀವಕಳೆ ಪಡೆದ ಜಲಾಶಯ, ಕೆರೆ-ಕಟ್ಟೆ

ಮನೆಯಲ್ಲಿ ಯಾರೂ ವಾಸವಿರಲಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೇ ಮನೆಯ ಸಂಬಂಧ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದ್ದು, ಈಗ ಇತ್ಯರ್ಥವಾಗಿದೆ. ಈ ಹಳೆಯ ಮನೆಯ ಜಾಗವನ್ನು ಕಳೆದ 6 ವರ್ಷಗಳ ಹಿಂದೆ ನಾರಾಯಣ್ ಡಿಜಿಟಲ್ ಸ್ಟುಡಿಯೋ ಮಾಲೀಕರು ಕೊಂಡುಕೊಂಡಿದ್ದರು.

ಮಳೆ ಅಬ್ಬರ; 119 ಅಡಿ ತಲುಪಿದ ಕೆಆರ್‌ಎಸ್ ನೀರಿನ ಮಟ್ಟ ಮಳೆ ಅಬ್ಬರ; 119 ಅಡಿ ತಲುಪಿದ ಕೆಆರ್‌ಎಸ್ ನೀರಿನ ಮಟ್ಟ

Rain House Wall Collapsed At Chennapatna 4 Injured

ದಿನೇಶ್ ಲ್ಯಾಬ್‌ಗೆ ಪರೀಕ್ಷೆಗೆ ಬರುವ ರೋಗಿಗಳು, ಆ ಹಳೆಯ ಮನೆಯ ಮುಂಭಾಗ ಕುಳಿತುಕೊಳ್ಳುವುದು ಅಷ್ಟೇ ಅಲ್ಲದೆ, ಮನೆಯ ಒಳಗಡೆ ಹೋಗಿ ಶೌಚ ಮಾಡುವುದು ನಡೆದಿತ್ತು. ಕಳೆದ ಹಲವು ದಿವಗಳಿಂದ ಮಳೆ ಬಿದ್ದಿದ್ದರಿಂದ ಶಿಥಿಲಾವಸ್ಥೆಗೆ ಬಂದಿದ್ದ ಮನೆ ಸ್ವಲ್ಪವೇ ಸ್ವಲ್ಪವೇ ಬೀಳುತ್ತಿರುವಂತೆ ಕಂಡುಬಂದು ಕೆಲವರು ಓಡಿ ಬಂದಿದ್ದಾರೆ. ಗೋಡೆ ಕುಸಿದು ಬಿದ್ದಿದೆ.

ಅ.24ರವರೆಗೆ ಬೆಂಗಳೂರು ಸೇರಿದಂತೆ ಒಟ್ಟು 16 ಜಿಲ್ಲೆಗಳಲ್ಲಿ ಭಾರಿ ಮಳೆಅ.24ರವರೆಗೆ ಬೆಂಗಳೂರು ಸೇರಿದಂತೆ ಒಟ್ಟು 16 ಜಿಲ್ಲೆಗಳಲ್ಲಿ ಭಾರಿ ಮಳೆ

ತಾಲ್ಲೂಕಿನ ಮಳೂರುಪಟ್ಟಣ ಗ್ರಾಮದ ಯೋಗೇಶ್ ಎಂಬ ಲ್ಯಾಬ್‌ಗೆ ಪರೀಕ್ಷೆಗೆ ಬಂದಿದ್ದ. ಆತ ಫೋನಿನಲ್ಲಿ ಮಾತನಾಡುತ್ತಾ ಮೈ ಮರೆತ್ತಿದ್ದರಿಂದ ಗೋಡೆ ಕುಸಿದು ಬೀಳುವ ಸಂದರ್ಭದಲ್ಲಿ ಓಡಿ ಬರಲು ಸಾಧ್ಯವಾಗದೆ ಅವನ ಹಾಗೂ ಇನ್ನಿತರೆ ಮೂವರು ಗಾಯಗೊಂಡಿದ್ದಾರೆ.

ಗೋಡೆ ಕುಸಿದಿದ್ದರಿಂದ ಯೋಗೇಶ ಹೆಚ್ಚು ಗಾಯಗೊಂಡಿದ್ದು, ಅವರನ್ನು ಮಂಡ್ಯ ಆಸ್ಪತ್ರೆಗೆ ಕಳುಹಿಸ ಲಾಗಿದೆ. ಉಳಿದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದಿದ್ದಾರೆ.

ಈ ಕಟ್ಟಡದ ಅವಶೇಷ ದಲ್ಲಿ ಮತ್ತಷ್ಟು ಜನ ಸಿಕ್ಕಿಕೊಂಡಿರಬಹುದು ಎಂಬ ಸಂಶಯದ ಮೇಲೆ ದಿನೇಶ್ ಲ್ಯಾಬ್‌ನ ಮಾಲೀಕರು, ಜೆಸಿಬಿಯನ್ನು ತರಿಸಿ, ಅವಶೇಷಗಳನ್ನು ತೆರವು ಗೊಳಿಸಿದಾಗ, ಅಂತಹ ಯಾವುದೇ ಘಟನೆಯು ನಡೆದಿಲ್ಲ ಎಂಬುದು ದೃಢವಾಗಿದೆ.

ಘಟನೆ ನಡೆಯುವ ಸಂದರ್ಭದಲ್ಲಿ ತೀರಾ ಹತ್ತಿರದಲ್ಲಿ ಮತ್ತಷ್ಟು ಜನ ಕುಳಿತಿದ್ದರೆ, ಭಾರೀ ಅನಾಹುತವಾಗುವ ಸಾಧ್ಯತೆ ಇತ್ತು. ಗೋಡೆ ಕುಸಿದ ಪ್ರಕರಣದ ಬಗ್ಗೆ ನಗರ ಪೊಲೀಸರು, ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಎಸ್‌ಐ ಮಮತಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು. ಘಟನೆಯ ಬಗ್ಗೆ ಸಮರ್ಪಕ ಮಾಹಿತಿ ಪಡೆದುಕೊಂಡರು. ಸ್ಥಳಕ್ಕೆ ತಹಶೀಲ್ದಾರ್ ನಾಗೇಶ್, ನಗರಸಭೆಯ ಸಿಬ್ಬಂದಿ ಹಾಗೂ ಇತರೆ ಅಧಿಕಾರಿಗಳು ಆಗಮಿಸಿ ಸಾರ್ವಜನಿಕರ ಸಹಾಯದಿಂದ ಕಟ್ಟಡ ಅವಶೇಷ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಾಡಿಕೆಗಿಂತ ಹೆಚ್ಚು ಮಳೆ; ವಾಯುಭಾರ ಕುಸಿತದ ಪರಿಣಾಮ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆ ಹಲವು ಕಡೆ ಅವಾಂತರಗಳನ್ನು ಸೃಷ್ಟಿಸಿದರೆ, ಮತ್ತೊಂದೆಡೆ ಕೆರೆ ಕಟ್ಟೆಗಳು ಮೈದುಂಬಿವೆ. ಜಲಾಶಯಗಳು, ಕೆರೆ ಕಟ್ಟೆಗಳು ಭರ್ತಿಯಾಗಿ ಜೀವ ಕಳೆ ಪಡೆದುಕೊಂಡಿವೆ.

ರಾಮನಗರ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಅಕ್ಟೋಬರ್ 1 ರಿಂದ 16 ರವರೆಗೆ ಜಿಲ್ಲೆಯಲ್ಲಿ 156.8 ಮಿ. ಮೀ. ಮಳೆಯಾಗಿದೆ. ಇದು ವಾಡಿಕೆಗಿಂದ ಶೇ 66ರಷ್ಟು ಅಧಿಕವಾಗಿದೆ. ಇದರಿಂದಾಗಿ ಜಿಲ್ಲೆಯ ಕೆರೆ-ಕಟ್ಟೆಗಳು ಭರ್ತಿಯಾಗಿವೆ.

ಮಾಗಡಿ ತಾಲೂಕಿನ ಮಂಚನಬೆಲೆ, ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಜಲಾಶಯ, ಕಣ್ವ ಜಲಾಶಯಗಳು ತುಂಬಿದ್ದು, ಬಹುತೇಕ ಕೆರೆಕಟ್ಟೆಗಳಲ್ಲಿ ನೀರು ಕಾಣಿಸಿದೆ. ಅಷ್ಟೇ ಅಲ್ಲ ನೀರಿಲ್ಲದೆ ಬತ್ತಿ ಹೋಗಿದ್ದ ನದಿಗಳಲ್ಲೂ ನೀರು ಹರಿಯುತ್ತಿದೆ. ಇದು ರೈತರಲ್ಲಿ ಮಂದಹಾಸ ಮೂಡಿಸಿದೆ.

ರಾಮನಗರ ಪಟ್ಟಣದ ಒಳಗೇ ಇರುವ ರಂಗರಾಯರದೊಡ್ಡಿ ಹಾಗೂ ಬೋಳಪ್ಪನಹಳ್ಳಿ ಕೆರೆಗಳಲ್ಲಿ ಹೆಚ್ಚು ನೀರಿನ ಸಂಗ್ರಹವಿದೆ. ಬಿಡದಿ ಪಟ್ಟಣದ ಜನರ ಜೀವನಾಡಿ ನಲ್ಲಿಗುಡ್ಡ ಕೆರೆ 4 ವರ್ಷಗಳ ನಂತರ ತುಂಬಿದ್ದು, ಕೋಡಿ ಬೀಳುವ ಹಂತ ತಲುಪಿದೆ.

ಚನ್ನಪಟ್ಟಣ ತಾಲೂಕಿನಲ್ಲಿ ಕೂಡ್ಲೂರು ಕೆರೆ ಕೋಡಿ ಬಿದ್ದಿದೆ. ಮತ್ತಿಕೆರೆ ಕೆರೆ ಸಹ ಸದ್ಯದಲ್ಲೇ ಕೋಡಿ ಬೀಳಬಹುದು ಎಂದು ಅಂದಾಜಿಸಲಾಗಿದೆ. ಕನಕಪುರ ತಾಲೂಕಿನ ನಾರಾಯಣಪ್ಪನ ಕೆರೆ, ಹನುಮನಹಳ್ಳಿ ಕೆರೆ, ಹಾರೋಹಳ್ಳಿ ದೊಡ್ಡಕೆರೆಗಳು, ಎಡಮಾರನಹಳ್ಳಿಕೆರೆ ಅರ್ಧ ತುಂಬಿದ್ದು, ಮಾವತ್ತೂರುಕೆರೆ, ಕಗ್ಗಲಹಳ್ಳಿ ಕೆರೆ ಕೋಡಿ ಬೀಳುವ ಹಂತದಲ್ಲಿವೆ.

English summary
Due to heavy rain in Ramanagara district Chennapatna house wall collapsed. Four persons injured in the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X