ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಬೀದಿಯಲ್ಲಿ ಬ್ಯಾರಿಕೇಡ್ ಹತ್ತಿ ಡಾನ್ಸ್ ಮಾಡಬೇಕಿತ್ತೇ? ಕುಮಾರಸ್ವಾಮಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂ24: ಜೆಡಿಎಸ್ ಪಕ್ಷದ ಕುತ್ತಿಗೆ ಕೂಯ್ದದ್ದು ಕಾಂಗ್ರೆಸ್, ನಮ್ಮ ಪಕ್ಷದ ಅಭ್ಯರ್ಥಿಯನ್ನೂ ಸೋಲಿಸಿದ್ದೇ ಕಾಂಗ್ರೆಸ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಬಗ್ಗೆ ಸಾಪ್ಟ್ ಕಾರ್ನರ್ ಆಗಲಿ. ಎರಡು ರಾಷ್ಟ್ರೀಯ ಪಕ್ಷಗಳ ನಡುವಳಿಯನ್ನು ರಾಜ್ಯದ ಜನರ ಮುಂದೆ ಇಟ್ಟು, ಮುಂದಿನ ಚುನಾವಣೆಗೆ ಮತ ಕೇಳುತ್ತೇನೆ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ಅವರು ತಮ್ಮ ಸ್ವಕ್ಷೇತ್ರದಲ್ಲಿ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿದರು ಹಾಗೂ ಒಕ್ಕಲಿಗರ ವಿದ್ಯಾರ್ಥಿ ನಿಲಯ ಸಂಸ್ಥೆಯ ನೂತನ ಐಟಿಐ ಕಾಲೇಜಿನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಹೋರಾಟ ಮಾಡುತ್ತೇನೆ ಯಾವುದೇ ಪಕ್ಷದ ಮೇಲೆ ಸಾಪ್ಟ್ ಕಾರ್ನರ್ ಇಲ್ಲ ಎಂದು ಹೆಚ್ಡಿಕೆ ಸ್ಪಷ್ಟಪಡಿಸಿದರು

ಕೆಂಪೇಗೌಡರ ಹೆಸರಿನಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ: ಅಶ್ವತ್ಥ ನಾರಾಯಣ ಘೋಷಣೆಕೆಂಪೇಗೌಡರ ಹೆಸರಿನಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ: ಅಶ್ವತ್ಥ ನಾರಾಯಣ ಘೋಷಣೆ

ನಾನು ಬೀದೀಲಿ ಬ್ಯಾರಿಕೇಡ್ ಹತ್ತಿ ಡ್ಯಾನ್ಸ್ ಮಾಡೋಕೆ ಹೋಗಬೇಕಾ: ಎಚ್ಡಿಕೆ ವ್ಯಂಗ್ಯ

ನಾನು ಬೀದೀಲಿ ಬ್ಯಾರಿಕೇಡ್ ಹತ್ತಿ ಡ್ಯಾನ್ಸ್ ಮಾಡೋಕೆ ಹೋಗಬೇಕಾ: ಎಚ್ಡಿಕೆ ವ್ಯಂಗ್ಯ

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಇಡಿ ಅಸ್ತ್ರ ಬಳಸುತ್ತಿದೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಯವರ ಹೇಳಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಗ್ಗೆ ಸಾಫ್ಟ್ ಆಗಿದ್ದೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ರಂಗಾದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸಿಗರ ಮೇಲೆ ನಾನ್ಯಾಕೆ ಸಾಫ್ಟ್ ಕಾರ್ನರ್ ಆಗಲಿ ಅವರ ರೀತಿ ನಾನು ಬೀದೀಲಿ ಬ್ಯಾರಿಕೇಡ್ ಹತ್ತಿ ಡ್ಯಾನ್ಸ್ ಮಾಡೋಕೆ ಹೋಗಬೇಕಾ ಎಂದು ವ್ಯಂಗ್ಯ ವಾಡಿದರು.

ನಾನು ಯಾವುದೇ ರೀತಿಯಲ್ಲಿ ಯಾರ ಜೊತೆಯಲ್ಲು ರಾಜಿಯಾಗಲಿ ಅನುಕಂಪದ ಪ್ರಶ್ನೆಯಾಗಲಿ ಇಲ್ಲ. ಇನ್ನು ಬಿಜೆಪಿ ಸರ್ಕಾರ ಯಾವ ರೀತಿ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಐಟಿ,ಇಡಿ, ಸಿಬಿಐ ಸೇರಿದಂತೆ ಸ್ವಾಯತ್ತ ಸಂಸ್ಥೆಗಳು ಯಾವ ರೀತಿ ಕೆಲಸ ಮಾಡುತ್ತಿವೆ ಎಂಬ ವಾಸ್ತವಾಂಶ ತಿಳಿಸಿದ್ದೇನೆ ಅಷ್ಟೇ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ನಾಯಕರನ್ನು ಒಲೈಸಿಕೊಳ್ಳಲು ಈ ಹೇಳಿಕೆ ನೀಡಿಲ್ಲ ಎಂದು ಹೆಚ್ಡಿಕೆ ತಿಳಿಸಿದರು.

ಅಗ್ನಿಪಥ್ ಮೂಲಕ ಸೈನಿಕರನ್ನು ಅರೆಕಾಲಿಕ ಉದ್ಯೋಗಿಗಳನ್ನಾಗಿ ಹೊರಟ ಬಿಜೆಪಿ: ರಾಮಲಿಂಗಾರೆಡ್ಡಿಅಗ್ನಿಪಥ್ ಮೂಲಕ ಸೈನಿಕರನ್ನು ಅರೆಕಾಲಿಕ ಉದ್ಯೋಗಿಗಳನ್ನಾಗಿ ಹೊರಟ ಬಿಜೆಪಿ: ರಾಮಲಿಂಗಾರೆಡ್ಡಿ

ಹೆಸರು ಬಹಿರಂಗ ಮಾಡಲು ನಿರಾಕರಿಸಿದ ಕುಮಾರಸ್ವಾಮಿ

ಹೆಸರು ಬಹಿರಂಗ ಮಾಡಲು ನಿರಾಕರಿಸಿದ ಕುಮಾರಸ್ವಾಮಿ

ರಾಹುಲ್ ಗಾಂಧಿ ಇಡಿ ವಿಚಾರಣೆಯ ಹಿನ್ನೆಲೆಯಲ್ಲಿ ನಾನು ನೀಡಿರುವ ಹೇಳಿಕೆ ಬಿಜೆಪಿ ಸಂಸದ ಮೆಚ್ವುಗೆ ವ್ಯಕ್ತಪಡಿಸಿದ್ದಾರೆ. ಇಂದಿನ ವ್ಯವಸ್ಥೆ ಬಗ್ಗೆ ಸರಿಯಾಗೇ ಜಾಡಿಸಿದ್ದೀರಿ, ನೀವು ಒಬ್ಬರಾದರು ವಾಸ್ತವಾಂಶದ ಬಗ್ಗೆ ಮಾತನಾಡಿದ್ದೀರಿ, ಈ ಸಂಸ್ಥೆಗಳ ಮೂಲಕ ಅಗುತ್ತಿರುವ ಶೋಷಣೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದೀರಿ ಎಂದು ಬಿಜೆಪಿ ಸಂಸದರೇ ನನಗೆ ಪೋನ್ ಮಾಡಿ ಬೆನ್ನುತಟ್ಟಿದ್ದಾರೆ ಎಂದು ತಿಳಿಸಿದರು. ಪೋನ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ ಬಿಜೆಪಿ ಸಂಸದರ ಹೆಸರು ಬಹಿರಂಗ ಮಾಡಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿರಾಕರಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

ಇದು ನಮ್ಮ ವ್ಯವಸ್ಥೆಯ ದುರ್ದೈವವಾಗಿದೆ, ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವಂತದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ನಡೆಯಾಗಿದ್ದ, ಕರ್ನಾಟಕದಂತೆ ಮಹಾರಾಷ್ಟ್ರದಲ್ಲೂ ಸರ್ಕಾರವನ್ನು ಬಿಳಿಸಲು ಹೊರಟಿರುವ ಬಿಜೆಪಿಯ ಈ ಆಟದ ಬಗ್ಗೆ ಇಡೀ ದೇಶಕ್ಕೆ ತಿಳಿದಿದ್ದು, ಮುಂದಿನ ದಿನಗಳಲ್ಲಿ ಈ ನಡೆ ಬಿಜೆಪಿಗೆ ತಿರುಗುಬಾಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಪಕ್ಷಕ್ಕೆ ಕೇಂದ್ರ ಸೇರಿದಂತೆ ರಾಜ್ಯದಲ್ಲಿ ಬೇರೆ ಯಾವ ಪಕ್ಷಗಳು ಅಧಿಕಾರದಲ್ಲಿದ್ದರೆ ಸಹಿಸಲು ಆಗಲ್ಲ. ಹೀಗಾಗಿ ಕರ್ನಾಟಕದ ಸರ್ಕಾರ ನಡೆಯುತ್ತಿದ್ದಾಗ ಮುಂಬೈಗೆ ಶಾಸಕರನ್ನು ಹೈಜಾಕ್ ಮಾಡಿದಂತೆ ಇದೀಗ ಶಿವಸೇನೆ ಶಾಸಕರನ್ನು ಬಿಜೆಪಿ ಹೈಜಾಕ್ ಮಾಡಿದೆ. ಕರ್ನಾಟಕದಲ್ಲಿ ನಡೆದ ನಾಟಕೀಯ ಬೆಳವಣಿಗೆಯ ನೆನಪು ಮತ್ತೆ ಮಹಾರಾಷ್ಟ್ರದಲ್ಲೂ ಕಾಣುತ್ತಿದ್ದು, ಶಾಸಕರು ಹೋಗಬೇಕಾದರೆ ಯಾವ ಆಮಿಷಗಳು ಇರುತ್ತದೆ. ಈ ವಿಷಯ ಪ್ರತಿಯೊಬ್ಬರಿಗೂ ಗೊತ್ತಿದೆ ಆದರೆ ಕಾರಣಗಳು ಬೇರೆ ಬೇರೆ ಕೊಡುತ್ತಾರೆ ಎಂದು ಮಾಜಿ ಸಿಎಂ ಹೆಚ್ಡಿಕೆ ಟೀಕಾಪ್ರಹಾರ ನಡೆಸಿದರು.

ಶಿವಸೇನೆಯ ಭಿನ್ನಮತೀಯ ನಾಯಕ ಹಿಂದೆ ಬಿಜೆಪಿ ನಾಯಕರು

ಶಿವಸೇನೆಯ ಭಿನ್ನಮತೀಯ ನಾಯಕ ಹಿಂದೆ ಬಿಜೆಪಿ ನಾಯಕರು

ಒಕ್ಕಲಿಗರ ವಿದ್ಯಾರ್ಥಿ ನಿಲಯ ಸಂಸ್ಥೆಯ ನೂತನ ಐಟಿಐ ಕಾಲೇಜಿನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಿವಸೇನೆಯ ಭಿನ್ನಮತೀಯ ನಾಯಕ ಏಕನಾಥ್ ಶಿವಸಿಂಧೆ ಏನೇ ಹೇಳಲಿ ಅವರ ಹಿಂದೆ ಬಿಜೆಪಿಯ ನಾಯಕರಿದ್ದಾರೆಂಬುದು ಎಲ್ಲರಿಗೂ ತಿಳಿದಿದೆ. ಅಲ್ಲದೇ ಸಂಖ್ಯಾಬಲದ ಆಧಾರದಲ್ಲಿ ಏಕನಾಥ್ ಶಿಂಧೆ ಶಿವಸೇನೆ ನಮ್ಮದೆಂದು ಇಂದು ಕ್ಲೈಮ್ ಮಾಡಬಹುದು. ಆದರೆ ಚುನಾವಣೆ ಸಂದರ್ಭದಲ್ಲಿ ನಡೆಯುವ ಬೆಳವಣಿಗೆಗಳು ಹಾಗೂ ಶಿವಸೇನೆಯ ಸಂಸ್ಥಾಪಕರು ಮತ್ತು ಯಾರ್ಯಾರು ದೇಣಿಗೆ ನೀಡಿದ್ದಾರೆ. ಜೊತೆಗೆ ಶಿವಸೇನೆ ಕಾರ್ಯಕರ್ತರು ಯಾರ ಜೊತೆಗೆ ನಿಲ್ಲುತ್ತಾರೆ ಎಂಬುದರ ಮೇಲೆ ಶಿವಸೇನೆ ಭವಿಷ್ಯ ನಿರ್ಧಾರವಾಗಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

English summary
Rahul Gandhi Ed Case: Ex Chief Minister hd kumarswamy Equation congress leaders : No soft corner about Rahul Gandhi and Congress party. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X