ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಮಿಳುನಾಡಿಗೆ ಅನ್ಯಾಯವಾಗಿದೆ ಎಂದ ರಜನಿಕಾಂತ್ ವಿರುದ್ಧ ಆಕ್ರೋಶ

By ರಾಮನಗರ ಪ್ರತಿನಿಧಿ
|
Google Oneindia Kannada News

Recommended Video

ಕಾವೇರಿ ವಿವಾದದ ತೀರ್ಪು : ಸೂಪರ್ ಸ್ಟಾರ್ ರಜಿನಿಕಾಂತ್ ವಿರುದ್ಧ ಕನ್ನಡಿಗರು ಆಕ್ರೋಶ

ರಾಮನಗರ, ಫೆಬ್ರವರಿ 17: ಕಾವೇರಿ ನದಿ ವಿವಾದದ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ತಮಿಳುನಾಡಿಗೆ ಅನ್ಯಾಯವಾಗಿದೆ ಎಂದ ತಮಿಳು ನಟ ರಜನೀಕಾಂತ್ ಅವರ ಟ್ವೀಟ್ ಇದೀಗ ಕನ್ನಡ ಪರ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.

ಕಾವೇರಿ ತೀರ್ಪು: ತಮಿಳುನಾಡು ರೈತರ ಪರ ನಿಂತ ರಜನೀಕಾಂತ್ಕಾವೇರಿ ತೀರ್ಪು: ತಮಿಳುನಾಡು ರೈತರ ಪರ ನಿಂತ ರಜನೀಕಾಂತ್

ಕಾವೇರಿ ನದಿ ನೀರು ವಿಚಾರವಾಗಿ ಸುಪ್ರೀಂಕೋರ್ಟ್ ಶುಕ್ರವಾರ ಅಂತಿಮ ತೀರ್ಪು ಪ್ರಕಟಿಸಿದೆ ಇದರ ಬೆನ್ನಲ್ಲೇ ತಮಿಳು ನಟ ರಜನಿಕಾಂತ್ ಅವರು ತೀರ್ಪಿನಿಂದ ತಮಿಳುನಾಡಿಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.

Protest against super star Rajinikanth in Ramanagara over Cauvery issue

ಈ ಟ್ವೀಟ್ ಇದೀಗ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದು, ನಾಡದ್ರೋಹಿ ಹೇಳಿಕೆ ಖಂಡಿಸಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ರಜನೀಕಾಂತ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ರಜನೀಕಾಂತ್ ಭಾವಚಿತ್ರ, ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕುತ್ತಿದ್ದಾರೆ. ರಜನೀಕಾಂತ್ ಕ್ಷಮೆ ಕೇಳಬೇಕೆಂದು ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಆಗ್ರಹಿಸಿದ್ದಾರೆ.

English summary
Protest against super star Rajinikanth in Ramanagar over cauvery issue. Earlier Rajinikanth demanded for review petition on Cauvery verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X