ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃ ಭಾಷೆಗೆ ಆದ್ಯತೆ: ಡಿಸಿಎಂ ಅಶ್ವಥ್ ನಾರಾಯಣ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ನವೆಂಬರ್ 1: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಕ್ಕಳು ಮೂರು ಭಾಷೆಯ ಮೇಲೆ ಹಿಡಿತ ಹೊಂದಬೇಕಿದ್ದು, ಮಾತೃ ಭಾಷೆಗೆ ಆದ್ಯತೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ ತಿಳಿಸಿದರು.

ನವೆಂಬರ್ ಒಂದರಂದು ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ 65 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಹಾಗೂ ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅಶ್ವಥ್ ನಾರಾಯಣ ಮಾತನಾಡಿದರು.

ಚುನಾವಣಾ ಆಯೋಗ ಸತ್ತು ಹೋಗಿದೆಯೇ?: ವಾಟಾಳ್ ನಾಗರಾಜ್ಚುನಾವಣಾ ಆಯೋಗ ಸತ್ತು ಹೋಗಿದೆಯೇ?: ವಾಟಾಳ್ ನಾಗರಾಜ್

ಮೂರರಿಂದ ಆರು ವರ್ಷದ ಮಕ್ಕಳಲ್ಲಿ ಶೇ.80 ರಷ್ಟು ಮೆದುಳಿನ ಬೆಳವಣಿಗೆ ಇರುತ್ತದೆ. ಈ ವಯಸ್ಸಿನಲ್ಲಿ‌ ಮಕ್ಕಳು ಹದಿನೈದು ಭಾಷೆಯನ್ನು ಕಲಿಯಲು ಸಾಧ್ಯವಿದೆ. ಮಕ್ಕಳು ಕನ್ನಡ ಭಾಷೆಯೊಂದಿಗೆ ಹೆಚ್ಚಿನ ಭಾಷೆ ಕಲಿತರೆ ಜ್ಞಾನ ವೃದ್ಧಿಯಾಗುತ್ತದೆ. ಕಲಿಕೆಯಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಬಹುದು ಎಂದರು.

ಭಾಷಾ ಕಲಿಕೆಗೆ ತಂತ್ರಜ್ಞಾನದ ಕೊಡುಗೆ

ಭಾಷಾ ಕಲಿಕೆಗೆ ತಂತ್ರಜ್ಞಾನದ ಕೊಡುಗೆ

ಭಾಷಾಂತರ ಹಾಗೂ ಕನ್ನಡ ಭಾಷೆಯನ್ನು ಇಂದು ತಂತ್ರಜ್ಞಾನದ ಮೂಲಕ ಸುಲಭವಾಗಿ ಕಲಿಯಬಹುದಾಗಿದೆ ಎಂದು ತಿಳಿಸಿದ ಡಿಸಿಎಂ, ಹೆಚ್ಚಿನ ಜನರು ಇಂದು ತಂತ್ರಜ್ಞಾನವನ್ನು ಬಳಸುತ್ತಾರೆ. ತಂತ್ರಜ್ಞಾನ ಬಳಸಿ ದೇಶದ ಯಾವುದೇ ಭಾಗದ ಭಾಷೆಯನ್ನು ಕನ್ನಡದಲ್ಲಿ ಭಾಷಾಂತರ ಮಾಡಿ ತಿಳಿದುಕೊಳ್ಳಬಹುದು. ಬೇರೆ ಭಾಷೆ ವ್ಯಕ್ತಿಯೊಂದಿಗೆ ಭಾಷಾಂತರ ಮಾಡಿ ಮಾತನಾಡಬಹುದು. ವಿವಿಧ ಭಾಷೆಯ ಪುಸ್ತಕಗಳನ್ನು ಡಿಜಿಟಲೈಸ್ ಮಾಡಿದರೆ ತಿಳಿದುಕೊಂಡು ಜ್ಞಾನ ಹಾಗೂ ಭಾಷೆಯನ್ನು ಅಭಿವೃದ್ಧಿಗೊಳಿಸಬಹುದು ಎಂದರು.

ಕಣ್ಣಿನ ತಪಾಸಣೆ

ಕಣ್ಣಿನ ತಪಾಸಣೆ

ಎಸಿಲಾರ್ ವಿಷನ್ ಫೌಂಡೇಶನ್ ಅವರ ವತಿಯಿಂದ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಗೆ ಹಮ್ಮಿಕೊಳ್ಳಲಾಗಿರುವ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮದ ಅಂಗವಾಗಿ ಉಪ ಮುಖ್ಯಮಂತ್ರಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಸಿ.ಎನ್ ಅಶ್ವಥ್ ನಾರಾಯಣ ಅವರು ಇದೇ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಗೆ ಕನ್ನಡಕ ವಿತರಿಸಿದರು.

ಎಂಇಎಸ್ ನವರು ತಮ್ಮ ಭಾವನೆ ವ್ಯಕ್ತಪಡಿಸಲು ಸ್ವತಂತ್ರರು

ಎಂಇಎಸ್ ನವರು ತಮ್ಮ ಭಾವನೆ ವ್ಯಕ್ತಪಡಿಸಲು ಸ್ವತಂತ್ರರು

ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಕರಾಳ ದಿನಾಚರಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ಅವರು ಪ್ರತಿ ವರ್ಷ ಇದೇ ರೀತಿ ಮಾಡುತ್ತಿದ್ದಾರೆ ಅವರು ಸ್ವತಂತ್ರರು, ಅವರ ಭಾವನೆ ವ್ಯಕ್ತಪಡಿಸಿದ್ದಾರೆ ಎನ್ನುವ ಮೂಲಕ ವಿವಾದಿತ ಹೇಳಿಕೆ ನೀಡಿದರು.

ಎಂಇಎಸ್ ಏನೇ ಕಿತಾಪತಿ ಮಾಡಿದರೂ, ಗಡಿ ಭಾಗದಲ್ಲಿ ಕನ್ನಡತನ ಹೆಚ್ಚಿಸಿಲು ಎಲ್ಲಾ ಪ್ರಯತ್ನ ನಡೆದಿದೆ ಎಂದು ಡಿಸಿಎಂ ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.

ಬಿಜೆಪಿ ಅಭ್ಯರ್ಥಿಗಳ ಗೆಲವು ಖಚಿತ

ಬಿಜೆಪಿ ಅಭ್ಯರ್ಥಿಗಳ ಗೆಲವು ಖಚಿತ

ಶಿರಾ ಮತ್ತು ರಾಜರಾಜೇಶ್ವರಿ ನಗರ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲವು ಖಚಿತ. ಎರಡು ಕ್ಷೇತ್ರದ ಮತದಾರರ ಒಲವು ಬಿಜೆಪಿಗೆ ಇದೆ. ಎರಡು ಪಕ್ಷಗಳಿಗೆ ಮತ ನೀಡುವುದು ಪ್ರಯೋಜನವಿಲ್ಲ ಎಂದು ತಿಳಿದಿದ್ದಾರೆ. ಹಾಗಾಗಿ ನಮ್ಮ ಗೆಲವು ಖಚಿತ ಎಂದು ಅಶ್ವಥ್ ನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.

ರಾಜರಾಜೇಶ್ವರಿ ಕ್ಷೇತ್ರದಲ್ಲಿ ಎರಡು ಬಾರಿ ಗೆಲವು ಕಂಡಿರುವ ಮುನಿರತ್ನ ಮೂರನೇ ಬಾರಿಯು ಗೆಲವು ಸಾಧಿಸಲಿದ್ದಾರೆ. ಈ ಬಾರಿ ಸಣ್ಣ ಅಂತರವಲ್ಲ, ದೊಡ್ಡ ಅಂತರ. ಕಳೆದ ಬಾರಿ 20 ಸಾವಿರ ಮತಗಳಿಂದ ಜಯಶಾಲಿಯಾಗಿದ್ದರು. ಈ ಬಾರಿ ಸುಮಾರು 70 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಲಿದ್ದಾರೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಭವಿಷ್ಯ ನುಡಿದರು.

English summary
Deputy Chief Minister Dr CN Ashwath Narayana said that in the national education policy, children should have control over three languages ​​and mother tongue is preferred.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X