ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎಸ್ಐ ಹಗರಣ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಸಂಸದ ಡಿ.ಕೆ. ಸುರೇಶ್ ಆಗ್ರಹ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಏಪ್ರಿಲ್ 27: ನೀವು ಪ್ರಾಮಾಣಿಕರಾಗಿದ್ದರೆ ಪಿಎಸ್ಐ ಸೇರಿದಂತೆ ಇತರೆ ಇಲಾಖೆಗಳಲ್ಲಿ ನಡೆದಿರುವ ಹಗರಣಗಳನ್ನು ಹೈಕೋರ್ಟ್ ಜಡ್ಜ್ ಮೂಲಕ ತನಿಖೆ ನಡೆಸಿ ಎಂದು ಸರ್ಕಾರವನ್ನು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಆಗ್ರಹಿಸಿದರು.

ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಮೇಳವನ್ನು ಉದ್ಘಾಟನೆ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಬಿಜೆಪಿ ಸರ್ಕಾರ ಪಿಎಸ್ಐ ಹಗರಣದ ತನಿಖೆಯನ್ನು ಹಳ್ಳ ಹಿಡಿಸುವ ಕುತಂತ್ರ ಮಾಡುತ್ತಿದೆ ಎಂದು ಆರೋಪಿಸಿದರು.

ಎಡಿಜಿಪಿ ಪೌಲ್ ಎತ್ತಂಗಡಿ: ಪಿಎಸ್ಐ ನೇಮಕಾತಿ ಅಕ್ರಮ ಕಾರಣವೇ?ಎಡಿಜಿಪಿ ಪೌಲ್ ಎತ್ತಂಗಡಿ: ಪಿಎಸ್ಐ ನೇಮಕಾತಿ ಅಕ್ರಮ ಕಾರಣವೇ?

 ಆರೋಪಿಯೊಂದಿಗೆ ಗೃಹ ಸಚಿವರ ಫೋಟೋ ಇದೆ

ಆರೋಪಿಯೊಂದಿಗೆ ಗೃಹ ಸಚಿವರ ಫೋಟೋ ಇದೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಪಿಎಸ್ಐ ಹಗರಣದ ಕಿಂಗ್‌ಪಿನ್ ದಿವ್ಯಾ ಇರುವ ಫೋಟೋ ಬಿಡುಗಡೆ ಮಾಡುವ ಮೂಲಕ ಪ್ರಚಾರ ಗಿಟ್ಟಿಸಿಕೊಂಡು, ಹಗರಣದ ತನಿಖೆಯನ್ನು ದಾರಿ ತಪ್ಪಿಸುವ ಕುತಂತ್ರ ಇದು. ನೀವು ಮಾಡಿರುವ ಹಗರಣಗಳ ತನಿಖೆಯನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಿ ಎಂದು ಸಂಸದ ಡಿ.ಕೆ. ಸುರೇಶ್ ಆಗ್ರಹಿಸಿದ್ದಾರೆ.

ಪಿಎಸ್ಐ ಹಗರಣದ ಆರೋಪಿಯೊಂದಿಗೆ ಬಿಜೆಪಿ ಮುಖಂಡರು ಇರುವ ಫೋಟೋಗಳು ಇವೆ ಅದನ್ನು ಮಾಧ್ಯಮದವರು ಯಾಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದ ಸಂಸದ ಡಿ.ಕೆ. ಸುರೇಶ್, ಆರೋಪಿಯೊಂದಿಗೆ ಗೃಹ ಸಚಿವರ ಫೋಟೋ ಇದೆ. ಅವರಿಗೆ ಏಕೆ ನೋಟಿಸ್ ನೀಡಿಲ್ಲ, ಇದರ ವಿರುದ್ಧ ಮಾಧ್ಯಮಗಳೇ ಧ್ವನಿ ಎತ್ತಿ, ನಾವು ನಿಮ್ಮನ್ನೇ ನಂಬಿ ಕುಳಿತ್ತಿದ್ದೇವೆ ಎಂದರು.

 ಆರೋಪಿಯನ್ನು ಬಂಧಿಸಿದ್ದಾರೆ; ಡಿ.ಕೆ. ಸುರೇಶ್ ಬಾಂಬ್

ಆರೋಪಿಯನ್ನು ಬಂಧಿಸಿದ್ದಾರೆ; ಡಿ.ಕೆ. ಸುರೇಶ್ ಬಾಂಬ್

ಪಿಎಸ್ಐ ಹಗರಣದ ಪ್ರಮುಖ ಆರೋಪಿಯನ್ನು ಈಗಾಗಲೇ ಬಂಧಿಸಿದ್ದಾರೆ, ಅವರಿಂದ ಯಾರ ಯಾರ ಹೆಸರನ್ನು ಹೇಳಿಸಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಹೊಸ ಬಾಂಬ್ ಸಿಡಿಸಿದ್ದಾರೆ.

 ಪ್ರಿಯಾಂಕ್ ಖರ್ಗೆ ಬೆಂಬಲಿಸಿದ ಡಿ.ಕೆ‌. ಸುರೇಶ್

ಪ್ರಿಯಾಂಕ್ ಖರ್ಗೆ ಬೆಂಬಲಿಸಿದ ಡಿ.ಕೆ‌. ಸುರೇಶ್

ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ. ಸುರೇಶ್, ಮೊದಲು ಬಿಜೆಪಿ ಮಂತ್ರಿಗಳಿಗೆ ನೋಟಿಸ್ ನೀಡಬೇಕು. ಪ್ರಿಯಾಂಕ್ ಖರ್ಗೆಯವರು ಈ ರಾಜ್ಯದ ಮಾಜಿ ಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ, ಸಾರ್ವಜನಿಕರ ಬಗ್ಗೆ ಕಳಕಳಿ ಇದೆ. ಹಲವು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಹಾಗಾಗಿ ಹಲವರು ಬಂದು ದೂರು ಮಾಡುವುದು, ಕೆಲವೊಂದು ಮಾಹಿತಿ ನೀಡುವುದು ಸಹಜ, ಜನರು ನೀಡಿದ ಮಾಹಿತಿಯನ್ನು ಮಾಧ್ಯಮಗಳಿಗೆ ತಿಳಿಸುವ ಕೆಲಸ ಮಾಡಿದ್ದಾರೆ ಅಷ್ಟೇ ಎಂದರು.

ಅಪರಾಧದ ಮೂಲ ಹುಡುಕದೆ, ಹೇಳಿಕೆ ನೀಡಿದವರಿಗೆ ನೋಟಿಸ್ ನೀಡುತ್ತೀರಿ ಎಂದರೆ ಇದು ನ್ಯಾಯನಾ? ಇದು ತನಿಖೆಯನ್ನು ದಾರಿ ತಪ್ಪಿಸುವ ವ್ಯವಸ್ಥೆ. ಹಗರಣವನ್ನು ಮುಚ್ಚಿಹಾಕಲು ಪಿತೂರಿ ನಡೆಯುತ್ತಿದೆ. ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಿದ್ದೇವೆ ಎಂದು ಬಿಜೆಪಿ ಪ್ರಚಾರ ತೆಗೆದುಕೊಳ್ಳಲು ಹವಣಿಸುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದರು.

 ತನಿಖಾಧಿಕಾರಿಗಳು ಅವರ ಮನೆಗೆ ತೆರಳಿ ಮಾಹಿತಿ ಕಲೆಹಾಕಲಿ

ತನಿಖಾಧಿಕಾರಿಗಳು ಅವರ ಮನೆಗೆ ತೆರಳಿ ಮಾಹಿತಿ ಕಲೆಹಾಕಲಿ

ಪಿಎಸ್ಐ ನೇಮಕಾತಿ ಹಗರಣದ ತನಿಖೆಗೆ ಪ್ರಿಯಾಂಕ್ ಖರ್ಗೆ ಅವಶ್ಯಕತೆ ಇದ್ದರೆ, ತನಿಖಾಧಿಕಾರಿಗಳು ಅವರ ಮನೆಗೆ ತೆರಳಿ ಅವರಿಂದ ಮಾಹಿತಿಯನ್ನು ಕಲೆಹಾಕಲಿ. ನೋಟಿಸ್ ನೀಡುವ ಮೂಲಕ ತನಿಖೆಯ ವಿಚಾರಗಳನ್ನು ಮರೆಮಾಚುವುದು ಹೊಣೆಗೇಡಿತನದ ಪರಮಾವಧಿ ಇದಕ್ಕೆ ಜನರು ಶೀಘ್ರದಲ್ಲೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಡಿ.ಕೆ. ಸುರೇಶ್ ಹೇಳಿದರು.

ಇನ್ನೂ ಹಳೆ ಮೈಸೂರು ಭಾಗದ ಹಲವು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಬಿಜೆಪಿ ಸೇರುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ. ಸುರೇಶ್, ಬಿಜೆಪಿ ಪಕ್ಷದ ಹಲವು ಮುಖಂಡರು ಕಾಂಗ್ರೆಸ್ ಸೇರುತ್ತಾರೆ. ಚುನಾವಣೆ ಬರಲಿ ಯಾರು ಪಕ್ಷದಿಂದ ಹೊರಹೋಗುತ್ತಾರೆ, ಯಾರು ಬರುತ್ತಾರೆ ನಿಮಗೆ ಎಲ್ಲವೂ ತಿಳಿಯುತ್ತದೆ ಎಂದರು.

English summary
The Government Should investigating scams in other departments, including the PSI, through a High Court judge, Bengaluru Rural MP DK Suresh Urged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X