ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

47 ದಿನ ಪೂರ್ಣಗೊಳಿಸಿದ ಟೊಯೊಟೊ ಕಾರ್ಮಿಕರ ಪ್ರತಿಭಟನೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 26: ಟೊಯೊಟೊ ಕಿರ್ಲೋಸ್ಕರ್ ಮೋಟಾರ್ ಆಡಳಿತ ಮಂಡಳಿಯ ಧೋರಣೆ ಖಂಡಿಸಿ ಕಾರ್ಮಿಕ ನಡೆಸುತ್ತಿರುವ ಹೋರಾಟ 47 ದಿನಗಳನ್ನು ಪೂರ್ಣಗೊಳಿಸಿದೆ. ಶುಕ್ರವಾರದಂದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.

ಟೊಯೊಟೊ ಕಿರ್ಲೋಸ್ಕರ್ ಮೋಟಾರ್ ಕಾರ್ಮಿಕರು ಬೃಹತ್ ಸಂಖ್ಯೆಯಲ್ಲಿ ಹೋರಾಟದ ಭಾಗಿಯಾಗಿ, ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಾಡುಮನೆಯಿಂದ-ಬಿಡದಿವರೆಗೆ ಸುಮಾರು 5 ಕಿ.ಮೀ ಬೃಹತ್ ಮಾನವ ಸರಪಳಿ ನಿರ್ಮಿಸಿ ಟೊಯೊಟೊ ಆಡಳಿತ ವರ್ಗ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ‌ ಆಕ್ರೋಶ ವ್ಯಕ್ತಪಡಿಸಿದರು.

Ramanagara: Protest Continued By Toyota Workers

ಮಷ್ಕರ; ಮತ್ತೆ ಟೊಯೋಟಾದ 5 ಕಾರ್ಮಿಕರು ಅಮಾನತು ಮಷ್ಕರ; ಮತ್ತೆ ಟೊಯೋಟಾದ 5 ಕಾರ್ಮಿಕರು ಅಮಾನತು

ಟೊಯೊಟೊ ಕಾರ್ಮಿಕ ಸಂಘಟನೆ ಮಾನವ ಸರಪಳಿ ಪ್ರತಿಭಟನೆಗೆ HAL ಕಾರ್ಮಿಕ ಸಂಘಟನೆ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಂಪನಿಯ ವ್ಯವಸ್ಥಾಪಕರು ಕಾರ್ಮಿಕ ಕಾನೂನಿಗಳಿಗೆ ಬೆಲೆ ನೀಡುತ್ತಿಲ್ಲ, ಕಾರ್ಮಿಕ ಶೋಷಣೆ ಕೇವಲ ಟೊಯೊಟೊ ಕಂಪನಿ ಮಾತ್ರವಲ್ಲ ಬಹುತೇಕ ಕಂಪನಿಗಳು ಕಾರ್ಮಿಕರನ್ನು ಶೋಷಣೆ ಮಾಡುತ್ತಿವೆ ಎಂದು ಆರೋಪಿಸಿದರು.

Ramanagara: Protest Continued By Toyota Workers

ಮಾನವ ಸರಪಳಿಯ ರಚಿಸಿ ಸರ್ಕಾರ ಮತ್ತು ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ಪ್ರತಿಭಟಮೆಯ ನಂತರ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ನೆಡೆಯುತ್ತಿರುವ JCTU ಕರೆ ನೀಡಿದ್ದ "ದೆಹಲಿ ರೈತ ಚಲೋ' ಅಂದೋಲನಕ್ಕೆ ಟೊಯೊಟೊ ಕಾರ್ಮಿಕ ಸಂಘಟನೆ ಬೆಂಬಲ ನೀಡಿದರು.

Recommended Video

Rewind 2020,Top 20 ಘಟನೆ (Part 2)- ರಾಜ್ಯದ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದ 2020ರ ಘಟನೆಗಳು..! | Oneindia Kannada

English summary
The Workers Protest, which has condemned the attitude of the Toyota Kirloskar Motor Authority, has completed 47 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X