ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದ್ದಲಕ್ಕೆ ವೇದಿಕೆಯಾದ ರಾಮನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 25: ರಾಮನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ ಎರಡನೇ ದಿನವೂ ಗದ್ದಲದಿಂದ ತುಂಬಿತ್ತು. ಇಂದು ನಡೆಯುತ್ತಿದ್ದ ಸಮ್ಮೇಳನ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಸಾಹಿತ್ಯಾಭಿಮಾನಿಗಳ ಎದುರಲ್ಲೇ ಜಗಳಕ್ಕೆ ಬಿದ್ದ ಘಟನೆ ನಡೆಯಿತು.

ಎರಡನೇ ದಿನದ ವೇದಿಕೆ ಕಾರ್ಯಕ್ರಮದಲ್ಲಿ ಸಮ್ಮೇಳನದ ಅಧ್ಯಕ್ಷರ ಭಾಷಣ ನಡೆಯುತ್ತಿದ್ದ ಸಂದರ್ಭದಲ್ಲಿ ಸಾಹಿತಿ ಚಿಕ್ಕಚನ್ನಯ್ಯ ಧರ್ಮದ ಬಗ್ಗೆ ಅಧ್ಯಕ್ಷರ ನಿಲುವು ಮತ್ತು ಜಿಲ್ಲೆಗೆ ನವ ಬೆಂಗಳೂರು ಎಂದು ಮರು ನಾಮಕರಣ ಮಾಡುವ ವಿಚಾರವಾಗಿ ಪ್ರಶ್ನೆ ಕೇಳಿದಾಗ, ಸಭಿಕರ ಸಾಲಿನಲ್ಲಿ ಕುಳಿತಿದ್ದ ಸಾಹಿತಿ ಎಲ್ಲೇಗೌಡ ಇದಕ್ಕೆ ಅಡ್ಡಿಪಡಿಸಿದರು. ಇದರಿಂದ ಕೆಲ ಕಾಲ ಗದ್ದಲ ಏರ್ಪಟ್ಟಿತ್ತು.

ಅವ್ಯವಸ್ಥೆಯ ಆಗರವಾದ ರಾಮನಗರ ಜಿಲ್ಲಾ ಸಾಹಿತ್ಯ ಸಮ್ಮೇಳನಅವ್ಯವಸ್ಥೆಯ ಆಗರವಾದ ರಾಮನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ

Quarrel In Ramanagar Literature Festival

ಸಮ್ಮೇಳನಾಧ್ಯಕ್ಷರಾದ ಪ್ರೋ.ಎಂ.ಶಿವನಂಜಯ್ಯನವರ ಎದುರೇ ನಡೆದ ಮಾತಿನ ಚಕಮಕಿಯಿಂದ ಕಸಿವಿಸಿಗೊಂಡು ಉತ್ತರ ಕೊಡಲು ಮುಂದಾದ ಸಮ್ಮೇಳನದ ಅಧ್ಯಕ್ಷರಾದ ಪ್ರೋ. ಶಿವನಂಜಯ್ಯನವರಿಗೆ ಸಾಹಿತಿ ಎಲ್ಲೇಗೌಡ ಅವಾಜ್ ಹಾಕಿದರು. ಇದರಿಂದ ಕೆರಳಿದ ಸಮಾರಂಭ ಆಯೋಜಕರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದರು.

English summary
The members of Kannada Sahitya parishat had quarreled in second day of the Ramanagara District Literary fest,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X