ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು ಇಡಿಯಿಂದ ಡಿಕೆಶಿ ತಾಯಿ ಗೌರಮ್ಮ ವಿಚಾರಣೆ: ಮನೆಗೆ ಪೊಲೀಸ್ ಭದ್ರತೆ

By ರಾಮನಗರ ಪ್ರತಿನಿಧಿ
|
Google Oneindia Kannada News

Recommended Video

ಬಿಗಿ ಬಂದೋಬಸ್ತ್ ನಡುವೆ ವಿಚಾರಣೆ | DK Shivakumar | Gowramma | Oneindia kannada

ರಾಮನಗರ, ಫೆಬ್ರವರಿ 11: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮನವರನ್ನು ಇಂದು ಜಾರಿ ನಿರ್ದೇಶನಾಲಯ ತಂಡ ವಿಚಾರಣೆಗೆ ಒಳಪಡಿಸುವ ಹಿನ್ನಲೆಯಲ್ಲಿ ಕೋಡಿಹಳ್ಳಿ ಗ್ರಾಮದಲ್ಲಿರುವ ಸಂಸದ ಸುರೇಶ್ ಮನೆಗೆ ಪೋಲೀಸರು ವ್ಯಾಪಕ ಭದ್ರತೆ ನೀಡಿದ್ದಾರೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮಕ್ಕೆ ಐದು ಅಧಿಕಾರಿಗಳ ಆಗಮಿಸಿದೆ. ಐದು ಮಂದಿ‌ ಅಧಿಕಾರಿಗಳು ಎರಡು ಕಾರಿನಲ್ಲಿ ಬಂದಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಡಿ. ಕೆ. ಶಿವಕುಮಾರ್ ಜಂಘಾಬಲವನ್ನೇ ಅಡಗಿಸಿದ ಇಡಿ ಸಲ್ಲಿಸಿದ ರಾಶಿರಾಶಿ ದಾಖಲೆ!ಡಿ. ಕೆ. ಶಿವಕುಮಾರ್ ಜಂಘಾಬಲವನ್ನೇ ಅಡಗಿಸಿದ ಇಡಿ ಸಲ್ಲಿಸಿದ ರಾಶಿರಾಶಿ ದಾಖಲೆ!

ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ, ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ರವರ ತಾಯಿ ಗೌರಮ್ಮ ವಯಸ್ಸಾದ ಕಾರಣ ಅವರನ್ನು ಅವರ ಮನೆಯಲ್ಲೇ ವಿಚಾರಣೆ ನಡೆಸುವಂತೆ ಇಡಿಗೆ ಹೈಕೋರ್ಟ್ ಡಿಸೆಂಬರ್ 18, 2019 ರಂದು ನೀಡಿದ ಅದೇಶದ ಮೇರೆಗೆ ಇಂದು ವಿಚಾರಣೆ ನಡೆಸಲು ಕೋಡಿಹಳ್ಳಿ ಗ್ರಾಮಕ್ಕೆ ಬಂದಿದ್ದಾರೆ.

Police Security To DK Shivakumar Home On Behalf Of ED Inquiry

ಗೌರಮ್ಮ ನವರನ್ನು ಇಡಿ ವಿಚಾರಣೆಯ ಸಮಯದಲ್ಲಿ ಖುದ್ದಾಗಿ ಹಾಜರಿರಲು ಈಗಾಗಲೇ ಡಿ.ಕೆ.ಶಿವಕುಮಾರ್ ಸಹೋದರ ಸಂಸದ ಡಿ.ಕೆ.ಸುರೇಶ್ ಹಾಗೂ ಕುಟುಂಬ ಸದಸ್ಯರು ಇಂದು ಬೆಳಿಗ್ಗೆ ಕೋಡಿಹಳ್ಳಿ ನಿವಾಸಕ್ಕೆ ಅಗಮಿಸಿದ್ದು, ಕುಟುಂಬ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರಿಗೂ ಒಳ ಪ್ರವೇಶಿಸದಂತೆ ಪೊಲೀಸರು ಗೇಟ್ ಬಂದ್ ಮಾಡಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೋಲೀಸ್ ಬಂದೋಬಸ್ತ್ ಒದಗಿಸಿದ್ದಾರೆ.

Police Security To DK Shivakumar Home On Behalf Of ED Inquiry

ಡಿ.ಕೆ.ಶಿವಕುಮಾರ್ ವಿರುದ್ಧ ರಾಶಿಗಟ್ಟಲೆ ಸಾಕ್ಷ್ಯ ನೀಡಿದ ಇಡಿಡಿ.ಕೆ.ಶಿವಕುಮಾರ್ ವಿರುದ್ಧ ರಾಶಿಗಟ್ಟಲೆ ಸಾಕ್ಷ್ಯ ನೀಡಿದ ಇಡಿ

ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ಅವರ ವಿಚಾರಣೆ ಹಿನ್ನಲೆಯಲ್ಲಿ, ಒಬ್ಬ ಡಿವೈಎಸ್ಪಿ, ಇಬ್ಬರು ಸರ್ಕಲ್ ಇನ್ಸ್ ಪೆಕ್ಟರ್, ಐದು ಸಬ್ ಇನ್ಸ್ ಪೆಕ್ಟರ್, ಕೆಎಸ್ ಆರ್ ಪಿ ತುಕಡಿ ಸೇರಿದಂತೆ 100 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

English summary
Police have given security to MP DK Suresh home in Kodihalli village in the backdrop of DK Shivakumar mother Gauramma being interrogated by the Enforcement Directorate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X